ಕರ್ನಾಟಕ

karnataka

ETV Bharat / business

ಬ್ಯಾಂಕ್​ ದಿವಾಳಿಯಾದರೂ ಇನ್ನು ಮುಂದೆ 'ಬ್ಯಾಂಕ್ ಡೆಪಾಸಿಟ್​' ಬಗ್ಗೆ ಚಿಂತಿಸಬೇಕಿಲ್ಲ

ಠೇವಣಿದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಸರ್ಕಾರವು ಕಳೆದ ವರ್ಷ ಠೇವಣಿ ವಿಮಾ ರಕ್ಷಣೆ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಿತ್ತು. ಆದರೆ, ಈ ಹಕ್ಕನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಮಾಡಬಹುದು. ಇದರರ್ಥ ಬ್ಯಾಂಕಿನ ಪರವಾನಗಿಯನ್ನು ಹಿಂತೆಗೆದುಕೊಂಡಾಗ, ಅದರ ದಿವಾಳಿ ಪ್ರಕ್ರಿಯೆಯು ಪ್ರಾರಂಭವಾದಾಗ ಅದನ್ನು ಕ್ಲೈಮ್ ಮಾಡಬಹುದು.

banks
banks

By

Published : Feb 2, 2021, 2:45 PM IST

ನವದೆಹಲಿ: ತೊಂದರೆಗೀಡಾದ ಬ್ಯಾಂಕ್​ಗಳ ಠೇವಣಿದಾರರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕ್ರಮಕ್ಕಾಗಿ ಕಾಯದೇ ತಮ್ಮ ಹಣವನ್ನು ಮುಂಚಿತವಾಗಿ ಹಿಂಪಡೆಯಬಹುದು.

ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆ 1961, (ಡಿಐಜಿಸಿ ಕಾಯ್ದೆ) ತಿದ್ದುಪಡಿ ಮಾಡಲು ಬಜೆಟ್ 2021 ಪ್ರಸ್ತಾಪಿಸಿದೆ. ಠೇವಣಿದಾರರಿಗೆ ಬ್ಯಾಂಕ್ ತನ್ನ ಜವಾಬ್ದಾರಿಗಳನ್ನು ಪೂರೈಸಲು ವಿಫಲವಾದರೆ, ಹಣವನ್ನು ಪಡೆಯಲು ಈ ಸೌಲಭ್ಯವು ಲಭ್ಯವಿರುತ್ತದೆ.

ಬ್ಯಾಂಕನ್ನು ಆರ್‌ಬಿಐ ಪರಿಶೀಲನೆಗೆ ಒಳಪಡಿಸಲಾಗಿದ್ದರೂ ಬ್ಯಾಂಕಿನ ಗ್ರಾಹಕರಿಗೆ 5 ಲಕ್ಷ ರೂ. ಠೇವಣಿ ವಿಮಾ ಮಿತಿ ಲಭ್ಯವಿರುತ್ತದೆ. ಆದರೆ, ಬ್ಯಾಂಕ್​ನ ಸಾಮಾನ್ಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಠೇವಣಿದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಸರ್ಕಾರವು ಕಳೆದ ವರ್ಷ ಠೇವಣಿ ವಿಮಾ ರಕ್ಷಣೆ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಿತ್ತು. ಆದರೆ, ಈ ಹಕ್ಕನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ಮಾಡಬಹುದು. ಇದರರ್ಥ ಬ್ಯಾಂಕಿನ ಪರವಾನಗಿ ಹಿಂತೆಗೆದುಕೊಂಡಾಗ, ಅದರ ದಿವಾಳಿ ಪ್ರಕ್ರಿಯೆಯು ಪ್ರಾರಂಭವಾದಾಗ ಅದನ್ನು ಕ್ಲೈಮ್ ಮಾಡಬಹುದು.

ಇದನ್ನೂ ಓದಿ: ಕೋಲು ಕೊಟ್ಟು ಹೊಡೆಸಿಕೊಂಡ ಜಾಕ್​ ಮಾ: ಚೀನಾ ಏಟಿಗೆ ಏಷ್ಯಾದ ಕುಬೇರ ಕಂಗಾಲು!

ಕಟ್ಟುನಿಟ್ಟಾದ ನಿಯಮಗಳಿಂದಾಗಿ ಸಾಕಷ್ಟು ಒತ್ತಡದಲ್ಲಿರುವ ಬ್ಯಾಂಕ್​ಗಳು ಈ ವರ್ಗಕ್ಕೆ ಬರುವುದಿಲ್ಲ. ಬಿಕ್ಕಟ್ಟಿನ ಪ್ರಾರಂಭದ ಮೊದಲು ಜನರು ಹಿಂತೆಗೆದುಕೊಳ್ಳುವ ಮೊತ್ತವನ್ನು ಸೀಮಿತಗೊಳಿಸಿ ಆರ್‌ಬಿಐ ಬ್ಯಾಂಕ್​​ ಅಮಾನತುಗೊಳಿಸಿತು. ಕೆಲವು ವ್ಯಾಜ್ಯಗಳು ಶೀಘ್ರದಲ್ಲೇ ಪರಿಹಾರ ಕಂಡುಕೊಂಡರೇ ಇತರ ವ್ಯಾಜ್ಯಗಳು ವರ್ಷಗಳೇ ತೆಗೆದುಕೊಳ್ಳಬಹುದು. ಅಂದರೆ, ಠೇವಣಿದಾರರಿಗೆ ಕೆಲವು ವರ್ಷಗಳವರೆಗೆ ತಮ್ಮ ಹಣ ತೆಗೆದುಕೊಳ್ಳುವ ಅವಕಾಶ ಇಲ್ಲದೆಯೂ ಇರಬಹುದು.

ಡಿಐಸಿಸಿ ಕಾಯ್ದೆಗೆ ತಿದ್ದುಪಡಿ ಮಾಡುವುದರಿಂದ ಠೇವಣಿದಾರರು 5 ಲಕ್ಷ ರೂ. ವರೆಗೆ ಹಿಂಪಡೆಯುವ ಸಾಧ್ಯತೆ ಇದೆ. ಸುರಕ್ಷತೆಯ ಕಡಿಮೆ ಆದಾಯದ ಹೊರತಾಗಿಯೂ ಗ್ರಾಹಕರು ಹೆಚ್ಚಾಗಿ ಬ್ಯಾಂಕ್​ಗಳತ್ತ ಮುಖ ಮಾಡುತ್ತಿರುವ ಸಮಯದಲ್ಲಿ, ಈ ನಿರ್ಧಾರವು ಅವರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details