ನವದೆಹಲಿ:ಕೋವಿಡ್-19 ಸೃಷ್ಟಿಸಿರುವ ಪರಿಸ್ಥಿತಿ ದೃಷ್ಟಿಯಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ವಿಮೆದಾರರು ಆರೋಗ್ಯ ವಿಮೆ ಪ್ರೀಮಿಯಂಗಳನ್ನು ಕಂತಿನಲ್ಲಿ ಸಂಗ್ರಹಿಸಲು ಐಆರ್‌ಡಿಎಐ ಅನುಮತಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವಿಮೆದಾರರಿಗೆ ಪ್ರಮಾಣೀಕರಣ ಆಧಾರದ ಮೇಲೆ ವೈಯಕ್ತಿಕ ಆರೋಗ್ಯ ವಿಮಾ ಪ್ರೋಡೆಕ್ಟ್ಗಳಲ್ಲಿ ಪ್ರೀಮಿಯಂ ಪಾವತಿ ಆಯ್ಕೆಗಳನ್ನು (ಕಂತಿನ ಪ್ರೀಮಿಯಂ ಪಾವತಿ) ಸೇರಿಸಲು ಅನುಮತಿ ನೀಡಿತ್ತು.
ಕೋವಿಡ್-19 ಉಂಟುಮಾಡಿರುವ ಸಂಕಷ್ಟಗಳ ದೃಷ್ಟಿಯಲ್ಲಿ ಇರಿಸಿಕೊಂಡು ಆರೋಗ್ಯ ವಿಮಾ ಕಂತುಗಳ ಪಾವತಿ ಸರಾಗಗೊಳಿಸುವ ಅಗತ್ಯವಿದೆ. ಎಲ್ಲಾ ವಿಮೆದಾರರಿಗೆ ಯಾವುದೇ ನಿರ್ದಿಷ್ಟ ಪಾಲಿಸಿಗಳಿಗೆ ಸೂಕ್ತವೆಂದು ಪರಿಗಣಿಸಬಹುದಾದ ಆರೋಗ್ಯ ವಿಮಾ ಕಂತುಗಳನ್ನು ವಾಯಿದೆಗಳಲ್ಲಿ ಸಂಗ್ರಹಿಸಲು ಅನುಮತಿಸಲಾಗಿದೆ ಎಂದು ಐಆರ್‌ಡಿಎಐ ಸುತ್ತೋಲೆಯಲ್ಲಿ ತಿಳಿಸಿದೆ.
ಪ್ರೀಮಿಯಂ ಪಾವತಿಯು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಗಿರಬಹುದು ಎಂದು ಹೇಳಿದೆ.
ಇದಲ್ಲದೇ ವಿಮಾದಾರರು ಪ್ರತಿ ಮಾದರಿ (ಆವರ್ತನ) ಅಡಿ ಬರುವ ಪ್ರೀಮಿಯಂ ಮೊತ್ತವು ಆಧಾರವಾಗಿ ಉತ್ಪನ್ನದ ಇತರ ಪ್ರೀಮಿಯಂ ಮಾದರಿಗಳ ಅಡಿ ಪ್ರೀಮಿಯಂ ಮೊತ್ತಕ್ಕೆ ಹೊಂದಿಕೆ ಆಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.