ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ಕಾರ್ಪೊರೇಟ್ ಸಂಸ್ಥೆಗಳ ಮೇಲಿನ ತೆರಿಗೆ ಕಡಿತವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮೆಚ್ಚಿಗೆ ವ್ಯಕ್ತಪಡಿಸಿದೆ.
ಮೋದಿ ಕಾರ್ಪೊರೇಟ್ ತೆರಿಗೆ ಕಡಿತ ಮೆಚ್ಚಿ ಹಣಕಾಸಿನ ಎಚ್ಚರಿಕೆ ಕೊಟ್ಟ IMF - Corporate tax cut
ಭಾರತ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ಕಾರ್ಪೊರೇಟ್ ತೆರಿಗೆ ಕಡಿತ ಬಂಡವಾಳ ಹೂಡಿಕೆಯ ಚಟುವಟಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಭಾರತದ ಹಣಕಾಸಿನ ಬಲವರ್ಧನೆಯ ಮುಂದಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಮತ್ತು ಹಣಕಾಸಿನ ಪರಿಸ್ಥಿತಿಗಳ ದೀರ್ಘಕಾಲದವರೆಗೆ ಸ್ಥಿರತೆಯಿಂದಿರುವಂತೆ ಕಾಪಾಡಿಕೊಳ್ಳಬೇಕು ಎಂದು ಐಎಂಎಫ್ ಸಲಹೆ ನೀಡಿದೆ.
ಭಾರತ ಸರ್ಕಾರದ ಇತ್ತೀಚೆಗೆ ತೆಗೆದುಕೊಂಡ ಕಾರ್ಪೊರೇಟ್ ತೆರಿಗೆ ಕಡಿತವು ಬಂಡವಾಳ ಹೂಡಿಕೆಯ ಚಟುವಟಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಭಾರತದ ಹಣಕಾಸಿನ ಬಲವರ್ಧನೆಯ ಮುಂದಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಮತ್ತು ಹಣಕಾಸಿನ ಪರಿಸ್ಥಿತಿಗಳ ದೀರ್ಘಕಾಲದವರೆಗೆ ಸ್ಥಿರತೆಯಿಂದಿರುವಂತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಭಾರತ ಸೀಮಿತ ಹಣಕಾಸಿನ ವ್ಯಾಪ್ತಿ ಹೊಂದಿದೆ ಎಂಬುದನ್ನು ನಾವು ನಂಬುತ್ತೇವೆ. ಆದ್ದರಿಂದ ಅವರು ಜಾಗರೂಕರಾಗಿರಬೇಕು. ಭಾರತದ ಕಾರ್ಪೊರೇಟ್ ಆದಾಯ ತೆರಿಗೆ ಕಡಿತವನ್ನು ಬೆಂಬಲಿಸುತ್ತೇವೆ. ಏಕೆಂದರೆ ಅದು ಹೂಡಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಚಾಂಗ್ಯಾಂಗ್ ರೀ ಹೇಳಿದ್ದಾರೆ.