ಕರ್ನಾಟಕ

karnataka

ETV Bharat / business

ಕೊರೊನಾ ಬಳಿಕ ಹಳಿ ತಪ್ಪಿದ ಆರ್ಥಿಕತೆಗೆ 'ಹೆಲಿಕಾಪ್ಟರ್ ಮನಿ'ಯೇ ರಾಮಬಾಣ!? - ಅರ್ಥಶಾಸ್ತ್ರಜ್ಞ ಆಕಾಶ್ ಜಿಂದಾಲ್

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚೆಗೆ ಭಾರತೀಯ ಆರ್ಥಿಕತೆ ಮುನ್ಸೂಚನೆ ನೀಡಿದ್ದು, ಈ ವರ್ಷದ ಜನವರಿಯಲ್ಲಿನ ಶೇ 5.8ರಿಂದ ಶೇ 1.9ಕ್ಕೆ ಇಳಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ಬಡತನಕ್ಕೆ ಪ್ರವೇಶಿಸುವ ಅಪಾಯವಿದೆ ಎಂದು ಎಚ್ಚರಿಸಿದೆ.

Indian Economy
ಭಾರತದ ಆರ್ಥಿಕತೆ

By

Published : May 6, 2020, 6:02 PM IST

Updated : May 6, 2020, 6:14 PM IST

ನವದೆಹಲಿ: ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಮುನ್ನ ಭಾರತದ ಆರ್ಥಿಕತೆ ತೀರ ಕೆಟ್ಟ ವಾತಾವರಣದಲ್ಲಿ ಇರಲಿಲ್ಲ. ಆದರೂ ಪಿಂಕ್​ ಬಣ್ಣದಲ್ಲಿತ್ತು. ಕೋವಿಡ್​-19 ಸೋಂಕು ದೇಶಿ ಆರ್ಥಿಕತೆಯನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳಿದೆ.

ಕೋವಿಡ್​-19ರ ನಂತರದ ಆರ್ಥಿಕ ಬಿಕ್ಕಟ್ಟನ್ನು ತಗ್ಗಿಸುವ ಮಾರ್ಗಗಳನ್ನು ಭಾರತವು ಈಗಿನಿಂದಲೇ ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದು ವಿತ್ತೀಯ ತಜ್ಞರು ಹೇಳುತ್ತಿದ್ದಾರೆ. ಆರ್ಥಿಕ ಚೇತರಿಕೆಯ ಹಾದಿಗೆ ಕಾರಣವಾಗುವ ಆಯ್ಕೆಗಳ ಕುರಿತು 'ಈಟಿವಿ ಭಾರತ' ಜೊತೆಗೆ ಇಬ್ಬರು ಅರ್ಥಶಾಸ್ತ್ರಜ್ಞರು ಮಾತನಾಡಿದ್ದಾರೆ.

ಡಿಸೆಂಬರ್​ವರೆಗೆ ಭಾರತವು ಆರ್ಥಿಕ ಹಿಂಜರಿತವನ್ನು ಎದುರಿಸುವ ಸಾಧ್ಯತೆಯಿದೆ. ಜಿಡಿಪಿ ಕೇವಲ ಶೇ 0.2ರಷ್ಟು ಮಾತ್ರ ಇರಲಿದೆ ಎಂದು ಮೂಡಿಸ್ ಅಂದಾಜಿಸಿದೆ. ಬಾರ್​ಕ್ಲೇಸ್​ ಶೂನ್ಯ ಪ್ರತಿಶತದಷ್ಟು ಜಿಡಿಪಿ ಇರಲಿದೆ ಎಂದಿದೆ. 40 ಕೋಟಿ ಭಾರತೀಯರನ್ನು ಬಡತನದ ಪ್ರಪಾತಕ್ಕೆ ತಳ್ಳಬಹುದು ಎಂದು ಐಎಲ್ಒ ವರದಿ ಹೇಳಿದೆ ಎಂದು ಅರ್ಥಶಾಸ್ತ್ರಜ್ಞ ಆಕಾಶ್ ಜಿಂದಾಲ್ ಉಲ್ಲೇಖಿಸಿದರು.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಬಡ್ಡಿದರ ಶೇ 1.5ರಷ್ಟು ಕಡಿಮೆ ಮಾಡಬೇಕು. ಸರ್ಕಾರವು ಹೆಚ್ಚಿನ ಹಣವನ್ನು ಮುದ್ರಿಸಿ ಹಂಚಿಕೆ ಮಾಡಬೇಕು. ಇದನ್ನು‘ಹೆಲಿಕಾಪ್ಟರ್ ಮನಿ' ಎನ್ನುತ್ತಾರೆ. ಈ ನೀತಿಯನ್ನ ಸರ್ಕಾರ ಅಳವಡಿಸಿಕೊಂಡರೇ ಜನರ ಕೈಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಅದು ಭಾರತದ ಶಕ್ತಿಯಾಗಿರುವ ಬೇಡಿಕೆ ಮತ್ತು ಉಪಭೋಗವನ್ನು ಹೆಚ್ಚಿಸುತ್ತದೆ. ಇದು ಆರ್ಥಿಕತೆ, ಜಿಡಿಪಿ ವೃದ್ಧಿಸುತ್ತದೆ ಮತ್ತು ಜನರಿಗೆ ಉದ್ಯೋಗ ಸಹ ನೀಡುತ್ತದೆ ಎಂದು ಜಿಂದಾಲ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್​-19ರ ನಂತರ ಭಾರತದ ಆರ್ಥಿಕ ಹಿಂಜರಿತದಿಂದ ಬಳಲು ಸಾಧ್ಯತೆ ಒತ್ತಿಹೇಳಿದ ಜೆಎನ್‌ಯು ಪ್ರೊಫೆಸರ್ ಶಕ್ತಿ ಕುಮಾರ್, ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ನಿಧಾನವಾಗುತ್ತಿತ್ತು. ಪ್ರತಿ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿಯುತ್ತಿದೆ. ಕೋವಿಡ್​- 19 ಇನ್ನೂ ಮೂರು ತಿಂಗಳವರೆಗೆ ಇದ್ದರೇ ದೇಶದ ಜಿಡಿಪಿ ಮತ್ತಷ್ಟು ಕುಸಿಯುತ್ತದೆ ಎಂದರು.

ವಸತಿ ವಲಯದಲ್ಲಿ ಖರೀದಿ ಶಕ್ತಿ ಹೆಚ್ಚಿಸಬೇಕು. ಅದು ಬೇಡಿಕೆ ಮತ್ತು ಪೂರೈಕೆಯನ್ನು ಮತ್ತಷ್ಟು ಬೆಳೆಸುತ್ತದೆ. ಸರ್ಕಾರ ತನ್ನ ವೆಚ್ಚದ ಪ್ರಮಾಣ ಏರಿಸಬೇಕು, ಉತ್ಪಾದನೆ ಹೆಚ್ಚಿಸಲು ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುವ ಮೂಲಕ ‘ಮೇಕ್ ಇನ್ ಇಂಡಿಯಾ’ಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

Last Updated : May 6, 2020, 6:14 PM IST

ABOUT THE AUTHOR

...view details