ಅಹಮದಾಬಾದ್: ಗುಜರಾತ್‌ನಲ್ಲಿ ಮದ್ಯಪಾನ ಮಾಡುವುದು ದೊಡ್ಡದಲ್ಲ. ಆದರೆ, ಮದ್ಯ ಸೇವನೆ ಮಾಡಿ ಊರ ಮುಖಂಡರ ಕೈಗೆ ಸಿಕ್ಕಿಬಿದ್ದರೇ ಮಾತ್ರ ಭಾರಿ ವಿಚಿತ್ರವಾದ ಶಿಕ್ಷೆ ನೀಡುತ್ತಾರೆ.
ಎಣ್ಣೆ ಹೊಡೆದು ಸಿಕ್ಕಿಬಿದ್ರೇ ಊರಿಗೆಲ್ಲ ಮಟನ್ ಊಟದ ಶಿಕ್ಷೆ... ಗಲಾಟೆ ಮಾಡಿದ್ರೆ ಆಗೋದೇನು ಗೊತ್ತಾ? - ಮದ್ಯಪಾನ
ಗುಜರಾತ್‌ನ ಬುನಸ್ಕಾಂತ ಜಿಲ್ಲೆಯ ಖತಿಸಿಟಾರ ಎಂಬ ಬುಡಕಟ್ಟು ಗ್ರಾಮದಲ್ಲಿ ಮದ್ಯಪಾನ ಮಾಡಿದವರಿಗೆ 2,000 ರೂ. ದಂಡದ ಜೊತೆಗೆ ಇಡೀ ಗ್ರಾಮಕ್ಕೆ 20,000 ರೂ.ಗಿಂತ ಹೆಚ್ಚಿನ ಮೊತ್ತದ ಮಟನ್ ಊಟ ಹಾಕಿಸಬೇಕಾಗುತ್ತದೆ. ಒಂದು ವೇಳೆ ಕುಡಿದು ಗಲಾಟೆ ಮಾಡಿದ್ದರೆ 5 ಸಾವಿರ ರೂ.ವರೆಗೂ ದಂಡ ವಿಧಿಸಲಾಗುತ್ತದೆ.
ಗುಜರಾತ್‌ನ ಬುನಸ್ಕಾಂತ ಜಿಲ್ಲೆಯ ಖತಿಸಿಟಾರ ಎಂಬ ಬುಡಕಟ್ಟು ಗ್ರಾಮದಲ್ಲಿ ಮದ್ಯ ಸೇವನೆ ಮಾಡಿದವರಿಗೆ 2,000 ರೂ. ದಂಡದ ಜೊತೆಗೆ ಇಡೀ ಗ್ರಾಮಕ್ಕೆ 20,000 ರೂ.ಗಿಂತ ಹೆಚ್ಚಿನ ಮೊತ್ತದ ಮಟನ್ ಊಟ ಹಾಕಿಸಬೇಕಾಗುತ್ತದೆ. ಒಂದು ವೇಳೆ ಕುಡಿದು ಗಲಾಟೆ ಮಾಡಿದರೆ 5 ಸಾವಿರ ರೂಪಾಯಿವರೆಗೂ ದಂಡ ವಿಧಿಸಲಾಗುತ್ತದೆ. ಇದು ಮೋಜಿನಂತೆ ವಿಚಿತ್ರವಾಗಿ ಕಂಡರು ಸತ್ಯ ಸಂಗತಿಯಾಗಿದೆ.
ಬನಸ್ಕಾಂತ ಜಿಲ್ಲೆಯ ಖತಿಸಿಟಾರ ಗ್ರಾಮದಲ್ಲಿ ಸುಮಾರು 700 ಜನರು ಬುಡಕಟ್ಟು ಸಮುದಾಯವರು ವಾಸಿಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಹಲ್ಲೆ ಮತ್ತು ಕೊಲೆಗಳಂತಹ ಕೃತ್ಯಗಳು ನಡೆಯುತ್ತಿದ್ದವು. ಇದನ್ನು ತಡೆಗಟ್ಟುವ ಉದ್ದೇಶದಿಂದ 2013-14ರಲ್ಲಿ ಈ ಗ್ರಾಮದಲ್ಲಿ ಇಂತಹ ದಂಡದ ಶಿಕ್ಷೆ ಪರಿಚಯಿಸಲಾಯಿತು. 2018ರಲ್ಲಿ ಓರ್ವ ಮಾತ್ರ ಕುಡಿದು ಸಿಕ್ಕಿಬಿದ್ದಿದ್ದ. ಈ ಬಳಿಕ ಈವರೆಗೂ ಯಾರೂ ಕುಡಿದ ಘಟನೆಗಳು ಮರುಕಳಿಸಿಲ್ಲ.