ಕರ್ನಾಟಕ

karnataka

ETV Bharat / business

ಆರ್​​​ಬಿಐಗೆ ಹೊಸ ಕಾರ್ಯಕಾರಿ ನಿರ್ದೇಶಕರ ನೇಮಕ: ಆ ಹೊಸ ಮುಖಗಳ್ಯಾರು? - ಆರ್​​​ಬಿಐಗೆ ಹೊಸ ಕಾರ್ಯಕಾರಿ ನಿರ್ದೇಶಕರ ನೇಮಕ

ಅಜಯ ಕುಮಾರ್​​ ಚೌಧರಿ ಮತ್ತು ದೀಪಕ್​ ಕುಮಾರ್​ ಎಂಬುವವರನ್ನು ಕೇಂದ್ರ ಬ್ಯಾಂಕ್​​ನ ಹೊಸ ಕಾರ್ಯಕಾರಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Deepak Kumar, Ajay Kumar Choudhary appointed as new executive directors of RBI
Deepak Kumar, Ajay Kumar Choudhary appointed as new executive directors of RBI

By

Published : Jan 5, 2022, 7:23 AM IST

ನವದೆಹಲಿ:ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಅಜಯ ಕುಮಾರ್​ ಚೌಧರಿ ಹಾಗೂ ದೀಪಕ್​ ಕುಮಾರ್​ ಎಂಬುವವರನ್ನು ಹೊಸ ಕಾರ್ಯಕಾರಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಜನವರಿ ಮೂರರಿಂದಲೇ ನೂತನವಾಗಿ ನೇಮಕವಾಗಿರುವ ಈ ಎಕ್ಸುಕ್ಯೂಟಿವ್​​ ಡೈರೆಕ್ಟರ್​ಗಳ ಅಧಿಕಾರಾವಧಿ ಶುರುವಾಗಲಿದೆ ಎಂದು ಆರ್​​ಬಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಬ್ಯಾಂಕ್​​​ನ ಸೂಪರ್​​​ವೈಸನ್​​ ಡಿಪಾರ್ಟ್​​ಮೆಂಟ್​​ನ ಮುಖ್ಯಸ್ಥರಾಗಿ ಅಜಯ್​ ಚೌಧರಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ದೀಪಕ್​ ಕುಮಾರ್​​​​​​​​​​ ಆರ್​ಬಿಐನ ಇನ್ಫರ್ಮೇಷನ್​​ ಟೆಕ್ನಾಲಜಿ ಡಿಪಾರ್ಟ್​​ಮೆಂಟ್​​ನ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.

ದೀಪಕ್​ ಕುಮಾರ್​ ದೆಹಲಿ ಸ್ಕೂಲ್​ ಆಫ್​ ಎಕಾನಾಮಿಕ್ಸ್​​ನ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಆರ್​ಬಿಐನ ಅಂಗವಾದ ಫಾರಿನ್​ ಎಕ್ಸೆಂಜ್​ ಡಿಪಾರ್ಟ್​​ಮೆಂಟ್​​, ಮಾಹಿತಿ ವಿಭಾಗ, ಕ್ರೆಡಿಟ್​ ಗ್ಯಾರಂಟಿ ಕಾರ್ಪೋರೇಷನ್​​ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇನ್ನು ಅಜಯ ಕುಮಾರ್​ ಚೌಧರಿ ಅವರು ದೆಹಲ ವಿವಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಆರ್​ಬಿಐನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ:ದೈಹಿಕ ಆರೋಗ್ಯದಂತೆಯೇ ಆರ್ಥಿಕ ಆರೋಗ್ಯ: ಹಣಕಾಸು ವ್ಯವಹಾರದ ಮೇಲಿರಲಿ ನಿಗಾ

For All Latest Updates

ABOUT THE AUTHOR

...view details