ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಟಿ ಕ್ಷೇತ್ರದ ಉದ್ಯಮಗಳಲ್ಲಿ ಭಾರಿ ಪ್ರಮಾಣದ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ಇತ್ತೀಚಿನ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐಟಿ ವಲಯದ ಉದ್ಯೋಗಿಗಳು ತಮ್ಮನ್ನು ತಾವು ಇತ್ತೀಚಿನ ಹೊಸ ತಂತ್ರಜ್ಞಾನಗಳೊಂದಿಗೆ ನವೀಕರಿಸಿಕೊಂಡಿದ್ದಾರೆ. ಯಾವೊಬ್ಬ ಉದ್ಯೋಗಿಯು ತಾನು ಉದ್ಯೋಗ ಕಳೆದುಕೊಳ್ಳುತ್ತೇನೆ ಎಂಬುದರ ಬಗ್ಗೆ ಚಿಂತಿಸಬೇಕಿಲ್ಲ. ಅವರ ಉದ್ಯೋಗದಲ್ಲಿ ವರದಿ ಹೇಳುವಷ್ಟು ಕಡಿತ ಆಗುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.
ಈ ಕ್ಷೇತ್ರಕ್ಕೆ ಪ್ರವೇಶಿಸಿದವರು ತಮ್ಮ ಜಿವನೋಪಾಯಕಕ್ಕೆ ಇಲ್ಲಿಯೇ ನೆಲೆಸಿದ್ದಾರೆ. ಯಾವುದೇ ಹೊಸ ತಂತ್ರಜ್ಞಾನಗಳ ಬಗ್ಗೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಖಂಡಿತವಾಗಿಯೂ ತೊಂದರೆಯಲ್ಲಿದ್ದಾರೆ. ಆದರೆ, ಅವರು ಸುಧಾರಿಸಕೊಳ್ಳಲಿದ್ದಾರೆ ಎಂದು ಎಚ್ಚರಿಸಿದೆ.
ಕ್ಯಾಂಪಸ್ ಸಂದರ್ಶನಗಳಲ್ಲಿ ಲಾಭದಾಯಕ ಪ್ಯಾಕೇಜ್‌ನೊಂದಿಗೆ ಆಯ್ಕೆಯಾಗಿ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ತಮ್ಮನ್ನು ತಾವು ಗಮನದಲ್ಲಿರಿಸಿಕೊಳ್ಳದ ನೌಕರರಿಗೆ ತೊಂದರೆ ಎದುರಿಸಬಹುದು. ಕೃತಕ ಬುದ್ಧಿಮತ್ತೆಯ ಬಳಕೆ ನಿರಾಕರಿಸಿದ ಈ ದಿನಗಳಲ್ಲಿ, ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ನಿರಂತರವಾಗಿ ಸ್ವಯಂ ನವೀಕರಣೆ ಸಾಧ್ಯವಾಗದ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಆಟೊಮೇಷನ್, ಮೆಷಿನ್ ಲರ್ನಿಂಗ್, 5 ಜಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿರುವ ತಂತ್ರಜ್ಞಾನಗಳಾಗಿವೆ. ಸಂಸ್ಥೆಯ ಹಿತದೃಷ್ಟಿಯಿಂದ ಅವರನ್ನು ಕೆಲಸದಿಂದ ಹೊರಗಿಡಲು ಮತ್ತು ಹೊಸ ಪ್ರತಿಭೆಗಳ ನೇಮಕಾತಿಗೆ ಒತ್ತಡ ಬರಬಹುದು.