ಕರ್ನಾಟಕ

karnataka

ETV Bharat / business

ವಾಹನೋದ್ಯಮ ಕ್ಷೀಣಿಸಿದರೇ ಮತ್ತಷ್ಟು ಉದ್ಯೋಗ ಕಡಿತ.. ಕೇಂದ್ರ ಸರ್ಕಾರಕ್ಕೆ ಆಟೋ ಇಂಡಸ್ಟ್ರಿ ಎಚ್ಚರಿಕೆ

ಮುಂದಿನ ವರ್ಷ ಏಪ್ರಿಲ್‌ನಿಂದ ಉದ್ಯಮವು ಬಿಎಸ್-VI ಮಾನದಂಡಗಳಿಗೆ ಒಗ್ಗಿಕೊಳ್ಳಲಿದೆ. ಈಗಿನ ನಿಧಾನಗತಿಯ ಮಾರಾಟ ಬೆಳವಣಿಗೆಯ ಸಮಸ್ಯೆ ಮಧ್ಯೆಯೂ ಮುಂದೆ ಬರಲಿರುವ ಬೆಲೆ ಹೆಚ್ಚಳ ಉದ್ಯಮಿಗಳನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.

ಸಾಂದರ್ಭಿಕ ಚಿತ್ರ

By

Published : Sep 6, 2019, 3:40 PM IST

ನವದೆಹಲಿ:ತುರ್ತಾಗಿ ಜಿಎಸ್​ಟಿ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ವಾಹನೋದ್ಯಮ ಕ್ಷೇತ್ರದ ಉದ್ಯಮಿಗಳು, 'ಪ್ರಸ್ತುತ ದಿನಗಳಲ್ಲಿನ ಉದ್ಯಮದ ಕುಸಿತವು ಯಥಾವತ್ತಾಗಿ ಮುಂದುವರಿದರೇ ಭವಿಷ್ಯದಲ್ಲಿ ಇನ್ನಷ್ಟು ಸಾಮಾಜಿಕ ಪರಿಣಾಮಗಳು ಉಂಟಾಗಿ ಉದ್ಯೋಗ ಕಡಿತವಾಗಬಹುದು' ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಮುಂದಿನ ವರ್ಷ ಏಪ್ರಿಲ್‌ನಿಂದ ಉದ್ಯಮವು ಬಿಎಸ್-ವಿ ಮಾನದಂಡಗಳಿಗೆ ಒಗ್ಗಿಕೊಳ್ಳಲಿದೆ. ಈಗಿನ ನಿಧಾನಗತಿಯ ಮಾರಾಟ ಬೆಳವಣಿಗೆಯ ಸಮಸ್ಯೆ ಮಧ್ಯೆಯೂ ಮುಂದೆ ಬರಲಿರುವ ಬೆಲೆ ಹೆಚ್ಚಳ ಉದ್ಯಮಿಗಳನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು (ಎಸ್ಐ​ಎಎಂ) ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ. 28 ರಿಂದ ಶೇ.18ಕ್ಕಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದೆ.

"ಉದ್ಯಮ ಕುಸಿತದಿಂದ ಸಾಮಾಜಿಕ ಪರಿಣಾಮಗಳು ಉಂಟಾಗಬಹುದಾದು ಎಂದು ನಾನು ಭಾವಿಸುತ್ತೇನೆ. ಸರ್ಕಾರವು ಅದನ್ನು ನೋಡುಲಿದೆ ಎಂಬುದು ನನಗೆ ಖಾತ್ರಿಯಿದೆ" ಎಂದು ಎಸ್​ಐಎಎಂ ಅಧ್ಯಕ್ಷ ರಾಜನ್ ವಾಧೇರಾ ಸುದ್ದಿಗಾರರಿಗೆ ಹೇಳಿದ್ದಾರೆ.

ವಾಹನ ತಯಾರಿಕಾ ಕ್ಷೇತ್ರದಲ್ಲಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ 15 ಸಾವಿರ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. 300 ವಾಹನ ವಿತರಕ ಮಳಿಗೆಗಳು ಸ್ಥಗಿತಗೊಂಡಿವೆ. ಸುಮಾರು 2.8 ಲಕ್ಷ ಉದ್ಯೋಗಗಳ ಮೇಲೆ ಇದರ ಪರಿಣಾಮ ಬೀರಿದೆ ಎಂದು ಎಸ್ಐ​ಎಎಂ ತಿಳಿಸಿದೆ.

ABOUT THE AUTHOR

...view details