ಕರ್ನಾಟಕ

karnataka

ETV Bharat / business

ಏಷ್ಯಾ ದೇಶಗಳಲ್ಲಿ ಕ್ಷೀಣ ಅಭಿವೃದ್ಧಿ:  ಶೇ 4ಕ್ಕೆ ಕುಸಿಯಲಿದೆ ಭಾರತದ ಜಿಡಿಪಿ - ದಕ್ಷಿಣ ಏಷ್ಯಾ

ಇತ್ತೀಚಿನ ಕೈಗಾರಿಕಾ ಕ್ರಾಂತಿಯ ದೇಶಗಳಾದ ಹಾಂಕಾಂಗ್​​​ ಹಾಗೂ ಚೀನಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ತೈಪೆ ದೇಶಗಳನ್ನು ಹೊರತುಪಡಿಸಿದರೆ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆ ಪ್ರಸಕ್ತ ಸಾಲಿನಲ್ಲಿ ಶೇ 0.4 ರಷ್ಟು ಹಾಗೂ 2021 ರಲ್ಲಿ ಶೇ 6.6 ಇರಲಿದೆ.

India's GDP to contract
India's GDP to contract

By

Published : Jun 18, 2020, 2:37 PM IST

ನವದೆಹಲಿ: 2020 ನೇ ಸಾಲಿನಲ್ಲಿ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿ ದರ ತೀರಾ ಕ್ಷೀಣವಾಗಿರಲಿದ್ದು, ಭಾರತದ ಆರ್ಥಿಕತೆ ಶೇ 4 ರಷ್ಟು ಕುಸಿಯಲಿದೆ ಎಂದು ಏಷ್ಯನ್​​​ ಡೆವಲಪ್​ಮೆಂಟ್ ಬ್ಯಾಂಕ್ (ಎಡಿಬಿ) ಅಂದಾಜು ಮಾಡಿದೆ. ಏಷ್ಯಾ ರಾಷ್ಟ್ರಗಳ ಅಭಿವೃದ್ಧಿ ದರ ಕುಸಿತಕ್ಕೆ ಕೊರೊನಾ ವೈರಸ್​ ಬಿಕ್ಕಟ್ಟೇ ಕಾರಣ ಎಂದು ಅದು ಹೇಳಿದೆ.

ಕೊರೊನಾ ವೈರಸ್​ ಹರಡುವಿಕೆಯನ್ನು ತಡೆಯಲು ಬಹುತೇಕ 40 ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಧಿಸಲಾಗಿರುವ ಲಾಕ್​ಡೌನ್​ ಕ್ರಮಗಳಿಂದಾಗಿ ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಬಾಹ್ಯ ಬೇಡಿಕೆಗಳು ಗಣನೀಯವಾಗಿ ಕುಸಿತವಾಗಿವೆ ಎಂದು ಎಡಿಬಿ ತಿಳಿಸಿದೆ.

ಇತ್ತೀಚಿನ ಕೈಗಾರಿಕಾ ಕ್ರಾಂತಿಯ ದೇಶಗಳಾದ ಹಾಂಕಾಂಗ್​​​​ ಹಾಗೂ ಚೀನಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ತೈಪೆ ದೇಶಗಳನ್ನು ಹೊರತುಪಡಿಸಿದರೆ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆ ಪ್ರಸಕ್ತ ಸಾಲಿನಲ್ಲಿ ಶೇ 0.4 ರಷ್ಟು ಹಾಗೂ 2021 ರಲ್ಲಿ ಶೇ 6.6 ಇರಲಿದೆ.

ಒಟ್ಟಾರೆ ದಕ್ಷಿಣ ಏಷ್ಯಾ ಪರಿಗಣಿಸಿದಲ್ಲಿ 2020 ರಲ್ಲಿ ಈ ಭಾಗದ ದೇಶಗಳ ಬೆಳವಣಿಗೆ ದರ ಶೇ 3 ಕ್ಕೆ ಕುಸಿಯಲಿದೆ. ಏಪ್ರಿಲ್​ನಲ್ಲಿ ಈ ಅಂದಾಜು ಪ್ರಮಾಣ ಶೇ 4.1 ರಷ್ಟಿತ್ತು. ಹಾಗೆಯೇ 2021 ರ ಸಾಲಿಗೆ ದಕ್ಷಿಣ ಏಷ್ಯಾ ಈ ಮುನ್ನ ಅಂದಾಜಿಸಿದ್ದ ಶೇ 4.9 ನ್ನು ಮೀರಿ ಶೇ 6 ರಷ್ಟು ಬೆಳವಣಿಗೆ ದರ ಸಾಧಿಸಲಿದೆ ಎಂದು ಎಡಿಬಿ ಮಾಹಿತಿ ನೀಡಿದೆ.

2021ರ ಮಾರ್ಚ್​ 31 ಕ್ಕೆ ಕೊನೆಗೊಳ್ಳುವ ಹಣಕಾಸು ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 4ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details