ಹೈದರಾಬಾದ್: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್ಗಳ ಮೇಲೆ ಅನುತ್ಪಾದಕ ಆಸ್ತಿ (ಎನ್‌ಪಿಎ) ಹೊರೆ ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಬ್ಯಾಡ್ ಲೋನ್ನಿಂದಾಗಿ (ಕೆಟ್ಟ ಸಾಲ) 3 ಲಕ್ಷ ಕೋಟಿ ರೂ.ನಷ್ಟು ಆದಾಯ ಕಳೆದುಕೊಂಡಿದೆ. ಉದಾರ ಮನಸ್ಸಿನಿಂದ ಬೆಂಬಲಿಸುವಂತೆ ಕೇಂದ್ರದ ಮಂದೆ ಆರ್‌ಬಿಐ ಬೇಡಿಕೆ ಇಟ್ಟಿದೆ. ಕೋವಿಡ್ನಂತಹ ಅನಿರೀಕ್ಷಿತ ದುರಂತಗಳಿಂದಾಗಿ ನಾನಾ ವಲಯಗಳು ದೊಡ್ಡ ಬಿಕ್ಕಟ್ಟಿನಲ್ಲಿವೆ. ಸಹಜವಾಗಿ ಅನುತ್ಪಾದಕ ಆಸ್ತಿಯ ಪ್ರಮಾಣವು ಹೆಚ್ಚಾಗಲಿದೆ.
ಕೆಟ್ಟ ಸಾಲಗಳ ಕಥೆ ಭಾರತೀಯ ಬ್ಯಾಂಕ್ಗಳಿಗೆ ಹೊಸತಲ್ಲ. ಕಾಯಿಲೆ ಪೀಡಿತ ದೊಡ್ಡ ಬೇರುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿವೆ. ಸಾರ್ವಜನಿಕ ಹಣದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿ ರಾಷ್ಟ್ರದ ಪ್ರಗತಿಗೆ ನೆರವಾಗುವುದು ಬ್ಯಾಂಕಿಂಗ್ ಕ್ಷೇತ್ರದ ಕರ್ತವ್ಯ ಆಗಿದ್ದರೂ ಅದು ಕಠೋರ ಪರಿಸ್ಥಿಯಲ್ಲಿ ಅನಿವಾರ್ಯವಾಗಿ ಸಾಗಬೇಕಿದೆ.