ಕರ್ನಾಟಕ

karnataka

ETV Bharat / business

ಮೋದಿ ಕ್ಯಾಬಿನೆಟ್​ನ 65 ಸಚಿವಾಲಯಗಳಲ್ಲಿ ಸದಾನಂದ ಗೌಡರ ರಸಗೊಬ್ಬರ ಖಾತೆಗೆ 3ನೇ ಸ್ಥಾನ

ಡಿ ವಿ ಸದಾನಂದಗೌಡ ಅವರು ಸಚಿವರಾಗಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ರಸಗೊಬ್ಬರಗಳ ಇಲಾಖೆಯು 16 ಆರ್ಥಿಕ ಸಚಿವಾಲಯ/ ಇಲಾಖೆಗಳಲ್ಲಿ 2ನೇ ಸ್ಥಾನದಲ್ಲಿದೆ. 65 ಸಚಿವಾಲಯಗಳ ಪೈಕಿ 3ನೇ ಸ್ಥಾನ ಪಡೆದಿದೆ. ದತ್ತಾಂಶ ಆಡಳಿತ ಗುಣಮಟ್ಟ ಸೂಚ್ಯಂಕದಲ್ಲಿ (ಡಿಜಿಕ್ಯುಐ) 5ರ ಅಂಕಗಳಲ್ಲಿ 4.11 ಅಂಕ ಗಿಟ್ಟಿಸಿಕೊಂಡಿದೆ.

Modi Cabinet
ಮೋದಿ ಕ್ಯಾಬಿನೆಟ್​

By

Published : Oct 2, 2020, 3:34 PM IST

ನವದೆಹಲಿ: ಕೇಂದ್ರ ಯೋಜನೆಗಳ ಅನುಷ್ಠಾನ ಹಾಗೂ ಅವುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ರಸಗೊಬ್ಬರ ಇಲಾಖೆಯು 65 ಸಚಿವಾಲಯ/ ಇಲಾಖೆಗಳಲ್ಲಿ ಮೂರನೇ ಸ್ಥಾನ ಪಡೆದಿದೆ.

ಡಿ ವಿ ಸದಾನಂದಗೌಡ ಅವರು ಸಚಿವರಾಗಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ರಸಗೊಬ್ಬರಗಳ ಇಲಾಖೆಯು 16 ಆರ್ಥಿಕ ಸಚಿವಾಲಯ/ ಇಲಾಖೆಗಳಲ್ಲಿ 2ನೇ ಸ್ಥಾನದಲ್ಲಿದೆ. 65 ಸಚಿವಾಲಯಗಳ ಪೈಕಿ 3ನೇ ಸ್ಥಾನ ಪಡೆದಿದೆ. ದತ್ತಾಂಶ ಆಡಳಿತ ಗುಣಮಟ್ಟ ಸೂಚ್ಯಂಕದಲ್ಲಿ (ಡಿಜಿಕ್ಯುಐ) 5ರ ಅಂಕಗಳಲ್ಲಿ 4.11 ಅಂಕ ಗಿಟ್ಟಿಸಿಕೊಂಡಿದೆ.

ಕೇಂದ್ರ ವಲಯ ಯೋಜನೆಗಳು (ಸಿಎಸ್) ಮತ್ತು ಕೇಂದ್ರೀಯ ಪ್ರಾಯೋಜಿತ ಯೋಜನೆಗಳ (ಸಿಎಸ್ಎಸ್) ಅನುಷ್ಠಾನದ ಕುರಿತು ವಿವಿಧ ಸಚಿವಾಲಯ/ಇಲಾಖೆಗಳ ಕಾರ್ಯಕ್ಷಮತೆ ನಿರ್ಣಯಿಸಲು ಅಭಿವೃದ್ಧಿ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಕಚೇರಿ (ಡಿಎಂಇಒ) ಹಾಗೂ ನೀತಿ ಆಯೋಗ ಈ ಸಮೀಕ್ಷೆಯನ್ನು ನಡೆಸಿತ್ತು.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡರು ಮಾತನಾಡಿ, ಸಚಿವಾಲಯಗಳ/ಇಲಾಖೆಗಳ ವರದಿ ಕಾರ್ಡ್ ಜನರ ಮುಂದಿಡಲು ಡಿಎಂಇಒ ಹಾಗೂ ನೀತಿ ಆಯೋಗ ಮಾಡಿದ ಇಂತಹ ಪ್ರಯತ್ನವು ಹೆಚ್ಚು ಪ್ರಶಂಸನೀಯವಾಗಿದೆ. ನಿರೀಕ್ಷಿತ ಗುರಿಗಳನ್ನು ಸಾಧಿಸಲು ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನ ಚೌಕಟ್ಟನ್ನು ಸುಧಾರಿಸಲು ಇದು ನೆರವಾಗಲಿದೆ ಎಂದಿದ್ದಾರೆ.

ಸಮೀಕ್ಷೆಯಲ್ಲಿ ಡಿಜಿಕ್ಯುಐ ಆರು ಪ್ರಮುಖ ವಿಷಯಗಳ ಅಡಿಯಲ್ಲಿ ಆನ್‌ಲೈನ್ ಪ್ರಶ್ನಾವಳಿ ತಯಾರಿಸಿತ್ತು. ಡೇಟಾ ಉತ್ಪಾದನೆ; ಡೇಟಾ ಗುಣಮಟ್ಟ; ತಂತ್ರಜ್ಞಾನದ ಬಳಕೆ; ಡೇಟಾ ವಿಶ್ಲೇಷಣೆ, ಬಳಕೆ ಮತ್ತು ಪ್ರಸಾರ; ಡೇಟಾ ಸುರಕ್ಷತೆ ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯ ಮತ್ತು ವಿಷಯ ಅಧ್ಯಯನ ಅಂಶಗಳು ಒಳಗೊಂಡಿದ್ದವು.

ನೇರವಾದ ಅಪ್ರಸ್ತುತ ಹೋಲಿಕೆ ತಪ್ಪಿಸಲು, ಸಚಿವಾಲಯ/ಇಲಾಖೆಗಳನ್ನು ಆಡಳಿತ, ಕಾರ್ಯತಂತ್ರ, ಮೂಲಸೌಕರ್ಯ, ಸಾಮಾಜಿಕ, ಆರ್ಥಿಕ ಮತ್ತು ವೈಜ್ಞಾನಿಕ ಎಂದು ಆರು ವಿಭಾಗಗಳಾಗಿ ವಿಂಗಡಿಸಲಾಗಿತ್ತು.

ABOUT THE AUTHOR

...view details