ಕರ್ನಾಟಕ

karnataka

ETV Bharat / business

ಜ್ಯುವೆಲರಿ ಮಾಲೀಕರಿಗೆ ಸಿಹಿ ಸಮಾಚಾರ: ಹಾಲ್​ಮಾರ್ಕ್​​ ಜಾರಿಗೆ ಮಹತ್ವದ ನಿರ್ಧಾರ - ರಾಮ್ ವಿಲಾಸ್ ಪಾಸ್ವಾನ್

ಕೋವಿಡ್​-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಂಟಾದ ಅಡೆತಡೆಗಳನ್ನು ಗಮನದಲ್ಲಿ ಇಟ್ಟುಕೊಂಡು ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಅನ್ನು 2021ರ ಜನವರಿ 15ರಿಂದ ಜೂನ್ 1ರವರೆಗೆ ಗಡುವನ್ನು ವಿಸ್ತರಿಸಿದ್ದೇವೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

hallmarking
ಹಾಲ್​ಮಾರ್ಕ್

By

Published : Jul 27, 2020, 10:25 PM IST

ನವದೆಹಲಿ:ಕೋವಿಡ್​ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 2021ರ ಜೂನ್ 1ರವರೆಗೆ ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುವುದನ್ನು ಮುಂದೂಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಗೋಲ್ಡ್ ಹಾಲ್​ ಮಾರ್ಕಿಂಗ್ ಅಮೂಲ್ಯ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. ಈಗಾಗಲೇ 2000ರ ಎಪ್ರಿಲ್​ನಿಂದ ಬಿಐಎಸ್ ಚಿನ್ನದ ಆಭರಣಗಳ ಹಾಲ್​ ಮಾರ್ಕಿಂಗ್ ಯೋಜನೆ ಜಾರಿಯಲ್ಲಿದೆ. ಪ್ರಸ್ತುತ ಶೇ 40ರಷ್ಟು ಚಿನ್ನಾಭರಣಗಳನ್ನು ಮಾತ್ರವೇ ಹಾಲ್​ ಮಾರ್ಕ್​ ಮಾಡಲಾಗುತ್ತಿದೆ.

2021ರ ಜನವರಿ 15ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮೇಲೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರವು ಕಳೆದ ವರ್ಷದ ನವೆಂಬರ್‌ನಲ್ಲಿ ಘೋಷಿಸಿತ್ತು.

ಮುಖ್ಯವಾಗಿ ಸಣ್ಣ ನಗರಗಳು ಮತ್ತು ಹಳ್ಳಿಗಳಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮತ್ತು ಅವರು ಶುದ್ಧ ಚಿನ್ನಾಭರಣಗಳನ್ನು ಖರೀದಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಹೆಚ್ಚುತ್ತಿರುವ ಬೆಲೆ ಮತ್ತು ಕಡಿಮೆ ಪೂರೈಕೆಯನ್ನು ಉಲ್ಲೇಖಿಸಿದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ, ಕಡ್ಡಾಯವಾಗಿ ಚಿನ್ನದ ಹಾಲ್‌ಮಾರ್ಕಿಂಗ್‌ ನಿಯಮವನ್ನು ಇನ್ನೂ ಎರಡು ವರ್ಷ ವಿಸ್ತರಿಸುವಂತೆ ಕೇಂದ್ರವನ್ನು ಕೆಲ ದಿನಗಳ ಹಿಂದೆಯಷ್ಟೇ ಮನವಿ ಮಾಡಿತ್ತು.

ಕೋವಿಡ್​-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಂಟಾದ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ನಾವು 2021ರ ಜನವರಿ 15ರಿಂದ ಜೂನ್ 1ರವರೆಗೆ ಗಡುವನ್ನು ವಿಸ್ತರಿಸಿದ್ದೇವೆ ಎಂದು ಪಾಸ್ವಾನ್ ಅವರು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ವರ್ಷ ಜೂನ್ 1ರಿಂದ ಆಭರಣ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುವುದು. ಕೇವಲ 14, 18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ಎಂದರು.

ABOUT THE AUTHOR

...view details