ನಾಗ್ಪುರ :ಜಿಎಸ್‌ಟಿ ಗುಪ್ತದಳ ಮಹಾ ನಿರ್ದೇಶಕರ (ಡಿಜಿಜಿಐ) ತಂಡ ಮಹಾರಾಷ್ಟ್ರದಲ್ಲಿ 26 ಘಟಕಗಳಿಂದ 498.50 ರೂ. ಮೋಸದ ವಹಿವಾಟು ಪತ್ತೆ ಹಚ್ಚಿದ್ದಾರೆ. 26 ಘಟಕಗಳ ಪೈಕಿ 12.78 ಕೋಟಿ ರೂ. ಮೌಲ್ಯದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೇರಿದ್ದು, ಸ್ಥಳದಲ್ಲೇ ನಗದು ವಸೂಲಿ ಮಾಡಲಾಗಿದೆ. ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಡಿಜಿಜಿಐ ಪ್ರಕಟಣೆಯಲ್ಲಿ ತಿಳಿಸಿದೆ.
ನಕಲಿ ಇನ್‌ವಾಯ್ಸ್‌ಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಕಳೆದ 15 ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ವಿವಿಧ ಕೈಗಾರಿಕಾ ಕ್ಷೇತ್ರ ಒಳಗೊಂಡ ಹಲವು ಸ್ಥಳಗಳಲ್ಲಿ ಡಿಜಿಪಿಐ, ನಾಗ್ಪುರ ವಲಯ ಘಟಕದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ತನಿಖೆಯ ಸಮಯದಲ್ಲಿ ಘಟಕಗಳು ಸುಪಾರಿ ಮತ್ತು ಕಲ್ಲಿದ್ದಲಿನಿಂದ ಹಿಡಿದು ಜವಳಿ ಮತ್ತು ಕಬ್ಬಿಣ ಉತ್ಪನ್ನಗಳವರೆಗೆ ವಿವಿಧ ರೀತಿಯ ಸರಕುಗಳ ವ್ಯಾಪಾರ ತೆರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ.