ಕರ್ನಾಟಕ

karnataka

ETV Bharat / business

1930ರ ಮಹಾ ಆರ್ಥಿಕ ಕುಸಿತಕ್ಕಿಂತಲೂ ಭೀಕರ ಉದ್ಯೋಗ ನಷ್ಟ : ವಿಶ್ವ ಕಾರ್ಮಿಕರ ಒಕ್ಕೂಟ ಕಳವಳ

ಅಧಿಕೃತ ಜಾಗತಿಕ ನಿರುದ್ಯೋಗವು ಒಟ್ಟು 220 ಮಿಲಿಯನ್ ಮತ್ತು ಕಳೆದ ವರ್ಷ ವಿಶ್ವಾದ್ಯಂತ ನಿರುದ್ಯೋಗ ದರವು 6.5 ಪ್ರತಿಶತದಷ್ಟು ಶೇ.1.1ರಷ್ಟು ಅಥವಾ 33 ಮಿಲಿಯನ್ ಹೆಚ್ಚಾಗಿದೆ..

Jobs
Jobs

By

Published : Jan 25, 2021, 8:12 PM IST

ಜಿನೀವಾ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಕಳೆದ ವರ್ಷ ಜಾಗತಿಕ ಉದ್ಯೋಗಗಳಿಗೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಹೊಸ ಅಧ್ಯಯನವೊಂದರಲ್ಲಿ ಯುಎನ್‌ನ ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ (ಐಎಲ್‌ಒ), 2019ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದ್ರೆ 2020ರಲ್ಲಿ ಶೇ.8.8ರಷ್ಟು ಜಾಗತಿಕ ಕೆಲಸದ ಸಮಯ ಕಳೆದುಕೊಂಡಿದೆ ಎಂದು ಕಂಡುಕೊಂಡಿದೆ.

ಈ ಕುಸಿತವು 255 ಮಿಲಿಯನ್ ಪೂರ್ಣ ಸಮಯದ ಉದ್ಯೋಗಗಳಿಗೆ ಸಮನಾಗಿ. 2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಕಳೆದುಹೋದ ಸಂಖ್ಯೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಐಎಲ್ಒ ಪ್ರಕಟಣೆಯಲ್ಲಿ ತಿಳಿಸಿದೆ.

ಇದು 1930ರ ಮಹಾ ಆರ್ಥಿಕ ಕುಸಿತದ ನಂತರ ಕಾರ್ಯನಿರತ ಕೆಲಸದ ಜಗತ್ತಿಗೆ ಅತ್ಯಂತ ತೀವ್ರವಾದ ಬಿಕ್ಕಟ್ಟಿನ ಅವಧಿಯಾಗಿದೆ ಎಂದು ಐಎಲ್ಒ ಮುಖ್ಯಸ್ಥ ಗೈ ರೈಡರ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇವಲ ಒಂದು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿದ ಈ ವೈರಸ್ 2.1 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿದೆ. ಕೋಟ್ಯಂತರ ಜನರಿಗೆ ಸೋಂಕು ತಗುಲಿ ಜಾಗತಿಕ ಆರ್ಥಿಕತೆಯನ್ನ ಬುಡಮೇಲು ಮಾಡಿತು.

ಕಳೆದುಹೋದ ಕೆಲಸದ ಸಮಯದ ಅರ್ಧದಷ್ಟು ಭಾಗವನ್ನು ಉದ್ಯೋಗದಲ್ಲಿ ಉಳಿದಿರುವವರಿಗೆ ಕಡಿಮೆ ಕೆಲಸದ ಸಮಯದಿಂದ ಲೆಕ್ಕಹಾಕಲಾಗಿದೆ. ಜಗತ್ತು ಕಳೆದ ವರ್ಷ ಅಭೂತಪೂರ್ವ ಮಟ್ಟದ ಉದ್ಯೋಗ ನಷ್ಟವನ್ನು ಕಂಡಿದೆ ಎಂದು ಎಂದು ಯುಎನ್ ಕಾರ್ಮಿಕ ಸಂಸ್ಥೆ ವಿವರಿಸಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರಿಗೆ ರೆಸ್ಟೋರೆಂಟ್​ಗಳಲ್ಲಿ ಸಿಗುತ್ತೆ ಶೇ.20ರಷ್ಟು ರಿಯಾಯಿತಿ.. ಎಲ್ಲಿ, ಹೇಗೆ?

ಅಧಿಕೃತ ಜಾಗತಿಕ ನಿರುದ್ಯೋಗವು ಒಟ್ಟು 220 ಮಿಲಿಯನ್ ಮತ್ತು ಕಳೆದ ವರ್ಷ ವಿಶ್ವಾದ್ಯಂತ ನಿರುದ್ಯೋಗ ದರವು 6.5 ಪ್ರತಿಶತದಷ್ಟು ಶೇ.1.1ರಷ್ಟು ಅಥವಾ 33 ಮಿಲಿಯನ್ ಹೆಚ್ಚಾಗಿದೆ.

ಮತ್ತೊಂದು 81 ಮಿಲಿಯನ್ ಜನರು ನಿರುದ್ಯೋಗಿಗಳಾಗಿ ನೋಂದಾಯಿಸದೆ ಕಾರ್ಮಿಕ ಮಾರುಕಟ್ಟೆಯಿಂದ ಹೊರ ಗುಳಿದಿದ್ದಾರೆ. ಒಂದೋ ಸಾಂಕ್ರಾಮಿಕ ನಿರ್ಬಂಧಗಳು ಅಥವಾ ಸಾಮಾಜಿಕ ಕಟ್ಟುಪಾಡುಗಳ ಕಾರಣದಿಂದಾಗಿ ಅವರು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲವೇ ಅವರು ಕೆಲಸ ಹುಡುಕುವುದನ್ನು ಬಿಟ್ಟುಬಿಟ್ಟಿದ್ದಾರೆ ಎಂದು ರೈಡರ್ ಹೇಳಿದರು.

ಕಳೆದ ವರ್ಷ ಕಳೆದುಹೋದ ಕೆಲಸದ ಸಮಯವು ಜಾಗತಿಕ ಕಾರ್ಮಿಕ ಆದಾಯವನ್ನು ಶೇ.8.3ರಷ್ಟು ಕುಗ್ಗಿಸಿದೆ. ಅದು ಸುಮಾರು 3.7 ಟ್ರಿಲಿಯನ್ ಅಥವಾ ಒಟ್ಟಾರೆ ಜಾಗತಿಕ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 4.4 ಪ್ರತಿಶತದಷ್ಟು ಇಳಿಯುತ್ತದೆ ಎಂದು ಹೇಳಿದೆ.

ABOUT THE AUTHOR

...view details