ಮುಂಬೈ: ಕಾಂಟೆಕ್ಟ್ಲೆಸ್ ಕಾರ್ಡ್ ವಹಿವಾಟಿನ ಮಿತಿಯನ್ನು 2021ರ ಜನವರಿ 2ರಿಂದ ಈಗಿನ 2,000 ರೂ.ದಿಂದ 5,000 ರೂ.ಗೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಸ್ತಾಪಿಸಿದೆ.
ಆರನೇ ದ್ವಿಮಾಸಿಕ ವಿತ್ತೀಯ ನೀತಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಬ್ಯಾಂಕ್, ಡಿಜಿಟಲ್ ಪಾವತಿಗಳ ಸುರಕ್ಷಿತ ಮತ್ತು ಭದ್ರತೆಯನ್ನು ವಿಸ್ತರಿಸಲು ಈ ಕ್ರಮವು ನೆರವಾಗಲಿದೆ ಎಂದು ಹೇಳಿದೆ.
ಇದಲ್ಲದೇ ಈ ಮಿತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ನಿರ್ಧಾರವು ಗ್ರಾಹಕರಗೆ ಬಿಟ್ಟದ್ದು. ಅಂದರೆ ಕಾರ್ಡ್ ಬಳಕೆದಾರರು ಸುರಕ್ಷತೆಯ ದೃಷ್ಟಿಯಿಂದ ಪ್ರಸ್ತುತ ಬಂಡವಾಳದ 2,000 ರೂ.ಗೆ ಉಳಿಸಿಕೊಳ್ಳಬಹುದು.
ಇಲ್ಲಿಯವರೆಗೆ 2,000 ರೂ.ಗಿಂತ ಕಡಿಮೆ ವಹಿವಾಟಿಗೆ ಸಹಿ ಅಥವಾ ಪಿನ್ ನಮೋದಿಸುವ ಅಗತ್ಯವಿರಲಿಲ್ಲ. ಹಣ ಪಾವತಿಗೆ ಕೇವಲ ಟ್ಯಾಪ್ ಅಗತ್ಯವಿದೆ. ಈ ಪ್ರಕ್ರಿಯೆಯು ಸಂಪರ್ಕವಿಲ್ಲದಂತೆ ವಹಿವಾಟಾಗಿದೆ. ಇದು ಸಾಂಕ್ರಾಮಿಕ ಸಮಯದಲ್ಲಿ ಸಾಕಷ್ಟು ಉಪಯುಕ್ತವಾಗಿದೆ. ಈಗ, ಆರ್‌ಬಿಐ ಪಾವತಿ ಮೊತ್ತವನ್ನು 5,000 ರೂ.ಗೆ ಏರಿಸಿದರೆ, ಇದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ ಸಹಿ ಅಥವಾ ಪಿನ್ ಅಗತ್ಯವಿರುತ್ತದೆ.
ದಿವಾಳಿ ಎದ್ದ ಏರ್ ಇಂಡಿಯಾ ಖರೀದಿಗೆ 209 ನೌಕರರು ಸಜ್ಜು: ಕಾರ್ಪೊರೇಟ್ ಶಕ್ತಿ ವಿರುದ್ಧ ಬಿಡ್ಡಿಂಗ್
ಸಂಪರ್ಕವಿಲ್ಲದ ಕಾರ್ಡ್‌ಗಳು ಚಿಪ್ ಮತ್ತು ಆಂಟೆನಾ ಒಳಗೊಂಡಿರುತ್ತವೆ (ರೆಡಿಯೋ ಆವರ್ತನದ ತಂತ್ರಜ್ಞಾನ). ಕಾಂಟೆಕ್ಟ್ಲೆಸ್ ಸ್ಪೈಪ್ ಮಷಿನ್ಗಳಿಗೆ ಕಾರ್ಡ್ ಟ್ಯಾಪ್ ಮಾಡಿದಾಗ, ಪಾವತಿ ವಿವರಗಳು ಕಾರ್ಡ್‌ನಿಂದ ಟರ್ಮಿನಲ್‌ಗೆ ನಿಸ್ತಂತುವಾಗಿ ವರ್ಗಾವಣೆ ಆಗುತ್ತವೆ.
5,000 ರೂ.ಗಿಂತ ಕಡಿಮೆ ವಹಿವಾಟಿಗೆ ಗ್ರಾಹಕರು ಚಾರ್ಜ್ ಸ್ಲಿಪ್ ಕೋರಿಕೆ ಸಲ್ಲಿಸಬಹುದು. 5,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಚಾರ್ಜ್ ಸ್ಲಿಪ್ ಸ್ವಯಂಚಾಲಿತವಾಗಿ ಒದಗಿಸಲಾಗುತ್ತದೆ.