ಕರ್ನಾಟಕ

karnataka

ETV Bharat / business

'ಚಿಂಪಾಂಜಿ', 'ಕಪಿ'ಗಳನ್ನೂ ಬಿಡದ 'ಇಡಿ'ಯ ಹಣ ಅಕ್ರಮ ವರ್ಗಾವಣೆ ಕೇಸ್! ನಡೆದಿದ್ದೇನು? - ಮನಿ ಲಾಂಡರಿಂಗ್

ಇಡಿ ಅನ್ವಯ, ಮೂರು ಚಿಂಪಾಂಜಿ ಮತ್ತು ಮಾರ್ಮೊಸೆಟ್​ ಕಪಿಗಳನ್ನು ಪ್ರಸ್ತುತ ಕೋಲ್ಕತ್ತಾದ ಅಲಿಪೋರ್ ಜೈವಿಕ ಉದ್ಯಾನದಲ್ಲಿ ಇರಿಸಲಾಗಿದೆ. ಉದ್ಯಾನಕ್ಕೆ ಬೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಮೃಗಾಲಯಕ್ಕೆ ಆದಾಯದ ಮೂಲವಾಗಿವೆ. 'ಇವುಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972 ಅಡಿ ನಿಷೇಧಿತ ವನ್ಯಜೀವಿಗಳ ವಶಪಡಿಸಿಕೊಳ್ಳುವಿಕೆ ಕಾಯ್ದೆಯನ್ನು ಉಲ್ಲಂಘಿಸಿ ಕರೆ ತರಲಾಗಿದೆ ಎಂಬ ಅರಣ್ಯ ಇಲಾಖೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ

By

Published : Sep 21, 2019, 11:03 PM IST

Updated : Sep 21, 2019, 11:57 PM IST

ಕೋಲ್ಕತ್ತಾ: ಅಕ್ರಮ ಹಣ ವರ್ಗಾವಣೆ ವಹಿವಾಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಮೂರು ಚಿಂಪಾಂಜಿ ಮತ್ತು ನಾಲ್ಕು ಮಾರ್ಮೊಸೆಟ್ ಕಪಿಗಳನ್ನೂ ಪ್ರಕರಣದಲ್ಲಿ ದಾಖಲಿಸಿಕೊಂಡಿದೆ.

ಇಡಿ ಅನ್ವಯ, ಮೂರು ಚಿಂಪಾಂಜಿ ಮತ್ತು ಮಾರ್ಮೊಸೆಟ್​ ಕಪಿಗಳನ್ನು ಪ್ರಸ್ತುತ ಕೋಲ್ಕತ್ತಾದ ಅಲಿಪೋರ್ ಜೈವಿಕ ಉದ್ಯಾನದಲ್ಲಿ ಇರಿಸಲಾಗಿದೆ. ಉದ್ಯಾನಕ್ಕೆ ಬೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಮೃಗಾಲಯಕ್ಕೆ ಆದಾಯದ ಮೂಲವಾಗಿವೆ. 'ಇವುಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿ ನಿಷೇಧಿತ ವನ್ಯಜೀವಿಗಳ ವಶಪಡಿಸಿಕೊಳ್ಳುವಿಕೆ ಕಾಯ್ದೆಯನ್ನು ಉಲ್ಲಂಘಿಸಿ ಕರೆತರಲಾಗಿದೆ ಎಂಬ ಅರಣ್ಯ ಇಲಾಖೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರದ ವನ್ಯಜೀವಿ ಇಲಾಖೆಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪ್ರತಿ ಚಿಂಪಾಂಜಿಯ ಮೌಲ್ಯವು ₹ 25,00,000 ಮತ್ತು ಮಾರ್ಮೊಸೆಟ್‌ನ ಬೆಲೆ ₹ 1,50,000 ಎಂದು ಅಂದಾಜಿಸಿದೆ. ಆ ಮೂಲಕ ಒಟ್ಟು ₹ 81,00,000 ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಿ ಮನಿ ಲಾಂಡರಿಂಗ್​ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ.

ನಿಷೇಧಿತ ಭಾರತೀಯ ವನ್ಯಜೀವಿಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ಸುಪ್ರದೀಪ್​ ಗುಹಾ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 51 ಜೊತೆಗೆ ಸೆಕ್ಷನ್ 9, 39, 44, 48, 49 ಸೆಕ್ಷನ್‌ಗಳಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಗುಹಾ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಅನುಮತಿ ಪತ್ರವನ್ನು ಬಳಸಿರುವುದು ತನಿಖೆಯಿಂದ ತಿಳಿದುಬಂದಿದ್ದು, ವನ್ಯಜೀವಿ ಕಳ್ಳಸಾಗಣೆ ದಂಧೆ ನಡೆಸಿದ್ದಾರೆ ಎಂಬ ಆರೋಪ ಸಹ ಇದೆ.

Last Updated : Sep 21, 2019, 11:57 PM IST

ABOUT THE AUTHOR

...view details