ಕರ್ನಾಟಕ

karnataka

ETV Bharat / business

ನಾಳೆ ಬಜೆಟ್‌ ಹಲ್ವಾ: ಕೊರೊನಾರ್ಥಿಕತೆಗೆ 'ಸಿಹಿ'ತಾರಾಮನ್ ಹಂಚಿಕೆ ಶುರು

ಪ್ರತಿ ವರ್ಷ ಬಜೆಟ್ ಮಂಡಿಸುವ ಕೆಲವು ದಿನಗಳ ಮೊದಲು ಹಲ್ವಾ ಸಮಾರಂಭ ಆಯೋಜಿಸುವ ವಾರ್ಷಿಕ ಸಂಪ್ರದಾಯವನ್ನು ಸರ್ಕಾರ ಅನುಸರಿಸಿಕೊಂಡು ಬರುತ್ತಿದೆ. ಹಲ್ವಾ ತಯಾರಿಕೆಯು ಬಜೆಟ್​ನ ಅಧಿಕೃತ ಚಾಲನೆ ಎಂಬುದನ್ನು ಸೂಚಿಸುತ್ತದೆ.

halwa ceremony
halwa ceremony

By

Published : Jan 22, 2021, 7:51 PM IST

Updated : Jan 23, 2021, 6:48 AM IST

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು 2021-22ರ ಕೇಂದ್ರ ಬಜೆಟ್‌ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ 'ಹಲ್ವಾ ಕಾರ್ಯಕ್ರಮ'ಕ್ಕೆ ಜನವರಿ 23ರಂದು ಚಾಲನೆ ನೀಡಲಿದ್ದಾರೆ.

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸುವ ಮುನ್ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ ವಾಡಿಕೆಯ ಹಲ್ವಾ ಸಮಾರಂಭವನ್ನು ಹಣಕಾಸು ಸಚಿವಾಲಯ ಶನಿವಾರ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ, ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಸಮಾರಂಭದ ಬಳಿಕ ಬಜೆಟ್ ತಯಾರಿಕೆಯ ಪ್ರಕ್ರಿಯೆಯಲ್ಲಿ ಭಾಗವಾಗಿರುವ ನೌಕರರು ಸುಮಾರು 10 ದಿನಗಳವರೆಗೆ ನಾರ್ತ್ ಬ್ಲಾಕ್‌ನ ನೆಲಮಾಳಿಗೆಗೆ ತೆರಳುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ಸುಕ ಯುವಕರ ಸ್ಟಾರ್ಟ್​​ಅಪ್‌ ನಿರೀಕ್ಷೆಗಳಿಗೆ ನೀರೆರೆಯುತ್ತಾರಾ ನಿರ್ಮಲಾ?

ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರವೇ ಹೊರಬರುತ್ತಾರೆ. ವಾರ್ಷಿಕ ಬಜೆಟ್ ಮಂಡಿಸುವ ಮೊದಲು ಯಾವುದೇ ವಿಧದ ಸೋರಿಕೆ ತಡೆಯಲು ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಸಿಹಿ ವಿತರಣೆಯ ಬಳಿಕ ಬಜೆಟ್‌ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಹಾಗೂ ಸಹಕರಿಸುವ ಸಿಬ್ಬಂದಿ ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗುವ ತನಕ ಹಣಕಾಸು ಸಚಿವಾಲಯದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಕುಟುಂಬದ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಬಜೆಟ್‌ನ ಗೌಪ್ಯತೆಯನ್ನು ರಕ್ಷಿಸಲು ಈ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

Last Updated : Jan 23, 2021, 6:48 AM IST

ABOUT THE AUTHOR

...view details