ನವದೆಹಲಿ:ಎಂಎಸ್‌ಎಂಇಗಳು ಸೇರಿದಂತೆ ಕೊರೊನಾ ವೈರಸ್ ಪೀಡಿತ ವ್ಯವಹಾರಗಳಿಗೆ ಉತ್ತೇಜನ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಸಾಧ್ಯವಾಗದಿರಲು ದತ್ತಾಂಶದ ಅಲಭ್ಯತೆಯೇ ಮುಖ್ಯ ಕಾರಣ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
ಪ್ರತಿ ವ್ಯವಹಾರಕ್ಕೆ ಒಂದು ವಿಶಿಷ್ಟವಾದ ಐಡಿ ನಿಯೋಜಿಸುವ ತುರ್ತು ಅವಶ್ಯಕತೆಯಿದೆ. ಏಕೆಂದರೆ, ಇದು ಪ್ರಮುಖ ಆರ್ಥಿಕ ಕಾರ್ಯಕ್ಷಮತೆಯ ಡೇಟಾ ಸಂಗ್ರಹಿಸಲು ನೆರವಾಗುತ್ತದೆ. ವ್ಯವಹಾರದ ಎಲ್ಲ ಬ್ಯಾಂಕ್ ಖಾತೆಗಳನ್ನು ಆ ಐಡಿಗೆ ಲಿಂಕ್ ಮಾಡಲು ಅನುಕೂಲವಾಗುತ್ತದೆ ಎಂದು ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಎಂಎಸ್ಎಂಇಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಲು ಸರ್ಕಾರವು ಅಸಮರ್ಥ ಆಗಿರುವುದಕ್ಕೆ ಪ್ರಮುಖ ಕಾರಣ ಎಂದರೆ ವ್ಯವಹಾರದ ಲಭ್ಯತೆ, ಮೌಲ್ಯವರ್ಧನೆ, ಕಾರ್ಯನಿರತ ಕಾರ್ಮಿಕರ ಸಂಖ್ಯೆ, ಉತ್ಪಾದನೆಯ ನಷ್ಟ ಮತ್ತು ಲಾಭದ ದತ್ತಾಂಶದಂತಹ ಮಾಹಿತಿಯ ಕೊರತೆ. ವ್ಯವಹಾರದ ಐಡಿಯ ವ್ಯವಸ್ಥೆಯನ್ನು ಸ್ಥಾಪಿಸಿ ಮಹತ್ವದ ವ್ಯವಹಾರ ಡೇಟಾವನ್ನು ಇದರೊಂದಿಗೆ ಜೋಡಿಸುವ ತುರ್ತು ಅವಶ್ಯಕತೆಯಿದೆ ಎಂದು ಸಲಹೆ ನೀಡಿದ್ದಾರೆ.