ನವದೆಹಲಿ: ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯು 2020ರ ಮಾರ್ಚ್ 31ಕ್ಕೆ ಮುಗಿಯಲಿದೆ. ಒಂದು ವೇಳೆ ಲಿಂಕ್ ಮಾಡಲು ತಪ್ಪಿ ಈ ಹಿಂದಿನಂತೆ ವಹಿವಾಟಿಗೆ ಬಳಸಿದರೇ ಆದಾಯ ತೆರಿಗೆ ಇಲಾಖೆಯು ₹ 10,000 ದಂಡ ಹಾಕಲಿದೆ.
ಇದಕ್ಕೂ ಮುನ್ನ ಐಟಿ ಇಲಾಖೆಯು ಹಲವು ಬಾರು ಅಂತಿಮ ಡೆಡ್ಲೈನ್ ನೀಡಿ ಮತ್ತೆ ಅವಧಿ ವಿಸ್ತರಿಸಿತ್ತು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಇದುವರೆಗೂ ಆರು ಬಾರಿ ಕಾಲಾವಧಿ ವಿಸ್ತರಿಸಿದೆ. ಬಹುತೇಕ ಕಾರ್ಡ್ದಾರರು ಜೋಡಣೆಗೆ ಹಿಂದೇಟು ಹಾಕುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಟಿ ಇಲಾಖೆ, ಜೋಡಣೆಯನ್ನು ಕಡೆಗಣಿಸಿದವರಿಗೆ ₹ 10,000 ವರೆಗೂ ದಂಡ ಹಾಕಲಿದೆ.
ನಿಗದಿತ ಅವಧಿಯ ಬಳಿಕ ಜೋಡಣೆ ಆಗದಿದ್ದರೆ ಮೊದಲು ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದೇ ಕಾರ್ಡ್ ಅನ್ನು ವಹಿವಾಟಿಗೆ ಬಳಿಸಿಕೊಂಡರೆ ಬಳಕೆದಾರರು ₹ 10,000ವರೆಗೂ ದಂಡ ಕಟ್ಟಬೇಕಾಗುತ್ತದೆ ಎಂದು ಐಟಿ ಇಲಾಖೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿತ್ತು.
2020ರ ಜನವರಿ 27ರವರೆಗೆ ಒಟ್ಟಾರೆ 30.75 ಕೋಟಿ ಪಾನ್ಕಾರ್ಡ್ಗಳ ಜೋಡಣೆ ಆಗಿದೆ. ಇನ್ನೂ 17.58 ಕೋಟಿ ಪಾನ್ಗಳು ಜೋಡಣೆ ಆಗಬೇಕಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಮಹತ್ವದ ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ವೈಯಕ್ತಿಕ ಬೆರಳಚ್ಚು ಗುರುತನ್ನು ಪಾನ್ ಸಂಖ್ಯೆ ಪಡೆಯಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇದನ್ನು ಕಡ್ಡಾಯಗೊಳಿಸಿತ್ತು.
ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಯ ವಿಧಾನ ಇಲ್ಲಿದೆ.
ಜೋಡಣೆ ವಿಧಾನ