ಕರ್ನಾಟಕ

karnataka

ETV Bharat / business

2022-23ರಲ್ಲಿ ಆರ್‌ಬಿಐನಿಂದ ಡಿಜಿಟಲ್‌ ರೂಪಾಯಿ ಜಾರಿಗೆ - ಸಚಿವೆ ನಿರ್ಮಲಾ ಸೀತಾರಾಮನ್‌

ಆರ್‌ಬಿಐ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ತರಲಾಗುತ್ತದೆ ಎಂದು ಸಚಿವೆ ಸೀತಾರಾಮನ್ ಹೇಳಿದ್ದಾರೆ..

Digital rupee to be issued using blockchain and other technologie
2022-23ರಲ್ಲಿ ಆರ್‌ಬಿಐನಿಂದ ಡಿಜಿಟಲ್‌ ರೂಪಾಯಿ ಜಾರಿಗೆ - ಸಚಿವೆ ಸೀತಾರಾಮನ್‌

By

Published : Feb 1, 2022, 12:41 PM IST

Updated : Feb 1, 2022, 1:08 PM IST

ನವದೆಹಲಿ :ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು 2022-23ರಲ್ಲಿ ಡಿಜಿಟಲ್ ರೂಪಾಯಿಯನ್ನು ತರಲಾಗುತ್ತದೆ. ಈ ಸಂಬಂಧ ಆರ್‌ಬಿಐ ಸೂಚನೆ ಹೊರಡಿಸಲಿದೆ. ಇದು ಕೂಡ ಆರ್ಥಿಕತೆಗೆ ಬಲ ನೀಡಲಿದೆ ಎಂದು ಸಚಿವೆ ಸೀತಾರಾಮನ್‌ ಹೇಳಿದ್ದಾರೆ.

ಪಾವತಿಗಳಲ್ಲಿ ತಡವಾಗುತ್ತಿರುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಆನ್‌ಲೈನ್‌ ಬಿಲ್‌ ವ್ಯವಸ್ಥೆಯನ್ನೂ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಫಿಯೆಟ್ ಕರೆನ್ಸಿಯ ವರ್ಚುಯಲ್ ರೂಪವನ್ನು ಉಲ್ಲೇಖಿಸುವ ತಮ್ಮದೇ ಆದ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಹೊಂದಿರುವ ಕೆಲವು ದೇಶಗಳಿಗೆ ಭಾರತ ಸೇರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಾಗಲೇ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ ಮತ್ತು ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಚರ್ಚಿಸುತ್ತಿದೆ. ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ವಿಧಾನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ.

ಡಿಜಿಟಲ್‌ ಆಸ್ತಿಗಳ ಆದಾಯಕ್ಕೆ ಶೇ.30ರಷ್ಟು ತೆರಿಗೆ

ವರ್ಚುವಲ್/ಡಿಜಿಟಲ್ ಆಸ್ತಿಗಳ ಆದಾಯಕ್ಕೆ ಶೇ.30ರಷ್ಟು ತೆರಿಗೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ ಎಂದರು.

ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಯಾವುದೇ ಖರ್ಚು ಅಥವಾ ಭತ್ಯೆಗೆ ಸಂಬಂಧಿಸಿದಂತೆ ಯಾವುದೇ ಕಡಿತಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 1:08 PM IST

ABOUT THE AUTHOR

...view details