ಕರ್ನಾಟಕ

karnataka

ETV Bharat / business

ಕೊರೊನಾ ಎಫೆಕ್ಟ್​: ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧದ ಅವಧಿ ವಿಸ್ತರಣೆ - Coronavirus

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಾರ್ಚ್ 23 ರಂದು, ಮುಂಜಾನೆ 1.30ರಿಂದ ಮಾರ್ಚ್ 29ರ ಬೆಳಗ್ಗೆ 5.30ರವರೆಗೆ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಪ್ರಯಾಣಿಕರ ವಿಮಾನ ಹಾರಾಟ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿತ್ತು. ಈ ಅವಧಿಯನ್ನು ಈಗ ಮುಂದೂಡಿದೆ.

flights
ವಿಮಾನಗಳ ಹಾರಾಟ

By

Published : Mar 27, 2020, 8:06 PM IST

ನವದೆಹಲಿ: ಎಲ್ಲಾ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಪ್ರಯಾಣಿಕರ ವಿಮಾನಗಳ ಹಾರಾಟದ ನಿಷೇಧ ಅವಧಿಯನ್ನು ಏಪ್ರಿಲ್ 14ರವರೆಗೆ ನಿಗದಿಪಡಿಸಲಾಗಿದೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಹೇಳಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್​ಡೌನ್ ಹೇರಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಾರ್ಚ್ 23 ರಂದು, ಮುಂಜಾನೆ 1.30ರಿಂದ ಮಾರ್ಚ್ 29ರ ಬೆಳಗ್ಗೆ 5.30ರವರೆಗೆ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಪ್ರಯಾಣಿಕರ ವಿಮಾನ ಹಾರಾಟ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿತ್ತು. ಈ ಅವಧಿಯನ್ನು ಈಗ ಮುಂದೂಡಿದೆ.

ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಪ್ರಯಾಣಿಕರ ಸೇವೆಗಳ ವಿಮಾನ ಹಾರಾಟವನ್ನು 2020ರ ಏಪ್ರಿಲ್ 14ರ ನಿಷೇಧಿಸಲಾಗಿದೆ ಎಂದು ವಾಯುಯಾನ ಸಂಸ್ಥೆ ತನ್ನ ಎರಡನೇ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ನಿರ್ಬಂಧವು ಅಂತಾರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಮಾರ್ಚ್ 24ರ ಮಧ್ಯರಾತ್ರಿಯಿಂದ ದೇಶಿಯ ಪ್ರಯಾಣಿಕರ ಹಾರಾಟದ ಸೇವೆಯನ್ನು ಸರ್ಕಾರ ಸ್ಥಗಿತಗೊಳಿಸಿತು.

ದೇಶದಲ್ಲಿ 649 ಕೊರೊನಾ ವೈರಸ್​ ಪಾಸಿಟಿವ್​ ಪ್ರಕರಣಗಳಿದ್ದು, ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ABOUT THE AUTHOR

...view details