ನವದೆಹಲಿ :ಆರ್ಥಿಕ ಬೆಳವಣಿಗೆ ಮತ್ತು ಬಾಲಕಾರ್ಮಿಕ ಪದ್ಧತಿ ಒಟ್ಟಿಗೆ ಕೈಜೋಡಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಉದ್ಯೋಗ ನೀಡುವುದನ್ನು ನಿಲ್ಲಿಸುವಂತೆ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ವೇಳೆ ವ್ಯವಹಾರ ಮತ್ತು ನಿಗಮಗಳಿಗೆ ಒತ್ತಾಯಿಸಿದ್ದಾರೆ.
ಬಾಲ ಕಾರ್ಮಿಕ ಪದ್ಧತಿ ಕೊನೆಗೊಳಿಸಬೇಕು. ಇದರಿಂದ ವಯಸ್ಕರರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಮೂಲಕ ಅವರ ಪೂರೈಕೆ ಸರಪಳಿಗಳಲ್ಲಿ ಕಾರ್ಮಿಕ ಹಕ್ಕು ಮತ್ತು ಮಾನದಂಡಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕಾರ್ಮಿಕರ ಬಾಧ್ಯತೆ ಹೊಂದಿರುವ ದೇಶಗಳು ಅಂತಾರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಟ್ವಿಟರ್ನಲ್ಲಿ ಹೇಳಿದರು.