ಕರ್ನಾಟಕ

karnataka

ETV Bharat / business

ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ ಭಾರತಕ್ಕೆ 'ಬಿಬಿಬಿ' ಶ್ರೇಣಿ.. - ಆರ್ಥಿಕ ಸಮೀಕ್ಷೆ ಲೈವ್

ರೇಟಿಂಗ್‌ಗಳು ಭಾರತದ ಮೂಲಭೂತ ಅಂಶಗಳನ್ನು ಒಳಗೊಳ್ಳದ ಕಾರಣ, ಭಾರತಕ್ಕೆ ಹಿಂದಿನ ಸಾವರಿನ ಕ್ರೆಡಿಟ್ ರೇಟಿಂಗ್ ಬದಲಾವಣೆಗಳು ಸೆನ್ಸೆಕ್ಸ್ ಮರುಚೇತರಿಕೆ, ವಿದೇಶಿ ವಿನಿಮಯ ದರ ಮತ್ತು ಸರ್ಕಾರಿ ಭದ್ರತೆಗಳ ಇಳುವರಿಯಂತಹ ಆಯ್ದ ಸೂಚ್ಯಂಕಗಳ ಮೇಲೆ ದೊಡ್ಡ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದಿದೆ..

Eco Survey
Eco Survey

By

Published : Jan 29, 2021, 10:19 PM IST

ನವದೆಹಲಿ :ಭಾರತದ ಸಾವರಿನ ಕ್ರೆಡಿಟ್ ರೇಟಿಂಗ್ ಆರ್ಥಿಕತೆಯ ಮೂಲಭೂತ ಅಂಶಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಜಾಗತಿಕ ಕ್ರೆಡಿಟ್​ ಏಜೆನ್ಸಿಗಳು ತಮ್ಮ ರೇಟಿಂಗ್‌ನಲ್ಲಿ ಹೆಚ್ಚು ಪಾರದರ್ಶಕ ಮತ್ತು ಕಡಿಮೆ ವ್ಯಕ್ತಿನಿಷ್ಠವಾಗುವಂತೆ ಸೂಚಿಸಿವೆ.

ಸಂಸತ್ತಿನಲ್ಲಿ ಮಂಡಿಸಲಾದ 2020-21ರ ಆರ್ಥಿಕ ಸಮೀಕ್ಷೆಯಲ್ಲಿ ಆರ್ಥಿಕತೆಯ ಸಾಮರ್ಥ್ಯ ಮತ್ತು ಸಾಲದ ಬಾಧ್ಯತೆಗಳ ಪಾವತಿಯ ಪ್ರತಿಬಿಂಬಿಸುವ ಸಾವರಿನ್​ ಕ್ರೆಡಿಟ್ ರೇಟಿಂಗ್ ವಿಧಾನ ತಿದ್ದುಪಡಿ ಮಾಡಬೇಕು. ಸಾವರಿನ್ ಕ್ರೆಡಿಟ್​ ರೇಟಿಂಟ್ ವಿಧಾನದಲ್ಲಿನ ಅಂತರ್ಗತ ಪಕ್ಷಪಾತ ಮತ್ತು ವ್ಯಕ್ತಿನಿಷ್ಠತೆ ಪರಿಹರಿಸಲು ಅಭಿವೃದ್ಧಿಶೀಲ ಆರ್ಥಿಕತೆಗಳು ಒಟ್ಟಾಗಿ ಸಾಗಬೇಕಿದೆ ಎಂದು ಸಲಹೆ ನೀಡಿದೆ.

ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಇತಿಹಾಸದಲ್ಲಿ ಹಿಂದೆಂದಿಗೂ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೂಡಿಕೆ ದರ್ಜೆಯ (ಬಿಬಿಬಿ- / ಬಿಎಎ 3) ಅತ್ಯಂತ ಕಡಿಮೆ ಸ್ಥಾನವೆಂದು ಪರಿಗಣಿಸಿರಲಿಲ್ಲ. ಸಾವರಿನ್​ ಕ್ರೆಡಿಟ್ ರೇಟಿಂಗ್​ಗಳು ಭಾರತದ ಆರ್ಥಿಕತೆಯ ಮೂಲಭೂತತೆ, ಸಂಘರ್ಷ, ಅಪಾರದರ್ಶಕತೆ ಪ್ರತಿಬಿಂಬಿಸುವುದಿಲ್ಲ. ಪಕ್ಷಪಾತದ ಕ್ರೆಡಿಟ್ ರೇಟಿಂಗ್‌ಗಳು ಎಫ್‌ಪಿಐ ಹರಿವನ್ನು ಹಾನಿಗೊಳಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

ಇಂತಹ ಸ್ಥಿತಿಗೆ ಒಳಗಾದ ದೇಶಗಳು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳೊಂದಿಗೆ ತೊಡಗಿಸಿಕೊಳ್ಳುವುದು ಕಡ್ಡಾಯವಾಗಿದೆ. ಆರ್ಥಿಕತೆಯ ಸಾಮರ್ಥ್ಯ ಮತ್ತು ಅವರ ಬಾಹ್ಯ ಕಟ್ಟುಪಾಡುಗಳ ವಿಧಾನವನ್ನು ಸರಿಪಡಿಸಬೇಕಿದೆ.

''ಭಯವಿಲ್ಲದ ಮನಸ್ಸು ತಲೆಯೆತ್ತಿ ನಡೆಯಲು ಸಾಧ್ಯ.. ಸ್ವರ್ಗವೆಂಬ ಸ್ವಾತಂತ್ರ್ಯಕ್ಕೆ ನನ್ನ ತಂದೆ ಸ್ಥಾನದ ನನ್ನ ದೇಶವು ಎಚ್ಚರಗೊಳ್ಳಲಿ'' ಎಂದು ಬಂಗಾಳಿ ಕವಿ ರವೀಂದ್ರನಾಥ ಠ್ಯಾಗೋರ್ ಅವರ ಉಕ್ತಿಯನ್ನು ಸರ್ವೆಯಲ್ಲಿ ಉಲ್ಲೇಖಿಸಿದೆ. ಕಡ್ಡಾಯವಾಗಿ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ವಿಧಾನ ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಆರೋಗ್ಯ ವೆಚ್ಚ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸುವಂತೆ ಮುಖ್ಯ ಆರ್ಥಿಕ ಸಲಹೆಗಾರ ಶಿಫಾರಸು

ರೇಟಿಂಗ್‌ಗಳು ಭಾರತದ ಮೂಲಭೂತ ಅಂಶಗಳನ್ನು ಒಳಗೊಳ್ಳದ ಕಾರಣ, ಭಾರತಕ್ಕೆ ಹಿಂದಿನ ಸಾವರಿನ ಕ್ರೆಡಿಟ್ ರೇಟಿಂಗ್ ಬದಲಾವಣೆಗಳು ಸೆನ್ಸೆಕ್ಸ್ ಮರುಚೇತರಿಕೆ, ವಿದೇಶಿ ವಿನಿಮಯ ದರ ಮತ್ತು ಸರ್ಕಾರಿ ಭದ್ರತೆಗಳ ಇಳುವರಿಯಂತಹ ಆಯ್ದ ಸೂಚ್ಯಂಕಗಳ ಮೇಲೆ ದೊಡ್ಡ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದಿದೆ.

ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ನಲ್ಲಿ ಉದಯೋನ್ಮುಖ ದೈತ್ಯ ರಾಷ್ಟ್ರಗಳ ವಿರುದ್ಧ ಪಕ್ಷಪಾತವಿದೆ. ಜಿಡಿಪಿ ಬೆಳವಣಿಗೆಯ ದರ, ಹಣದುಬ್ಬರ, ಸರ್ಕಾರದ ಸಾಲ, ರಾಜಕೀಯ ಸ್ಥಿರತೆ, ಕಾನೂನಿನ ನಿಯಮ, ಭ್ರಷ್ಟಾಚಾರದ ನಿಯಂತ್ರಣ, ಹೂಡಿಕೆದಾರರ ರಕ್ಷಣೆ, ಸುಲಲಿತ ವ್ಯವಹಾರದಂತಹ ವಿಷಯದಲ್ಲಿ ಭಾರತವು ವಿದೇಶಿಯಂತಾಗಿದೆ ಎಂದು ಸಮೀಕ್ಷೆ ಹೇಳಿದೆ.

ABOUT THE AUTHOR

...view details