ಕರ್ನಾಟಕ

karnataka

ETV Bharat / business

ವಿತ್ತೀಯ ಚಿಂತೆ ಬೇಡ, 'ಮುಂದಿನ ವರ್ಷದಿಂದ ಆರ್ಥಿಕತೆ ಪುಟಿದೇಳುತ್ತೆ': SBI ಮುಖ್ಯಸ್ಥರ ಅಭಯ

ಆರ್ಥಿಕತೆಯು ಕುಸಿತದಿಂದ ಹೊರಬರಲು ಸ್ಥಿತಿಸ್ಥಾಪಕತ್ವ ಗುಣ ತೋರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಕೆಲವು ಸಕಾರಾತ್ಮಕ ಎಳೆಗಳು ಕಂಡು ಬಂದಿವೆ ಎಂದು ಎಸ್​​ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದರು.

SBI chairman
ದಿನೇಶ್ ಕುಮಾರ್ ಖಾರಾ

By

Published : Nov 7, 2020, 5:15 PM IST

ಕೋಲ್ಕತ್ತಾ: ಕೋವಿಡ್​-19 ಸಾಂಕ್ರಾಮಿಕದಿಂದ ಕುಸಿತಕ್ಕೆ ಒಳಗಾದ ಆರ್ಥಿಕತೆ ಹೊರ ಬರಲು ಸ್ಥಿತಿಸ್ಥಾಪಕತ್ವ ಗುಣ ಪ್ರದರ್ಶಿಸುತ್ತಿದೆ. ಮುಂದಿನ ಹಣಕಾಸು ವರ್ಷದಿಂದ ದೇಶದ ಆರ್ಥಿಕತೆಯು ಮತ್ತೆ ಪುಟಿದೇಳುವ ನಿರೀಕ್ಷೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ.

ಬಂಗಾಳ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ವಾಸ್ತವ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಖರಾ, ಆರ್ಥಿಕ ಮಾದರಿಗಳ ವೆಚ್ಚ ನಿಯಂತ್ರಣ ಕಲಿಯುವುದರ ಜೊತೆಗೆ ಮಾದರಿಯಾದ ವರ್ಗಾವಣೆಯು ಹೆಚ್ಚು ಪ್ರಬುದ್ಧ ಆರ್ಥಿಕತೆಗೆ ಕಾರಣವಾಗುತ್ತದೆ ಎಂದರು.

2021ರ ಏಪ್ರಿಲ್​ನಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದಿಂದ ಆರ್ಥಿಕತೆಯು ಮತ್ತೆ ಪುಟಿಯುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯವಾದ ಒಂದೇ ಮಾದರಿ ಬದಲಾವಣೆ ಎದುರು ನೋಡುತ್ತಿದ್ದೇವೆ. ಅವುಗಳಲ್ಲಿ ಕೆಲವು ಶಾಶ್ವತವಾಗಿ ಇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆರ್ಥಿಕತೆಯು ಕುಸಿತದಿಂದ ಹೊರಬರಲು ಸ್ಥಿತಿಸ್ಥಾಪಕತ್ವ ಗುಣ ತೋರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಕೆಲವು ಸಕಾರಾತ್ಮಕ ಎಳೆಗಳು ಕಂಡುಬಂದವು ಎಂದರು.

ಸರಾಸರಿ ಸಾಮರ್ಥ್ಯದ ಬಳಕೆ ಶೇ 69ರಷ್ಟಿದೆ. ಕಾರ್ಪೊರೇಟ್​ನಿಂದ ಹೂಡಿಕೆಯ ಬೇಡಿಕೆ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಗದು ಸಮೃದ್ಧತೆ ಸಾರ್ವಜನಿಕ ವಲಯದ ಉದ್ಯಮಗಳು ಆರಂಭದಲ್ಲಿ ಬಂಡವಾಳ ವೆಚ್ಚದ ಯೋಜನೆ ಕೈಗೊಳ್ಳಲಿದ್ದು, ಅದು ಹೂಡಿಕೆಯ ಬೇಡಿಕೆ ಉಂಟುಮಾಡುತ್ತದೆ ಎಂದು ಖರಾ ಹೇಳಿದರು.

ಕಾರ್ಪೊರೇಟ್ ವಲಯವು ಸಾಲಗಳ ಬಗ್ಗೆ ಬಹಳ ಜಾಗರೂಕರಾಗಿರುತ್ತವೆ. ಅವರ ಆಂತರಿಕ ಸಂಪನ್ಮೂಲಗಳನ್ನು ಆರಂಭದಲ್ಲಿ ಬಳಸುತ್ತಿದ್ದಾರೆ. ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಾದ ಸ್ಟೀಲ್ ಮತ್ತು ಸಿಮೆಂಟ್ 2020ರ ಏಪ್ರಿಲ್​ನಿಂದ ಪ್ರಾರಂಭವಾಗುವ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ABOUT THE AUTHOR

...view details