ನವದೆಹಲಿ: ಶಿಕ್ಷಣದಲ್ಲಿ ಏಕರೂಪತೆ ತರುವುದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಿಸುವತ್ತ ಗಮನಹರಿಸುವುದಾಗಿ ಕೇಂದ್ರ ಸರ್ಕಾರ ಮೂರು ದಶಕಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಹೇಳಿದೆ.
ಗಣಿತ ಹಾಗೂ ವೈಜ್ಞಾನಿಕ ಮನೋಭಾವ ಪಠ್ಯದ ಭಾಗವಾಗಿ ಉಳಿಯಲಿವೆ. ಕ್ರೀಡೆ, ವೃತ್ತಿ, ಕಲೆ, ವಾಣಿಜ್ಯ, ವಿಜ್ಞಾನ, ಎಲ್ಲವೂ ಒಂದೇ ಮಟ್ಟದಲ್ಲಿರುತ್ತವೆ. ವಿದ್ಯಾರ್ಥಿಗಳು ಆಯ್ಕೆಯ ಪ್ರಕಾರ ಕೋರ್ಸ್‌ಗಳನ್ನು ಆರಿಸಿಕೊಳ್ಳಬಹುದು. 6ನೇ ತರಗತಿಯಿಂದ ಕೋಡಿಂಗ್ ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಕೇಂದ್ರ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ ಹೇಳಿದರು.