ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಬಳಿಕ ತಮ್ಮ ಸರ್ಕಾರ ಕೈಗೊಂಡ ಹಣಕಾಸಿನ ಮತ್ತು ಸುಧಾರಣಾ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ವಿತ್ತ ತಜ್ಞರ ಮುಂದಿಟ್ಟರು.
2021-22 ರ ಬಜೆಟ್ ತಯಾರಿ ಮತ್ತು ಕೋವಿಡ್ ಬಳಿಕದ ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬೇಕಾದ ನಡೆಗಳ ಕುರಿತು ಪ್ರಧಾನಿ ಆರ್ಥಿಕ ಚಿಂತಕರು ಹಾಗೂ ಉದ್ಯಮಿಗಳ ಜತೆ ಸಭೆ ನಡೆಸಿದರು. ಖಾಸಗೀಕರಣ ಮುಂದೂಡಿಕೆ, ಅಂತಾರಾಷ್ಟ್ರೀಯ ಮಧ್ಯಸ್ಥಿಕಯೆ ಸವಾಲುಗಳ ನಿವಾರಣೆ ಮತ್ತು ಮೂಲಸೌಕರ್ಯ ವೆಚ್ಚ ಹೆಚ್ಚಳ ಬಗ್ಗೆಯೂ ಹಣಕಾಸು ಚಿಂತಕರೊಂದಿಗೆ ಚರ್ಚಿಸಿದರು.
ಸಾಂಕ್ರಾಮಿಕ ಪೀಡಿತ ಆರ್ಥಿಕತೆ ಪುನರುಜ್ಜೀವನಗೊಳಿಸುವ ತುರ್ತು ಕಾರಣದಿಂದಾಗಿ 2021-22ರ ಮುಂಬರುವ ಬಜೆಟ್ನಲ್ಲಿ ಹಣಕಾಸಿನ ಕೊರತೆಯ ಬಗ್ಗೆ ಸರ್ಕಾರವು ಮೃದುವಾದ ದೃಷ್ಟಿಕೋನ ತಳಿಯಬಹುದು ಎಂದು ಪ್ರಧಾನಿ ಜತೆ ವರ್ಚ್ಯುಯಲ್ ಸಭೆಯಲ್ಲಿ ಭಾಗವಹಿಸಿದ ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.