ನವದೆಹಲಿ:ಭಾರತದ ಆರ್ಥಿಕ ಸಮೀಕ್ಷೆಯು ಏಪ್ರಿಲ್ 1ರಿಂದ ಮುಂದಿನ ವರ್ಷದಲ್ಲಿ ಶೇ 6 ರಿಂದ 6.5ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಬಜೆಟ್‌ನಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಹಣಕಾಸಿನ ಕ್ರಮಗಳ ಸರಣಿಯಿಂದ ಉತ್ತೇಜನಗೊಳ್ಳಲಿದೆ ಎಂದು ಮೂಲವೊಂದು ತಿಳಿಸಿದೆ.
ಆರ್ಥಿಕ ಸಮೀಕ್ಷೆಯಲ್ಲಿ ಶೇ 6-6.5ರಷ್ಟು ಆರ್ಥಿಕ ವೃದ್ಧಿ ನಿರೀಕ್ಷೆ ಸಾಧ್ಯತೆ: ವರದಿ
ಭಾರತವು ಪ್ರಸಕ್ತ ವರ್ಷದಲ್ಲಿ ದಶಕದಲ್ಲೇ ಕೆಟ್ಟ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ 4.5ಕ್ಕೆ ಇಳಿದಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಉದ್ಯೋಗಾವಕಾಶವನ್ನು ಮಂದಗತಿಯ ಆರ್ಥಿಕತೆ ಕಸಿದುಕೊಂಡಿದೆ.
ಆರ್ಥಿಕ ಸಮೀಕ್ಷೆ

ಮಾರ್ಚ್ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಒಟ್ಟು ದೇಶಿ ಉತ್ಪನ್ನ ವಿಸ್ತರಣೆ ಶೇ 5ರಷ್ಟು ಎಂದು ಸರ್ಕಾರ ಅಂದಾಜಿಸಿದೆ. ಇದು 2008/09ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ನಿಧಾನಗತಿಯಾಗಿದೆ.