ಕರ್ನಾಟಕ

karnataka

ETV Bharat / business

ಕೋವಿಡ್​ ವಿರುದ್ಧದ ಯುದ್ಧಕ್ಕೆ ಎನ್​ಜಿಒ, ಖಾಸಗಿ ಕಂಪನಿಗಳು ಕೈಜೋಡಿಸಲಿ: ನೀತಿ ಆಯೋಗ - ನೀತಿ ಆಯೋಗ

ಮಾರಣಾಂತಿಕ ಸೋಂಕಿನಿಂದ ಸಂಕಷ್ಟಕ್ಕೀಡಾದವರಿಗೆ ಅಗತ್ಯ ಸೇವೆ ಒದಗಿಸಲು ಸರ್ಕಾರಿಯೇತರ ಸೇವಾ ಸಂಸ್ಥೆಗಳು ಹಾಗೂ ಸಂಘಟನೆಗಳು ಮುಂದಾಗಲಿ ಎಂದು ಕೋರಿದೆ. ದೇಶದಲ್ಲಿ ನೋಂದಾಯಿತ 92 ಸಾವಿರ ಎನ್‌ಜಿಒ ಮತ್ತು ಸಮುದಾಯ ಸಂಘಟನೆಗಳ ಸಹಕಾರವನ್ನೂ ಕೋರಿ ಪತ್ರ ಬರೆದಿದ್ದಾರೆ.

UN agencies
ಎನ್​ಜಿಒ

By

Published : Apr 6, 2020, 5:22 PM IST

ನವದೆಹಲಿ:ಕೊರೊನಾ ವೈರಸ್‌ನಿಂದ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನಾಗರಿಕೆಗೆ ಅಗತ್ಯ ಸೌಕರ್ಯ ಒದಗಿಸಲು ಸ್ವಯಂ ಸೇವಾ ಸಂಸ್ಥೆಗಳ (ಎನ್​ಜಿಒ) ಹಾಗೂ ಖಾಸಗಿ ಕಂಪನಿಗಳು ಮುಂದೆ ಬರಬೇಕು ಎಂದು ನೀತಿ ಆಯೋಗ ಮನವಿ ಮಾಡಿದೆ.

ಮಾರಣಾಂತಿಕ ಸೋಂಕಿನಿಂದ ಸಂಕಷ್ಟಕ್ಕೀಡಾದವರಿಗೆ ಅಗತ್ಯ ಸೇವೆ ಒದಗಿಸಲು ಸರ್ಕಾರಿಯೇತರ ಸೇವಾ ಸಂಸ್ಥೆಗಳು ಹಾಗೂ ಸಂಘಟನೆಗಳು ಮುಂದಾಗಲಿ ಎಂದು ಕೋರಿದೆ. ದೇಶದಲ್ಲಿ ನೋಂದಾಯಿತ 92 ಸಾವಿರ ಎನ್‌ಜಿಒ ಮತ್ತು ಸಮುದಾಯ ಸಂಘಟನೆಗಳ ಸಹಕಾರವನ್ನೂ ಕೋರಿ ಪತ್ರ ಬರೆದಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಎನ್‌ಜಿಒ ಮತ್ತು ಸಮುದಾಯ ಸಂಘಟನೆಗಳ ಸದಸ್ಯರ ಸೇವೆ ಬಳಸಿಕೊಳ್ಳಲು ಸ್ಥಳೀಯ ಆಡಳಿತಗಳಿಗೆ ತಾಕೀತು ಮಾಡಬೇಕು ಎಂದು ನೀತಿ ಆಯೋಗದ ಸಿಇಒ ಅಮಿತಾಬ್​ ಕಾಂತ್‌ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ABOUT THE AUTHOR

...view details