ಕರ್ನಾಟಕ

karnataka

ETV Bharat / business

ರಸಗೊಬ್ಬರ, ಕಲ್ಲಿದ್ದಲು ಹೊರತುಪಡಿಸಿ ಉಳಿದ ಕ್ಷೇತ್ರಗಳ ಬೆಳವಣಿಗೆ ಸತತ 6ನೇ ತಿಂಗಳು ಕುಸಿತ - ಎಂಟು ಪ್ರಮುಖ ಕ್ಷೇತ್ರಗಳ ಉತ್ಪಾದನೆ

ಆಗಸ್ಟ್ 2019ರಲ್ಲಿ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇ.0.2ರಷ್ಟು ಸಂಕುಚಿತಗೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದೆ..

Eight core industries
ಉತ್ಪಾದನೆ

By

Published : Sep 30, 2020, 8:10 PM IST

ನವದೆಹಲಿ :ಕಚ್ಚಾ ತೈಲ, ನೈಸರ್ಗಿಕ ಅನಿಲ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಸತತ 6ನೇ ತಿಂಗಳು ಸಹ ಕುಸಿತ ದಾಖಲಾಗಿದೆ.

ಆಗಸ್ಟ್‌ನಲ್ಲಿ ದೇಶದ ಎಂಟು ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳ ಉತ್ಪಾದನೆಯು ಶೇ.8.5ರಷ್ಟು ಕುಸಿದಿದೆ. ಮುಖ್ಯವಾಗಿ ಉಕ್ಕು, ಸಂಸ್ಕರಣಾ ಉತ್ಪನ್ನಗಳು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಈ ಇಳಿಕೆ ಸಂಭವಿಸಿದೆ.

ಆಗಸ್ಟ್ 2019ರಲ್ಲಿ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇ.0.2ರಷ್ಟು ಸಂಕುಚಿತಗೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದೆ. ಕಲ್ಲಿದ್ದಲು ಮತ್ತು ರಸಗೊಬ್ಬರ ಹೊರತುಪಡಿಸಿ ಉಳಿಕದ ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಋಣಾತ್ಮಕ ಬೆಳವಣಿಗೆ ದಾಖಲಿಸಿವೆ.

2020-21ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಕ್ಷೇತ್ರಗಳ ಉತ್ಪಾದನೆಯು ಶೇ.17.8ರಷ್ಟು ಕುಸಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ. 2.5ರಷ್ಟು ಬೆಳವಣಿಗೆ ಕಂಡು ಬಂದಿತ್ತು.

For All Latest Updates

ABOUT THE AUTHOR

...view details