ನವದೆಹಲಿ:ಕಳೆದ ವರ್ಷದಿಂದ ಅಭಿವೃದ್ಧಿ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕಾಡುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತದ ಬಿಕ್ಕಟ್ಟು ಶ್ರೀಘ್ರವೇ ಕೊನೆಗೊಳ್ಳುವ ನಿರೀಕ್ಷೆ ಇದೆ. ಆದರೆ, ಭಾರತದ ಬೆಳವಣಿಗೆಯು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಎಚ್ಚರಿಸಿದೆ.
ಉತ್ತಮವಾದ ಜಾಗತಿಕ ಬೆಳವಣಿಗೆ ದರ, ಸರಳ ಹಾದಿಗೆ ಮರಳಿದ ದೇಶಿಯ ಆರ್ಥಿಕ ಪರಿಸ್ಥಿತಿಗಳು, ಸಕಾರಾತ್ಮಕ ಹಣಕಾಸಿನ ಹರಿವು, ಹೂಡಿಕೆದಾರರ ಸುಧಾರಿತ ಮನೋಭಾವದಂತಹ ನಡೆಗಳಿಂದ 2018ರ ಜನವರಿಯಲ್ಲಿ ಆರಂಭವಾದ ಮಂದಗತಿಯ ಆರ್ಥಿಕತೆ ಶೀಘ್ರದಲ್ಲೇ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಎಕನಾಮಿಕ್ಸ್ ರಿಸರ್ಚ್ ವರದಿಯಲ್ಲಿ ತಿಳಿಸಿದೆ.
ಭಾರತದ ಜಿಡಿಪಿ ಬೆಳವಣಿಗೆ 2020 ಮತ್ತು 2021ರ ಹಣಕಾಸು ವರ್ಷದಲ್ಲಿ ಕ್ರಮವಾಗಿ ಶೇ 5.3 ಮತ್ತು ಶೇ 6.6ರಷ್ಟು ಇರಲಿದ್ದು, ಇದು ನಾವು ಈ ಹಿಂದೆ ಊಹಿಸಿದ್ದಕ್ಕಿಂತ ಕಡಿಮೆಯಾಗಿದೆ. ದೇಶಿಯ ಹಣಕಾಸು ವಲಯದಲ್ಲಿನ ವಿಶ್ವಾಸಾರ್ಹ ಅಂಶಗಳು ತೊಂದರೆಗೆ ಒಳಗಾಗಿದೆ ಎಂದು ಹೇಳಿದೆ.
ಸೆಪ್ಟೆಂಬರ್ ಅಂತ್ಯದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 4.5ರಷ್ಟಿದೆ. ಇದು ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದಾಗಿದೆ. ಎಫ್‌ವೈ 20ರ 2ನೇ ತ್ರೈಮಾಸಿಕವು ಮೊದಲ ತ್ರೈಮಾಸಿಕಕ್ಕಿಂತ ದುರ್ಬಲವಾಗಿದ್ದರೂ ಮುಂದಿನ ಹಲವು ತ್ರೈಮಾಸಿಕಗಳಲ್ಲಿ ಬೆಳವಣಿಗೆಯು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಿದೆ.
ಭಾರತದ ಬಗ್ಗೆ ವಿಶ್ಲೇಷಣಾತ್ಮಕ ಆಶಾವಾದ ಹೊಂದಿರುವ ಗೋಲ್ಡ್ಮನ್, ಜಾಗತಿಕ ಬೆಳವಣಿಗೆಯು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಪೂರೈಕೆಯ ಅಡಚಣೆಗಳು ದೂರಾಗಲಿವೆ. ಅನುಭೋಗದ ಹೆಚ್ಚಳ, ಹೂಡಿಕೆ ಮತ್ತು ರಫ್ತುಗಳ ಪರದೆ ವ್ಯಾಪಿಸಲಿದೆ. ಆರ್ಥಿಕ ಸ್ಥಿರೀಕರಣದಲ್ಲಿ ಕೆಲವು ಆರಂಭಿಕ ಚಿಹ್ನೆಗಳು ಕಂಡುಬರುತ್ತಿವೆ. ಉದ್ಯಮಕ್ಕೆ ಸಾಲ ನೀಡಿಕೆ ಅಲ್ಪ ಸ್ಥಗಿತ ಆಗಿದ್ದರೂ ವೈಯಕ್ತಿಕ ಸಾಲ ವಿತರಣೆ ದೃಢವಾದ ಬೆಳವಣಿಗೆ ತೋರಿಸುತ್ತಿವೆ. ಎಫ್‌ವೈ 20ರ ಮೊದಲ 6 ತಿಂಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಶೇ 23ರಷ್ಟು ಹೆಚ್ಚಾಗಿದೆ. ಸೇವಾ ಆಧಾರಿತ ರಫ್ತುಗಳು ಆರ್ಥಿಕ ಕುಸಿತದ ಮಧ್ಯೆಯೂ ಬೆಳವಣಿಗೆ ಕಾಣುತ್ತಿದೆ ಎಂದು ವಿಶ್ಲೇಷಿಸಿದೆ.