ನವದೆಹಲಿ:ನಮ್ಯತೆ ಹಣದುಬ್ಬರ ಗುರಿ (ಎಫ್‌ಐಟಿ) ಚೌಕಟ್ಟಿನ ಪರಿಶೀಲನೆ ಶೀಘ್ರದಲ್ಲೇ ಬರಲಿದ್ದು, ಪ್ರಸ್ತುತ ಹಣದುಬ್ಬರ ಗುರಿ ಶೇ 4ರಷ್ಟಿನ ಜತೆಗೆ +/ -2ರ ಪ್ರತಿಶತದ ಸೈರಣೆ ಬ್ಯಾಂಡ್ ಗುರಿಯು ಮುಂದಿನ ಐದು ವರ್ಷ ಸೂಕ್ತವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ದೇಶವು 2016ರಲ್ಲಿ ಎಫ್‌ಐಟಿ ಚೌಕಟ್ಟು ಅಳವಡಿಸಿಕೊಂಡಿದ್ದು, ಹಣದುಬ್ಬರ ಗುರಿಯ ಮುಂದಿನ ಪರಿಶೀಲನೆಯು 2021ರ ಮಾರ್ಚ್ 31ಕ್ಕೂ ಮುನ್ನ ಬರಲಿದೆ.
ಬೆಲೆ ಸ್ಥಿರತೆಯನ್ನು ವ್ಯಾಖ್ಯಾನಿಸಲು ಪ್ರಸ್ತುತ ಸಂಖ್ಯಾತ್ಮಕ ಚೌಕಟ್ಟು, ಅಂದರೆ +/-2 ಸೈರಣೆ ಬ್ಯಾಂಡ್ ಶೇ 4ರ ಹಣದುಬ್ಬರ ಗುರಿ ಮುಂದಿನ ಐದು ವರ್ಷಗಳವರೆಗೆ ಸೂಕ್ತವಾಗಿದೆ ಎಂದು 'ಕರೆನ್ಸಿ ಮತ್ತು ಹಣಕಾಸು (ಆರ್ಸಿಎಫ್ ) 2020-21ರ ವರ್ಷ' ವರದಿಯಲ್ಲಿ ಆರ್‌ಬಿಐ ಹೇಳಿದೆ.