ಕರ್ನಾಟಕ

karnataka

ETV Bharat / business

ರೈತರ-ವರ್ತಕರ ಮಧ್ಯೆ ನೇರ ಮಾರುಕಟ್ಟೆ ಸಂಪರ್ಕ ಸಾಧಿಸಲು ಇ-ಕಾಮರ್ಸ್​ ಪೋರ್ಟಲ್​ ಅಭಿವೃದ್ಧಿ: ನಬಾರ್ಡ್​ ಅಧ್ಯಕ್ಷ - Crop Loan

ನಬಾರ್ಡ್ ದೇಶಾದ್ಯಂತ 4450 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಉತ್ತೇಜಕವಾಗಿದೆ. ಈ ಎಫ್‌ಪಿಒಗಳ ಷೇರುದಾರರ ಪೈಕಿ ಸುಮಾರು ಶೇ 80ರಷ್ಟು ಸಣ್ಣ ಮತ್ತು ಕಿರು ರೈತರಿದ್ದಾರೆ. ಈ ರೈತರನ್ನು ನೇರವಾಗಿ ಮಾರುಕಟ್ಟೆ ವರ್ತಕರ ಜೊತೆಗೆ ಸಂಪರ್ಕಿಸಲು ನಬಾರ್ಡ್​, ಇ-ಕಾಮರ್ಸ್‌ ಪೋರ್ಟಲ್ ಅಭಿವೃದ್ಧಿಪಡಿಸುತ್ತಿದೆ ಎಂದು ನಬಾರ್ಡ್ ಅಧ್ಯಕ್ಷ ಚಿಂತಲ ಗೋವಿಂದ ರಾಜು ಅವರು 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

Chintala Govinda Raju
ಚಿಂತಲ ಗೋವಿಂದ ರಾಜು

By

Published : Jun 23, 2020, 6:06 PM IST

ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂ. ಮೊತ್ತದ ಆತ್ಮನಿರ್ಭರ ಭಾರತ ಅಭಿಯಾನದ ವಿಶೇಷ ಪ್ಯಾಕೇಜ್ ಘೋಷಿಸಿದೆ. ಇದರ ಅಡಿಯಲ್ಲಿ ಕೃಷಿ ಕ್ಷೇತ್ರದ ಬೆಂಬಲವಾಗಿ ವಿವಿಧ ಕ್ರಮಗಳನ್ನು ಪ್ರಕಟಿಸಿದೆ. ಕೃಷಿ ಮಾರುಕಟ್ಟೆ ಸುಧಾರಣೆ, ರೈತರಿಗೆ ಸಾಂಸ್ಥಿಕ ಸಾಲದಂತಹ ಯೋಜನೆಗಳು ಇದರಲ್ಲಿ ಸೇರಿವೆ. ಈ ಉಪಕ್ರಮಗಳ ಕಾರ್ಯ ಸಾಧ್ಯವಾಗಿಸಲು ನಬಾರ್ಡ್, ಪ್ರಮುಖ ಪಾತ್ರ ವಹಿಸಲು ಸಜ್ಜಾಗಿದೆ.

ಈ ಹಿನ್ನೆಲೆಯಲ್ಲಿ ಕೃಷಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬ್ಯಾಂಕಿನ ಪಾತ್ರದ ಬಗ್ಗೆ ನಬಾರ್ಡ್ ಅಧ್ಯಕ್ಷ ಚಿಂತಲ ಗೋವಿಂದ ರಾಜು ಅವರು 'ಈಟಿವಿ ಭಾರತ'ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

ಪ್ರ: ಕೋವಿಡ್-19 ಆರ್ಥಿಕ ಪ್ಯಾಕೇಜಿನ ಭಾಗವಾಗಿ ನಬಾರ್ಡ್‌ಗೆ 30,000 ಕೋಟಿ ರೂ.ಯಷ್ಟು ಹೆಚ್ಚುವರಿ ರಿಫೈನಾನ್ಸ್ ಬೆಂಬಲ ನೀಡಲು ಕೇಂದ್ರ ನಿರ್ಧರಿಸಿದೆ. ಈ ಸಂಪನ್ಮೂಲಗಳನ್ನು ರೈತರಿಗೆ ತಲುಪಿಸುವ ನಿಮ್ಮ ಯೋಜನೆಗಳೇನು?

ಗೋವಿಂದ ರಾಜು: ಕೇಂದ್ರ ಹಣಕಾಸು ಸಚಿವರು ಆರ್ಥಿಕ ಪ್ಯಾಕೇಜ್​ನಲ್ಲಿ ಹಿಂದಿನ ವರ್ಷದಲ್ಲಿ ರೈತರ ಸಾಲ ಬೇಡಿಕೆ ಪೂರೈಸಲು ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಿಗೆ (ಆರ್‌ಆರ್‌ಬಿ) ಬೆಂಬಲಿಸಿದೆ. ನಬಾರ್ಡ್ ಪ್ರಸಕ್ತ ವರ್ಷದಲ್ಲಿ 90,000 ಕೋಟಿ ರೂ. ಸಾಮಾನ್ಯ ಸಾಲದ ಜತೆ ಹೆಚ್ಚುವರಿಯಾಗಿ 30,000 ಕೋಟಿ ರೂ. ಮಾನ್ಸೂನ್ ಮತ್ತು ಖಾರಿಫ್ ಚಟುವಟಿಕೆಗಳಿಗೆ ಪಡೆದಿದೆ.

ವಿಶೇಷ ದ್ರವ್ಯತೆ ಸೌಲಭ್ಯದಡಿಯಲ್ಲಿ ಆರ್‌ಬಿಐ ಹಂಚಿಕೆ ಮಾಡಿದ 25,000 ಕೋಟಿ ರೂ.ಗಳಲ್ಲಿ ನಬಾರ್ಡ್ ವಿವಿಧ ಹಂತಗಳಲ್ಲಿ ಸಾಲ ಸಂಸ್ಥೆಗಳಿಗೆ 22,977 ಕೋಟಿ ರೂ. ವರ್ಗಾಯಿಸಿದೆ. ಈ ನಿಧಿಗಳು ರೈತರಿಗೆ ಹಣಕಾಸು ಸೇವೆ ಒದಗಿವುದರಿಂದ ಬ್ಯಾಂಕ್​ಗಳ ಸಂಪನ್ಮೂಲ ವೃದ್ಧಿಸುತ್ತದೆ ಮತ್ತು ಕೋವಿಡ್ -19ನ ದ್ರವ್ಯತೆ ಬಿಕ್ಕಟ್ಟು ನಿಭಾಯಿಸಿದಂತೆ ಆಗಲಿದೆ.

ಪ್ರ: ಹಿಡುವಳಿ ರೈತರು ಬ್ಯಾಂಕ್​ಗಳಿಂದ ಸಾಲ ಪಡೆಯುವಲ್ಲಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಬಾರ್ಡ್ ಇವುಗಳನ್ನು ಹೇಗೆ ಪರಿಹರಿಸುತ್ತಿದೆ?

ಗೋವಿಂದ ರಾಜು: ಅನೌಪಚಾರಿಕ ಹಿಡುವಳಿಯಾಗಿ ಗುರುತಿಸಿಕೊಂಡವರಿಗೆ ಬ್ಯಾಂಕ್​ಗಳು ಸಾಲ ವಿಸ್ತರಿಸಲು ಸಾಧ್ಯವಾಗುವುದಿಲ್ಲ ಎಂಬ ಅಂಶ ನಮಗೆ ತಿಳಿದುಬಂದಿದೆ. ಈ ಸಮಸ್ಯೆ ಹೋಗಲಾಡಿಸಲು ಹಿಡುವಳಿ ರೈತರು ಮತ್ತು ಮೌಖಿಕ ಹಿಡುವಳಿದಾರರಿಗೆ ಶ್ಯೂರಿಟಿ ಇಲ್ಲದೆ ಸಾಲ ನೀಡಲು ಜಂಟಿ ಹೊಣೆಗಾರಿಕೆ ಗ್ರೂಪ್​ಗಳನ್ನು (ಜೆಎಲ್‌ಜಿ) ಉತ್ತೇಜಿಸುವ ಕಾರ್ಯಕ್ರಮವನ್ನು ನಬಾರ್ಡ್ ಪ್ರಾರಂಭಿಸಿತು.

2019-20ರ ಅವಧಿಯಲ್ಲಿ 41.80 ಲಕ್ಷ ಜೆಎಲ್‌ಜಿಗಳಿಗೆ ಬ್ಯಾಂಕ್​ಗಳು ಬಡ್ತಿ ನೀಡಿ ಹಣಕಾಸು ಸೇವೆ ಒದಗಿಸಿವೆ. ಪ್ರಾರಂಭದಿಂದಲೂ 92.56 ಲಕ್ಷ ಜೆಎಲ್‌ಜಿಗಳ ಪ್ರಚಾರ ಮತ್ತು ಹಣಕಾಸಿಗೆ 1,54,853 ಕೋಟಿ ರೂ. ವಿತರಿಸಲಾಗಿದೆ.

ಹಿಡುವಳಿದಾರರಿಗೆ ಶ್ಯೂರಿಟಿ ಇಲ್ಲದೆ ಸಾಲ ಉತ್ತೇಜನ ಪ್ರಚಾರ

ಪ್ರ: ನಬಾರ್ಡ್ ತನ್ನ ಬ್ಯಾಲೆನ್ಸ್ ಶೀಟ್ ಸುಧಾರಿಸಲು ಮತ್ತು ಅದರ ಮುಖ್ಯ ಉದ್ದೇಶಗಳಿಂದ ವಿಮುಖವಾಗುವತ್ತ ಗಮನ ಹರಿಸುತ್ತಿದೆ ಎಂಬ ಟೀಕೆ ಕೇಳಿಬರುತ್ತಿದೆ. ಇದಕ್ಕೆ ನೀವು ಏನು ಹೇಳುತ್ತೀರಾ?

ಗೋವಿಂದ ರಾಜು:ನನ್ನ ಪ್ರಕಾರ, ಬ್ಯಾಲೆನ್ಸ್ ಶೀಟ್​ನ ಬೆಳವಣಿಗೆ ಪ್ರಾಸಂಗಿಕವಾಗಿದೆ. ಜನರೊಂದಿಗೆ ನಮ್ಮ ಸಂಬಂಧ ಏಕಕಾಲದಲ್ಲಿ ಬೆಳೆಯುತ್ತಿದೆ. ಆರ್ಥಿಕವಾಗಿ ಪ್ರಬಲವಾದ ಸಂಸ್ಥೆಗಳು ಮಾತ್ರ ಕಡ್ಡಾಯವಾಗಿ ಇಂತಹವನ್ನು ತಲುಪಿಸಬಲ್ಲವು ಎಂಬುದು ಜಗಜ್ಜಾಹೀರಾಗಿದೆ. ನಮ್ಮ ಬ್ಯಾಲೆನ್ಸ್ ಶೀಟ್‌ನ ಬಲ ಸರ್ಕಾರಗಳು ಸೇರಿದಂತೆ ನಮ್ಮ ಪಾಲುದಾರರಲ್ಲಿ ವಿಶ್ವಾಸ ಮೂಡಿಸುತ್ತದೆ.

ನಬಾರ್ಡ್ ಯಾವಾಗಲೂ ಕೊನೆಯ ಮೈಲಿ ವಿತರಣೆಯ ಮೇಲೆ ಕೇಂದ್ರೀಕರಿಸಿದೆ. ಅಂತಿಮ ಫಲಾನುಭವಿಗಳಿಗೆ (ರೈತರು / ಕುಶಲಕರ್ಮಿಗಳು / ಗ್ರಾಮೀಣ ಉದ್ಯಮಿಗಳು) ಆದ್ಯತೆ ನೀಡುತ್ತದೆ ಎಂದು ಟೀಕೆಗೆ ಸ್ಪಷ್ಟನೆ ಕೊಟ್ಟರು.

ಪ್ರ: ಬೆಳೆ ವಿಮೆ ಇನ್ನೂ ನಮ್ಮ ರೈತರಿಗೆ ಈಡೇರದ ಕನಸಾಗಿದೆ. ಇದರಲ್ಲಿ ಸವಾಲುಗಳನ್ನು ನಿವಾರಿಸಲು ನಬಾರ್ಡ್‌ನ ಯೋಜನೆಗಳು ಏನಿವೆ?

ಗೋವಿಂದ ರಾಜು: ಅನೇಕ ರೈತರು ನಾನಾ ಕಾರಣಗಳಿಗೆ ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆ ಮಾಡಿಸುತ್ತಿಲ್ಲ. ಸಮೀಕ್ಷೆಗಳು ಬಹಿರಂಗಪಡಿಸಿದ ಮುಖ್ಯ ಅಂಶವೆಂದರೆ ಅರಿವಿನ ಕೊರತೆ. ನ್ಯಾಷನಲ್ ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್​ನ (ಎನ್‌ಎಐಎಸ್) ಪ್ರವರ್ತಕರಲ್ಲಿ ಒಂದಾದ ನಬಾರ್ಡ್, ಜಾಗೃತಿ ನಿರ್ಮಾಣ ಮತ್ತು ಸರ್ಕಾರದ ಜತೆ ಸಮನ್ವಯದ ಮೂಲಕ ಬೆಳೆ ವಿಮಾ ಯೋಜನೆಗಳ ಅಡಿಯ ನೀತಿ ಸೂತ್ರೀಕರಣದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಬೆಳೆ ವಿಮೆಯ ಪ್ರಯೋಜನಗಳನ್ನು ಹಿಡುವಳಿದಾರ ರೈತರು, ಷೇರು ಬೆಳೆಗಾರರು ಸೇರಿದಂತೆ ಇತರರಿಗೆ ವಿಸ್ತರಿಸುವ ಬಗ್ಗೆ ನಬಾರ್ಡ್ ವಿವಿಧ ರಾಜ್ಯ ಸರ್ಕಾರಗಳ ಜೊತೆ ತೊಡಗಿಸಿಕೊಂಡಿದೆ.

ಪ್ರ: ಇತ್ತೀಚಿನ ದಿನಗಳಲ್ಲಿ ಉತ್ತಮ ಕೃಷಿ ಮಾರುಕಟ್ಟೆ ಸೌಕರ್ಯಗಳ ಸ್ಥಾಪನೆಯತ್ತ ಸರ್ಕಾರ ಗಮನ ಹರಿಸಿದೆ, ಇದರಲ್ಲಿ ನಬಾರ್ಡ್‌ನ ಪಾತ್ರವೇನು?

ಗೋವಿಂದ ರಾಜು: ಕೇಂದ್ರ ಸರ್ಕಾರವು ಕೃಷಿ ಮಾರುಕಟ್ಟೆ ಮೂಲಸೌಕರ್ಯವನ್ನು ಸ್ಥಾಪಿಸಿ ದೂರದ ವಹಿವಾಟುಗಳಿಗೆ ಅನುಕೂಲವಾಗುವಂತೆ ಇಎನ್‌ಎಎಂನೊಂದಿಗೆ ಸಂಪರ್ಕ ಸಾಧಿಸಿ ಗ್ರಾಮೀಣ ಕೃಷಿ ಮಾರುಕಟ್ಟೆಗಳಲ್ಲಿ (ಗ್ರಾಮ್ಸ್) ಪದವಿ ಪಡೆಯಲು ಸುಮಾರು 10,000 ಗ್ರಾಮೀಣ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯ ಸರ್ಕಾರಗಳನ್ನು ಬೆಂಬಲಿಸಲು ನಬಾರ್ಡ್‌ನಲ್ಲಿನ ಹಣ ಬಳಕೆ ಆಗುತ್ತಿದೆ.

ಕೃಷಿ ಕ್ಷೇತ್ರವನ್ನು ಬೇಸಾಯ ಕಾರ್ಯವನ್ನು ಮೀರಿ ವ್ಯವಹಾರದ ರಂಗಕ್ಕೆ ಕೊಂಡೊಯ್ಯುವ ಪ್ರಮುಖ ಶಕ್ತಿ ಆಗಿರುವುದು ಮಾರ್ಕೆಟಿಂಗ್‌ ಪಾತ್ರ. ಆಹಾರ ಸಂಸ್ಕರಣಾ ನಿಧಿಯಡಿಯಲ್ಲಿ ಆಹಾರ ಮತ್ತು ಕೃಷಿ ಸಂಸ್ಕರಣಾ ಕೈಗಾರಿಕೆಗಳಿಗೆ ಮೂಲಸೌಕರ್ಯ ರಚಿಸಲು ರಾಜ್ಯ ಸರ್ಕಾರಗಳು, ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ನಬಾರ್ಡ್ ಬೆಂಬಲ ನೀಡುತ್ತಿದೆ.

ಪ್ರ: ಸಣ್ಣ ಮತ್ತು ಕಿರು ರೈತರು ಭಾರತೀಯ ಕೃಷಿಯಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದಾರೆ. ಈ ರೈತರಿಗೆ ಆಧುನಿಕ ತಂತ್ರಜ್ಞಾನ ತಲುಪಿಸುವ ಗುರಿಯಲ್ಲಿ ನಬಾರ್ಡ್​ ಹೇಗೆ ತೊಡಗಿಸಿಕೊಳ್ಳಲಿದೆ?

ಗೋವಿಂದ ರಾಜು:ನಬಾರ್ಡ್ ದೇಶಾದ್ಯಂತ 4450 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಉತ್ತೇಜಕವಾಗಿದೆ. ಈ ಎಫ್‌ಪಿಒಗಳ ಷೇರುದಾರರ ಪೈಕಿ ಸುಮಾರು ಶೇ. 80ರಷ್ಟು ಸಣ್ಣ ಮತ್ತು ಕಿರು ರೈತರಿದ್ದಾರೆ. ಈ ರೈತರನ್ನು ನೇರವಾಗಿ ಮಾರುಕಟ್ಟೆ ವರ್ತಕರ ಜೊತೆಗೆ ಸಂಪರ್ಕಿಸಲು ನಬಾರ್ಡ್​, ಇ-ಕಾಮರ್ಸ್‌ ಪೋರ್ಟಲ್ ಅಭಿವೃದ್ಧಿಪಡಿಸುತ್ತಿದೆ.

ಪ್ರ: ಬೆಳೆ ಸಾಲ ಪಡೆಯುವಾಗ ಓರ್ವ ರೈತ ಹಲವು ಶುಲ್ಕವನ್ನು ಪಾವತಿಸುತ್ತಿದ್ದಾನೆ. ಈ ಸಮಸ್ಯೆಯನ್ನು ನೀವು ಹೇಗೆ ಪರಿಹರಿಸಲಿದ್ದೀರಿ?

ಗೋವಿಂದ ರಾಜು: ಬೇರೆ ಬೇರೆ ಬ್ಯಾಂಕ್​ಗಳು ತಮ್ಮ ಸಾಲ ನೀತಿಯ ಭಾಗವಾಗಿ ಕೃಷಿಕರ ಸಾಲದ ಖಾತೆಗಳಿಗೆ ವಿಧಿಸುವ ಶುಲ್ಕ ನಿರ್ಧರಿಸುತ್ತವೆ. ನಬಾರ್ಡ್ ಎಲ್ಲಾ ಗ್ರಾಮೀಣ ಸಹಕಾರಿ ಬ್ಯಾಂಕ್​ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಿಗೆ 3 ಲಕ್ಷ ರೂ. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ (ಕೆಸಿಸಿ) ಮೇಲಿನ ಎಲ್ಲಾ ಇತರೆ ಶುಲ್ಕಗಳನ್ನು ಮನ್ನಾ ಮಾಡುವಂತೆ ಸೂಚಿಸಿದೆ.

ಪ್ರ: ರೈತ ಉತ್ಪಾದನಾ ಸಂಸ್ಥೆಗಳು (ಎಫ್‌ಪಿಒ) ಸಹಕಾರಿ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬಹುದಾದರೂ ಅವುಗಳನ್ನು ಕಂಪನಿ ಕಾಯ್ದೆಯಡಿ ನೋಂದಾಯಿಸಲು ಒತ್ತಾಯ ಏಕಿದೆ? ಇದು ಅನುಸರಣೆ ಹೊರೆ ಹೆಚ್ಚಿಸುವುದಿಲ್ಲವೇ?

ಗೋವಿಂದ ರಾಜು: ಕಂಪನಿ ಕಾಯ್ದೆಯಡಿ ಪ್ರತ್ಯೇಕವಾಗಿ ನೋಂದಾಯಿಸಲು ಎಫ್‌ಪಿಒಗಳನ್ನು ನಬಾರ್ಡ್ ಒತ್ತಾಯಿಸುವುದಿಲ್ಲ. ನಬಾರ್ಡ್ ಉತ್ತೇಜಿಸಿದ ಎಫ್‌ಪಿಒಗಳು ಯಾವುದೇ ಕಾನೂನು ರೂಪದಲ್ಲಿ ತಮ್ಮನ್ನು ನೋಂದಣಿ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ.

ಇತ್ತೀಚಿನವರೆಗೂ ಎಸ್‌ಎಫ್‌ಎಸಿ (ಸಣ್ಣ ರೈತರ ಕೃಷಿ ವ್ಯವಹಾರ ಒಕ್ಕೂಟ) ಜಾರಿಗೆ ತಂದಿರುವ ಸಾಲ ಖಾತರಿ ಯೋಜನೆ ಮತ್ತು ಈಕ್ವಿಟಿ ಗ್ರಾಂಟ್ ಬೆಂಬಲದ ಆದಾಯ ಕಂಪನಿ ಕಾಯ್ದೆಯಡಿ ನೋಂದಾಯಿತ ಎಫ್‌ಪಿಒಗಳಿಗೆ ಮಾತ್ರ ಅವಕಾಶವಿತ್ತು. ಕಂಪನಿ ಕಾಯ್ದೆಯಡಿ ಎಫ್‌ಪಿಒಗಳನ್ನು ನೋಂದಾಯಿಸಲು ಆದ್ಯತೆ ನೀಡಲಾಗಿತ್ತು. ಸಹಕಾರಿ ಕಾಯ್ದೆಯಡಿ ನೋಂದಾಯಿಸಲಾದ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಿಂದ (ಎನ್‌ಸಿಡಿಸಿ) ಹಣಕಾಸು ಒದಗಿಸಲಾದ ಎಫ್‌ಪಿಒಗಳನ್ನು ಸೇರಿಸಲು ಎಸ್‌ಎಫ್‌ಎಸಿ ಯೋಜನೆಯ ನಿಬಂಧನೆ ಬದಲಾಯಿಸಲಾಗಿದೆ.

ABOUT THE AUTHOR

...view details