ಕರ್ನಾಟಕ

karnataka

ETV Bharat / business

ಕೊರೊನಾ ಲಸಿಕೆ ಪಡೆದವರಿಗೆ ರೆಸ್ಟೋರೆಂಟ್​ಗಳಲ್ಲಿ ಸಿಗುತ್ತೆ ಶೇ.20ರಷ್ಟು ರಿಯಾಯಿತಿ.. ಎಲ್ಲಿ, ಹೇಗೆ? - ದುಬೈ ರಸ್ಟೋರೆಂಟ್ ರಿಯಾಯಿತಿ ಕೊಡುಗೆ

ರಿಯಾಯಿತಿ ಪಡೆಯಲು ಗ್ರಾಹಕರು ವೈದ್ಯಕೀಯ ಪ್ರಮಾಣಪತ್ರದಂತಹ ಇನಾಕ್ಯುಲೇಷನ್‌ನ ಪುರಾವೆಗಳನ್ನು ತೋರಿಸಬೇಕು. ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ಬಹು ಚರ್ಚಿತವಾಗುತ್ತಿದೆ..

Restaurants
Restaurants

By

Published : Jan 25, 2021, 7:06 PM IST

ದುಬೈ :ದುಬೈ ರೆಸ್ಟೋರೆಂಟ್‌ಗಳು ಕೊರೊನಾ ವೈರಸ್ ವಿರುದ್ಧ ಚುಚ್ಚುಮದ್ದು ಪಡೆದ ಗ್ರಾಹಕರಿಗೆ ರಿಯಾಯಿತಿ ನೀಡಲು ಪ್ರಾರಂಭಿಸಿವೆ.

ದುಬೈನಲ್ಲಿ ಈಗಾಗಲೇ ವ್ಯಾಕ್ಸಿನೇಷನ್ ಪ್ರಕ್ರಿಯೆ ಚಾಲನೆಯಾಗಿದೆ. ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಎಮಿರೇಟ್​​ ಸರ್ಕಾರಕ್ಕೆ ಇಲ್ಲಿನ ರೆಸ್ಟೋರೆಂಟ್​​ಗಳು ಸಹ ಸಾಥ್ ನೀಡುತ್ತಿವೆ.

ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಜನಸಂಖ್ಯೆಯ ಸುಮಾರು 10 ದಶಲಕ್ಷದ ಪೈಕಿ ಈಗಾಗಲೇ 2 ಮಿಲಿಯನ್ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದೆ. ಇದು ಇಸ್ರೇಲ್ ನಂತರದ ಜಾಗತಿಕ ಮಟ್ಟದಲ್ಲಿ ಎರಡನೇ ಅತಿ ಹೆಚ್ಚು ಲಸಿಕೆ ಹಂಚಿಕೆಯಾಗಿದೆ.

ಇದನ್ನೂ ಓದಿ: 2021ರ ಆಯವ್ಯಯ.. ಫ್ರಿಡ್ಜ್‌​, ವಾಷಿಂಗ್​ಮಷಿನ್​ ಸುಂಕ ಏರಿಕೆ.. ನಿರ್ಮಲಾ ಬಜೆಟ್​ನಲ್ಲಿ ಮತ್ತೇನಿದೆ?

ಗೇಟ್ಸ್ ಹಾಸ್ಪಿಟಾಲಿಟಿ ನಡೆಸುತ್ತಿರುವ ಮೂರು ರೆಸ್ಟೋರೆಂಟ್‌ಗಳು ಲಸಿಕೆಯ ಮೊದಲ ಡೋಸ್​​ ತೆಗೆದುಕೊಂಡವರಿಗೆ 10 ಪ್ರತಿಶತ ಮತ್ತು ಎರಡನೇ ಡೋಸ್​ ಪಡೆದವರಿಗೆ 20 ಪ್ರತಿಶತದಷ್ಟು ರಿಯಾಯಿತಿ ನೀಡುತ್ತದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸ್ಪ್ರೇಡ್​ ಲವ್​ ನಾಟ್​ ರೋನಾ ಹೇಳಿಕೆ ಹರಿದಾಡುತ್ತಿದೆ.

ರಿಯಾಯಿತಿ ಪಡೆಯಲು ಗ್ರಾಹಕರು ವೈದ್ಯಕೀಯ ಪ್ರಮಾಣಪತ್ರದಂತಹ ಇನಾಕ್ಯುಲೇಷನ್‌ನ ಪುರಾವೆಗಳನ್ನು ತೋರಿಸಬೇಕು. ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ಬಹು ಚರ್ಚಿತವಾಗುತ್ತಿದೆ.

ಇದರಲ್ಲಿ ಎರಡು ಮಾರ್ಗಗಳಿಂದ ನೋಡಬಹುದು. ಒಂದು ಮಾರ್ಕೆಟಿಂಗ್ ಸ್ಟಂಟ್ ಅಥವಾ ಹೆಚ್ಚಿನ ಜನರಿಗೆ ಲಸಿಕೆ ಪಡೆಯಲು ನಿಜವಾಗಿ ಪ್ರೇರಣೆ ನೀಡುವುಂದು ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details