ಕರ್ನಾಟಕ

karnataka

By

Published : Apr 16, 2020, 7:59 PM IST

ETV Bharat / business

ಜಿಡಿಪಿ ಬೆಳವಣಿಗೆ ದರ ಶೇ 1.1ಕ್ಕೆ ಕುಸಿಯಬಹುದು: ಎಸ್​ಬಿಐ ವರದಿ

2019-20ರ ಅವಧಿಯಲ್ಲಿನ ಭಾರತದ ಆರ್ಥಿಕ ಬೆಳವಣಿಗೆಯ ದರವು ಮಾರಣಾಂತಿಕ ವೈರಸ್ ಹರಡುವ ಮೊದಲು ಹಲವು ಏಜೆನ್ಸಿಗಳು ಶೇ 5 ರಿಂದ 4.1ಕ್ಕೆ ಇಳಿಯಲಿದೆ ಎಂದು ಅಂದಾಜಿಸಿದ್ದವು. ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಲಾಗಿದ್ದು, ಏಪ್ರಿಲ್ 20ರಿಂದ ಕೆಲವು ಉದ್ಯಮಗಳಿಗೆ ವಿನಾಯ್ತಿಗಳನ್ನು ಸರ್ಕಾರ ಒದಗಿಸುತ್ತಿದೆ. ಆದರೂ 2021ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನಷ್ಟವು ಸುಮಾರು 12.1 ಲಕ್ಷ ಕೋಟಿ ರೂ. ಅಥವಾ ನಾಮಮಾತ್ರ ಜಿವಿಎ 6 ಪ್ರತಿಶತದಷ್ಟು ನಷ್ಟವಾಗಬಹುದು ಎಂದು ಎಸ್​ಬಿಐ ವರದಿ ತಿಳಿಸಿದೆ.

State Bank Of India
ಭಾರತೀಯ ಸ್ಟೇಟ್ ಬ್ಯಾಂಕ್

ನವದೆಹಲಿ: ಕೊರೊನಾ ವೈರಸ್ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದಿಂದಾಗಿ ಭಾರತದ ಜಿಡಿಪಿ ಬೆಳವಣಿಗೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 1.1ಕ್ಕೆ ಇಳಿಯಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.

2019-20ರ ಅವಧಿಯಲ್ಲಿನ ಆರ್ಥಿಕ ಬೆಳವಣಿಗೆಯ ದರವು (ಮಾರಣಾಂತಿಕ ವೈರಸ್ ಹರಡುವ ಮೊದಲು) ಹಲವು ಏಜೆನ್ಸಿಗಳು ಶೇ 5 ರಿಂದ 4.1ಕ್ಕೆ ಇಳಿಯಲಿದೆ ಎಂದು ಅಂದಾಜಿಸಿದ್ದವು. ಪ್ರಸ್ತುತ, ಕೊರೊನಾ ವೈರಸ್​ ವಿಶ್ವದಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ 1.3 ಲಕ್ಷಕ್ಕೂ ಅಧಿಕ ಜನರ ಪ್ರಾಣ ತೆಗೆದುಕೊಂಡಿದೆ. ಜೊತೆಗೆ ಜಾಗತಿಕ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದೆ.

ಕೋವಿಡ್​-19ರ ಹರಡುವಿಕೆ ತಗ್ಗಿಸಲು ಆಯ್ದ ಕ್ಷೇತ್ರಗಳಿಗೆ ವಿನಾಯ್ತಿ ಕೊಟ್ಟು ಲಾಕ್‌ಡೌನ್ ಅನ್ನು ಮೇ 3ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.

ಎಸ್‌ಬಿಐ ಇಕೋವ್ರಾಪ್ ವರದಿ ಪ್ರಕಾರ, ಲಾಕ್‌ಡೌನ್ ವಿಸ್ತರಿಸುವುದರಿಂದ 12.1 ಲಕ್ಷ ಕೋಟಿ ರೂ. ಆರ್ಥಿಕ ನಷ್ಟ ಅಥವಾ ನಾಮಮಾತ್ರದ ಒಟ್ಟು ಮೌಲ್ಯವರ್ಧನೆ (ಜಿವಿಎ) ಶೇ 6ರಷ್ಟು ನಷ್ಟ ಉಂಟಾಗಬಹುದು ಎಂದು ಅಂದಾಜಿಸಿದೆ.

ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಲಾಗಿದ್ದು, ಏಪ್ರಿಲ್ 20ರಿಂದ ಕೆಲವು ಉದ್ಯಮಗಳಿಗೆ ವಿನಾಯ್ತಿಗಳನ್ನು ಸರ್ಕಾರ ಒದಗಿಸುತ್ತಿದೆ. ಆದರೂ 2021ರ ಹಣಕಾಸು ವರ್ಷದಲ್ಲಿ ಒಟ್ಟಾರೆ ನಷ್ಟವು ಸುಮಾರು 12.1 ಲಕ್ಷ ಕೋಟಿ ರೂ. ಅಥವಾ ನಾಮಮಾತ್ರ ಜಿವಿಎ 6 ಪ್ರತಿಶತದಷ್ಟು ನಷ್ಟವಾಗಬಹುದು ಎಂದು ವರದಿಯಲ್ಲಿ ತಿಳಿಸಿದೆ.

2021ರ ವಿತ್ತೀಯ ವರ್ಷದಲ್ಲಿ ನಾಮಮಾತ್ರ ಜಿಡಿಪಿ ಶೇ 4.2ರಷ್ಟು ಅಥವಾ ಇದಕ್ಕೂ ಕಡಿಮೆ/ ಹತ್ತಿರ ಬರಬಹುದು. ತೆರಿಗೆ ಸಂಗ್ರಹಕ್ಕಿಂತ ಸಬ್ಸಿಡಿ ಅತ್ಯಧಿಕ ಮಟ್ಟದಲ್ಲಿ ಇರುವ ಸಾಧ್ಯತೆಯಿದೆ. ನಾಮಮಾತ್ರ ಜಿಡಿಪಿ ಬೆಳವಣಿಗೆ ಶೇ 4.2ಕ್ಕೆ ಬಂದರೆ 2021ರ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆಯು ಶೇ 1.1ರಷ್ಟು ಇರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ABOUT THE AUTHOR

...view details