ಕರ್ನಾಟಕ

karnataka

ದೆಹಲಿ ಗಲಭೆ ಬಾಧಿತರ, ಮನೆ, ವಾಹನಗಳ ನಷ್ಟ ಪರಿಹಾರಕ್ಕೆ ಮೋದಿ​ ಮಾಸ್ಟರ್ ಪ್ಲಾನ್

ಇಲ್ಲಿಯವರೆಗೆ ಸಲ್ಲಿಸಲಾದ ಹೆಚ್ಚಿನ ಕ್ಲೈಮ್ಸ್​ಗಳಲ್ಲಿ ಮೋಟಾರು ವಾಹನಕ್ಕೆ ಸಂಬಂಧಿಸಿದ ಹಾನಿ ಮತ್ತು ವ್ಯವಹಾರ ನಷ್ಟಗಳಿವೆ. ಭಾರತದಲ್ಲಿ ಆಸ್ತಿ, ವ್ಯಾಪಾರ, ಅಂಗಡಿಗಳು ಮತ್ತು ಮನೆಗಳಿಗೆ ಸಾಮಾನ್ಯವಾಗಿ ವಿಮೆ ಪರಿಹಾರ ಕೊಡುವುದಿಲ್ಲ. ಮೋಟಾರು ವಿಮೆ ಕಡ್ಡಾಯ ಇರುವುದರಿಂದ ವಾಹನ ಹಾನಿಗೆ ಮಾತ್ರ ಇಲ್ಲಿಯವರೆಗೆ ಕ್ಲೈಮ್​ ಮಾಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ವಿಕಸನಗೊಳ್ಳುತ್ತಿದೆ ಎಂದು ಖಾಸಗಿ ವಿಮಾ ಸಂಸ್ಥೆಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

By

Published : Mar 2, 2020, 10:40 PM IST

Published : Mar 2, 2020, 10:40 PM IST

Pm Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ:ಈಶಾನ್ಯ ದೆಹಲಿಯ ಗಲಭೆ ಪೀಡಿತ ಪ್ರದೇಶಗಳಿಂದ ಬರುವ ವಿಮಾ ನಷ್ಟ ಪರಿಹಾರದ ಕ್ಲೈಮ್​ ಅನ್ನು ತ್ವರಿತ ಮತ್ತು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಪಡಿಸುವ ಕುರಿತು ಪ್ರಧಾನಮಂತ್ರಿಗಳ ಕಚೇರಿ ರಾಜ್ಯ ವಿಮೆದಾರರ ಸಭೆ ಕರೆದಿದೆ.

ಗಲಭೆ ಪೀಡಿತ ಪ್ರದೇಶಗಳ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ. ಇವು ಆರಂಭಿಕ ದಿನಗಳಾಗಿದ್ದು, ಪ್ರಾಥಮಿಕ ಅಂದಾಜು ಅನ್ವಯ 10-15 ಕೋಟಿ ರೂ. ವಿಮಾ ಕ್ಲೈಮ್ಸ್​ ಇರಬಹುದು ಎನ್ನಲಾಗುತ್ತಿದೆ. ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ನಷ್ಟ ಪ್ರಮಾಣದ ಸಮೀಕ್ಷಾ ಕಾರ್ಯ ಆರಂಭವಾಗಲಿದೆ.

ಪಿಎಂಒ, ಈಗಾಗಲೇ ನಿರೀಕ್ಷಿತ ಮತ್ತು ಸಂಭವನೀಯ ಪರಿಸ್ಥಿತಿಯ ಮೇಲೆ ನಿಗವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೀವ ವಿಮೆದಾರ ಎಲ್ಐಸಿಯು ದೆಹಲಿ ಗಲಭೆಯಲ್ಲಿ ಹತ್ಯೆಯಾದ ಪೊಲೀಸ್ ಹೆಡ್ ಕಾನ್​ಸ್ಟೆಬಲ್ ಅವರ ವಿಮೆಯನ್ನು ಇತ್ಯರ್ಥಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ಸಲ್ಲಿಸಲಾದ ಹೆಚ್ಚಿನ ಕ್ಲೈಮ್ಸ್​ಗಳಲ್ಲಿ ಮೋಟಾರು ವಾಹನಕ್ಕೆ ಸಂಬಂಧಿಸಿದ ಹಾನಿ ಮತ್ತು ವ್ಯವಹಾರ ನಷ್ಟಗಳಿವೆ. ಭಾರತದಲ್ಲಿ ಆಸ್ತಿ, ವ್ಯಾಪಾರ, ಅಂಗಡಿಗಳು ಮತ್ತು ಮನೆಗಳಿಗೆ ಸಾಮಾನ್ಯವಾಗಿ ವಿಮೆ ಪರಿಹಾರ ಕೊಡುವುದಿಲ್ಲ. ಮೋಟಾರು ವಿಮೆ ಕಡ್ಡಾಯ ಇರುವುದರಿಂದ ವಾಹನ ಹಾನಿಗೆ ಮಾತ್ರ ಇಲ್ಲಿಯವರೆಗೆ ಕ್ಲೈಮ್​ ಮಾಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ವಿಕಸನಗೊಳ್ಳುತ್ತಿದೆ ಎಂದು ಖಾಸಗಿ ವಿಮಾ ಸಂಸ್ಥೆಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ರಾಜ್ಯ ವಿಮಾ ಪಿಎಸ್‌ಯುನ ಹಿರಿಯ ಕಾರ್ಯನಿರ್ವಾಹಕರೊಬ್ಬರು, ಸರ್ಕಾರವು ಕ್ಲೈಮ್ಸ್​ ಕುರಿತು ಸಭೆ ಕರೆದಿದೆ. ಆದರೆ, ಈಗಿನಂತೆ ಅವರು ಈ ಪ್ರದೇಶದಿಂದ ಯಾವುದನ್ನೂ ಸ್ವೀಕರಿಸಿಲ್ಲ ಎಂದರು.

ಇವೆಲ್ಲ ಆರಂಭಿಕ ಸಮಯ. ಈಗ ಸಾಮಾನ್ಯವಾಗಿ ತೆವಳುತ್ತ ಸಾಗುತ್ತಿದೆ. ಅವರು ಈಗಾಗಲೇ ಒಂದು ಸಭೆ ನಡೆಸಿದ್ದಾರೆ. ಇನ್ನೂ ಒಂದು ಸಭೆ ನಡೆಯುತ್ತಿದೆ. ಪ್ರಧಾನ ಕಾರ್ಯದರ್ಶಿ ಇದನ್ನು ಪರಿಶೀಲಿಸುತ್ತಿದ್ದಾರೆ. ನಾವು ಈ ಬಗ್ಗೆ ಹೇಗೆ ಹೋಗಬೇಕೆಂದು ಕಂಡುಕೊಳ್ಳುತ್ತಿದ್ದೇವೆ. ಅವರು (ಪಿಎಂಒ) ಗಲಭೆ ಪೀಡಿತರಿಗೆ ಅವರ ನಷ್ಟದ ಪರಿಹಾರ ಹೇಗೆ ತಲುಪಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ. ವಿಮಾ ಕಂಪನಿಗಳು ತಮ್ಮಯಾದ ನಿಯಮಗಳನ್ನು ಹೊಂದಿವೆ. ಕ್ಲೈಮ್ಸ್​ ಇದ್ದರೆ ಜನರು ಬರಬೇಕು. ಆ ಮಾರ್ಗದರ್ಶನವು ಹಣಕಾಸು ಸಚಿವಾಲಯದಿಂದ ವಿಶೇಷವಾಗಿ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಬರಬೇಕಿದೆ ಎಂದು ಕಾರ್ಯನಿರ್ವಾಹಕರು ಹೇಳಿದರು.

ABOUT THE AUTHOR

...view details