ನವದೆಹಲಿ: ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್‌ನಲ್ಲಿ 2022-23ರಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ-CBDC ಡಿಜಿಟರ್ ರೂಪಾಯಿ ಜಾರಿಗೆ ತರಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಣೆ ಮಾಡಿದ್ದಾರೆ.
ಸಿಬಿಡಿಸಿ ಬಿಡುಗಡೆ ಮಾಡುವವರು ಯಾರು?ಮುಂದಿನ ಆರ್ಥಿಕ ವರ್ಷದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಆರ್‌ಬಿಐ ಸಿಬಿಡಿಸಿಯನ್ನು ಬಿಡುಗಡೆ ಮಾಡಲಿದೆ. ಬ್ಲಾಕ್‌ಚೈನ್ ತಂತ್ರಜ್ಞಾನದ ನೆರವಿನಿಂದ ಸಿಬಿಡಿಸಿಯನ್ನು ತರಲಾಗುತ್ತಿದೆ.
ಸಿಬಿಡಿಸಿ ಎಂದರೇನು?ಸಿಬಿಡಿಸಿ ಎಂಬುದು ಡಿಜಿಟಲ್ ರೂಪದಲ್ಲಿ ಕೇಂದ್ರ ಬ್ಯಾಂಕ್ ನೀಡುವ ಕಾನೂನುಬದ್ಧ ಕರೆನ್ಸಿಯಾಗಿದೆ. ಇದು ಕಾಗದದಲ್ಲಿ ನೀಡಲಾದ ಒಪ್ಪಿತ ಕರೆನ್ಸಿಯಂತೆಯೇ ಇರುತ್ತದೆ. ಆದರೆ ಯಾವುದೇ ಇತರ ಒಪ್ಪಿತ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
ಸಿಬಿಡಿಸಿಯ ಅವಶ್ಯಕತೆ ಏನು?ಇನ್ವೆಸ್ಟೋಪೀಡಿಯಾ ಪ್ರಕಾರ, ಬಳಕೆದಾರರಿಗೆ ಅನುಕೂಲತೆ ಮತ್ತು ಡಿಜಿಟಲ್ ಸುರಕ್ಷತೆಯನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ನಿಯಂತ್ರಿತ, ಮೀಸಲು-ಬೆಂಬಲಿತ ಚಲಾವಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಬಜೆಟ್‌ನಲ್ಲೇ ಘೋಷಿಸಿದ ಉದ್ದೇಶವೇನು?ಕ್ರಿಪ್ಟೋಕರೆನ್ಸಿಗಳು ಮತ್ತು ಇತರ ವರ್ಚುವಲ್ ಕರೆನ್ಸಿಗಳ ಬಗ್ಗೆ ಸರ್ಕಾರ ತನ್ನ ಉದ್ದೇಶವನ್ನು ವ್ಯಕ್ತಪಡಿಸಿದೆ. ಆರ್‌ಬಿಐ ಹಲವಾರು ಸಂದರ್ಭಗಳಲ್ಲಿ ಬಿಟ್‌ಕಾಯಿನ್, ಈಥರ್ ಮುಂತಾದ ಖಾಸಗಿ ಕ್ರಿಪ್ಟೋಕರೆನ್ಸಿಗಳೊಂದಿಗೆ ಮನಿ ಲಾಂಡರಿಂಗ್, ಭಯೋತ್ಪಾದಕರಿಗೆ ಹಣ ಪೂರೈಕೆ, ತೆರಿಗೆ ವಂಚನೆ ಇತ್ಯಾದಿ ಕಳವಳದ ಕೃತ್ಯಗಳ ತಡೆಗೆ ಮುಂದಾಗಿದೆ. ಹೀಗಾಗಿ ತಮ್ಮದೇ ಸಿಬಿಡಿಸಿಯನ್ನು ಘೋಷಿಸಲು ಯೋಜನೆ ರೂಪಿಸಿದೆ.
ಜನರಲ್ಲಿ ಸಿಬಿಡಿಸಿ ಏನು ಬದಲಾಣೆ ತರಬಹುದು?ಡಿಜಿಟಲ್ ರೂಪಾಯಿಗಳಿಂದ ಹೇಗೆ ವಹಿವಾಟು ಮಾಡಬಹುದು ಎಂಬುದರ ಕುರಿತ ಹಲವಾರು ಮಾದರಿಗಳನ್ನು ತಜ್ಞರು ಪ್ರಸ್ತಾಪಿಸಿದ್ದಾರೆ. ಆದರೆ ನಾಗರಿಕರು ಡಿಜಿಟಲ್ ರೂಪಾಯಿಯನ್ನು ಹೇಗೆ ವಹಿವಾಟು ನಡೆಸಬೇಕು ಎಂಬುದರ ಬಗ್ಗೆ ಅತಿ ಶೀಘ್ರದಲ್ಲಿ ಆರ್‌ಬಿಐ ವಿವರಿಸಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ