ಮುಂಬೈ:ಅವಧಿ ಸಾಲಗಳ ಮೇಲಿನ ಇಂಎಂಐ ಮರುಪಾವತಿ ಅವಧಿಯನ್ನು ಆಗಸ್ಟ್ ದಿನಾಂಕ ಮೀರಿ ಮತ್ತೆ ವಿಸ್ತರಿಸದಂತೆ ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪರೇಖ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಮನವಿ ಮಾಡಿದರು.
ದಯವಿಟ್ಟು ಮತ್ತೆ ಇಎಂಐ ಮರುಪಾವತಿ ಅವಧಿ ವಿಸ್ತರಿಸಬೇಡಿ: ಆರ್ಬಿಐ ಗವರ್ನರ್ಗೆ HDFC ಅಧ್ಯಕ್ಷ ಮನವಿ - ಆರ್ಬಿಐ ಗವರ್ನರ್
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರುವ ಅನೇಕ ಗ್ರಾಹಕರು ಪಾವತಿಗಳನ್ನು ಮುಂದೂಡುತ್ತಿದ್ದಾರೆ. ಇಎಂಐ ಮರುಪಾವತಿ ಅವಧಿ ವಿಸ್ತರಿಸುವುದರಿಂದ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಪರೇಖ್, ಆರ್ಬಿಐ ಗವರ್ನರ್ಗೆ ಮನವಿ ಮಾಡಿದರು.
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ಮರು ಪಾವತಿ ಮಾಡುವ ಸಾಮರ್ಥ್ಯ ಹೊಂದಿರುವ ಅನೇಕ ಗ್ರಾಹಕರು ಪಾವತಿಗಳನ್ನು ಮುಂದೂಡುತ್ತಿದ್ದಾರೆ. ಇಎಂಐ ಮರುಪಾವತಿ ಅವಧಿ ವಿಸ್ತರಿಸುವುದರಿಂದ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಪರೇಖ್, ಆರ್ಬಿಐ ಗವರ್ನರ್ಗೆ ಮನವಿ ಮಾಡಿದರು.
ದಯವಿಟ್ಟು ಮತ್ತೆ ಅವಧಿ ವಿಸ್ತರಿಸಬೇಡಿ. ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿರುವ ಜನರು ಸಹ ಕಾರ್ಪೊರೇಟ್ ಅಥವಾ ವ್ಯಕ್ತಿಗಳು ಇದರ ಅಡಿಯಲ್ಲಿ ಲಾಭ ಪಡೆಯುತ್ತಿದ್ದಾರೆ. ಅವಧಿ ವಿಸ್ತರಿಸುವ ಬಗ್ಗೆ ಕೆಲವು ಮಾತುಗಳನ್ನು ನಾವು ಕೇಳುತ್ತೇವೆ. ಇದರಿಂದ ಸಣ್ಣ ಎನ್‌ಬಿಎಫ್‌ಸಿಗಳಿಗೆ ಸಮಸ್ಯೆಯಾಗಲಿದೆ ಎಂದಿದ್ದಾರೆ.