ಕರ್ನಾಟಕ

karnataka

2022ರಲ್ಲಿ ಭಾರತದ ಜಿಡಿಪಿ ಶೇ 11ರಷ್ಟಕ್ಕೆ ಜಿಗಿತ: ಚೇಂಬರ್ ಆಫ್ ಕಾಮರ್ಸ್ ಅಂದಾಜು

By

Published : Mar 11, 2021, 1:05 PM IST

2020 - 21ರ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಶೇ 0.4ರಷ್ಟು ಏರಿಕೆಯಾಗಿದೆ. 2ನೇ ತ್ರೈಮಾಸಿಕದಲ್ಲಿನ ಮೈನಸ್​ ಶೇ 7.3ರಷ್ಟು ಮತ್ತು 1ನೇ ತ್ರೈಮಾಸಿಕದ ಮೈನಸ್ ಶೇ 24.4ಕ್ಕೆ (ಪರಿಷ್ಕೃತ ಎನ್‌ಎಸ್‌ಒ ಅಂದಾಜಿನ ಪ್ರಕಾರ) ಹೋಲಿಸಿದರೆ ಪರಿಣಾಮಕಾರಿಯಾದ ಸುಧಾರಣೆಗಳ ಫಲಿತಾಂಶವಾಗಿದೆ.

GDP growth
GDP growth

ನವದೆಹಲಿ:ಆರ್ಥಿಕ ಚಟುವಟಿಕೆಗಳು ವೇಗ ಹೆಚ್ಚುತ್ತಿರುವುದರಿಂದ ಮತ್ತು ಹೂಡಿಕೆದಾರರ ಭಾವನೆಗಳು ಪುನರುಜ್ಜೀವನಗೊಳ್ಳುತ್ತಿದ್ದಂತೆ, ಜಿಡಿಪಿ ಬೆಳವಣಿಗೆಯು ಎರಡಂಕಿಯ ಬೆಳವಣಿಗೆಯ ಪಥ ಪ್ರವೇಶಿಸುವ ಸಾಧ್ಯತೆಯಿದೆ. ಮುಂದಿನ ಹಣಕಾಸು ವರ್ಷದಲ್ಲಿ ಶೇ 11ಕ್ಕಿಂತ ಹೆಚ್ಚಾಗಬಹುದು ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್​​ ಇಂಡಸ್ಟ್ರಿಯ ವರದಿ ಅಂದಾಜಿಸಿದೆ.

2020-21ರ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಶೇ 0.4ರಷ್ಟು ಏರಿಕೆಯಾಗಿದ್ದು, 2ನೇ ತ್ರೈಮಾಸಿಕದಲ್ಲಿನ ಮೈನಸ್​ ಶೇ 7.3ರಷ್ಟು ಮತ್ತು 1ನೇ ತ್ರೈಮಾಸಿಕದ ಮೈನಸ್ ಶೇ 24.4ಕ್ಕೆ (ಪರಿಷ್ಕೃತ ಎನ್‌ಎಸ್‌ಒ ಅಂದಾಜಿನ ಪ್ರಕಾರ) ಹೋಲಿಸಿದರೆ ಪರಿಣಾಮಕಾರಿಯಾದ ಸುಧಾರಣೆಗಳ ಫಲಿತಾಂಶವಾಗಿದೆ ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್​ ಇಂಡಸ್ಟ್ರಿಯ ಅಧ್ಯಕ್ಷ ಸಂಜಯ್ ಅಗರ್‌ವಾಲ್ ಹೇಳಿದರು.

ಹೂಡಿಕೆದಾರರ ಮನೋಭಾವ ಚೇತರಿಸಿಕೊಂಡ ಪರಿಣಾಮವಾಗಿ ಮುಂದಿನ 2021 - 22ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇ 11ರಷ್ಟು ಬೆಳವಣಿಗೆಯ ಪಥ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೇಂದ್ರ ಸರ್ಕಾರದ 2020-21ರ ಆರ್ಥಿಕ ಸಮೀಕ್ಷೆಯ ಪ್ರಕಾರ ಎಂದರು.

ಇದನ್ನೂ ಓದಿ: ಮಾನವೀಯತೆಗೆ ನೆರವಾಗಲು 'ಭಗವದ್ಗೀತೆ' ಪ್ರೇರೇಪಿಸಿದ್ದರಿಂದ ನಾವು ಜಗತ್ತಿಗೆ ಔಷಧ ನೀಡುತ್ತಿದ್ದೇವೆ: ಮೋದಿ

ಕಳೆದ 11 ತಿಂಗಳಲ್ಲಿ ಸರ್ಕಾರ ಕೈಗೊಂಡ ವಿಶಾಲ ದೃಷ್ಟಿಯ ನೀತಿ ಕ್ರಮಗಳ ಆರ್ಥಿಕ ಚಟುವಟಿಕೆಯನ್ನು ಗಮನಾರ್ಹವಾಗಿ ಉನ್ನತ ಮಟ್ಟದಲ್ಲಿ ಹೆಚ್ಚಿಸಿದೆ ಎಂದು ಅಗರ್‌ವಾಲ್ ತಿಳಿಸಿದರು.

ಪಿಎಚ್‌ಡಿಸಿಐ ​​ಎಕಾನಮಿ ಜಿಪಿಎಸ್ ಸೂಚ್ಯಂಕವು 2020ರ ಫೆಬ್ರವರಿಯಲ್ಲಿ 103 ಆಗಿತ್ತು. 2021ರ ಫೆಬ್ರವರಿಯಲ್ಲಿ 19 ಪಾಯಿಂಟ್‌ಗಳ ಸುಧಾರಣೆಯಾಗಿದೆ. ಪಿಎಚ್‌ಡಿಸಿಸಿಐ ಎಕಾನಮಿ ಜಿಪಿಎಸ್ ಸೂಚ್ಯಂಕದ ಪ್ರವೃತ್ತಿ 2020ರ ಫೆಬ್ರವರಿಯಲ್ಲಿನ ಮಟ್ಟಕ್ಕೆ ಹೋಲಿಸಿದರೆ ಭಾರತೀಯ ಆರ್ಥಿಕತೆಯು ಸುಧಾರಿತ ವೇಗದ ದಿಕ್ಕಿನಲ್ಲಿ ಮುಂದುವರಿಯುತ್ತಿದೆ ಎಂದು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ಪಿಎಚ್‌ಡಿಸಿಸಿಐ ಆರ್ಥಿಕತೆ ಜಿಪಿಎಸ್ ಸೂಚ್ಯಂಕವು 2020-21ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ 92.4ರಷ್ಟಿದ್ದು, 2019-2020ರ ಹಣಕಾಸು ವರ್ಷದ ಏಪ್ರಿಲ್-ಫೆಬ್ರವರಿಗೆ ಹೋಲಿಸಿದರೆ 99.5 ಕ್ಕೆ ತಲುಪಿದೆ. ಪಿಎಚ್‌ಡಿಸಿಸಿಐ ಎಕಾನಮಿ ಜಿಪಿಎಸ್ ಸೂಚ್ಯಂಕದ ಹೆಚ್ಚುತ್ತಿರುವ ಪ್ರವೃತ್ತಿ 2021-22ರ ಆರ್ಥಿಕ ವರ್ಷದಲ್ಲಿ ಭಾರತೀಯ ಆರ್ಥಿಕತೆಯ ಬಲವಾದ ಚೇತರಿಕೆಯ ದೃಷ್ಟಿಕೋನ ಸೂಚಿಸುತ್ತದೆ ಎಂದರು.

ABOUT THE AUTHOR

...view details