ನವದೆಹಲಿ:ನಕಲಿ ದಾಖಲೆಗಳ ಮೇಲೆ ಅಸ್ತಿತ್ವದಲ್ಲಿ ಇಲ್ಲದ ಸಂಸ್ಥೆಗಳ ಹೆಸರಿನಡಿ ಸರಕು ಮತ್ತು ಸೇವೆಗಳ ಆರ್ಡರ್ ಸ್ವೀಕೃತಿ ಹಾಗೂ ಪೂರೈಕೆಯ ತೆರಿಗೆ ವಂಚನೆ ಎಸಗಿದ ಆರೋಪದಡಿ ಜಿಎಸ್‌ಟಿ ಇಂಟೆಲಿಜೆನ್ಸ್‌ನ (ಡಿಜಿಜಿಐ) ಗುರುಗ್ರಾಮ್ ವಲಯ ಘಟಕದ ನಿರ್ದೇಶನಾಲಯ (ಜಿಜಿಯು) ದೆಹಲಿ ನಿವಾಸಿಗಳನ್ನು ಬಂಧಿಸಿದೆ.
ಶಮ್‌ಶಾದ್ ಸೈಫಿ ಅವರು ಅಸ್ತಿತ್ವದಲ್ಲಿ ಇಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಖೊಟ್ಟಿ ದಾಖಲೆಗಳ ಆಧಾರದ ಮೇಲೆ ನವದೆಹಲಿ ಮೂಲದ ಮೆ /ಎಸ್ ಟೆಕ್ನೋ ಎಲೆಕ್ಟ್ರಿಕಲ್ ಮತ್ತು ಎಂ/ಎಸ್ ಲತಾ ಸೇಲ್ಸ್ ಸಂಸ್ಥೆ ಹುಟ್ಟುಹಾಕಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಎಂ / ಎಸ್ ಟೆಕ್ನೋ 98.09 ಕೋಟಿ ರೂ. ವಂಚನೆಯ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಎಂ / ಎಸ್ ಲತಾ ಕಂಪನಿಗೆ ರವಾನಿಸಿದ್ದಾರೆ. ಇದೇ ರೀತಿಯಾಗಿ ಅಸ್ತಿತ್ವದಲ್ಲಿಲ್ಲದ ವಿವಿಧ ಸಂಸ್ಥೆಗಳಿಗೆ ಸುಮಾರು 69.59 ಕೋಟಿ ರೂ. ವರ್ಗಾಯಿಸಿದ್ದಾರೆ ಎಂದು ತನಿಖಾ ತಂಡ ತಿಳಿಸಿದೆ.