ನವದೆಹಲಿ :ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಇಂದು ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆಯ (ಸಿಪೆಟ್) ಚಟುವಟಿಕೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು.
ಕೋವಿಡ್-19 ಸಾಂಕ್ರಾಮಿಕ ವೇಳೆ ಕೌಶಲ್ಯ, ತಂತ್ರಜ್ಞಾನ ಬೆಂಬಲಿತ ಸೇವೆಗಳು ಮತ್ತು ಸಂಶೋಧನೆಗೆ ಸಂಬಂಧ ಸಿಪೆಟ್ ಕೈಗೊಂಡ ಚಟುವಟಿಕೆಗಳ ಬಗ್ಗೆ ಸಿಪೆಟ್ ನಿರ್ದೇಶಕರು ಸಚಿವರಿಗೆ ತಿಳಿಸಿದರು. ಪೆಟ್ರೋಕೆಮಿಕಲ್ ವಲಯದಲ್ಲಿ ಎಂಎಸ್ಎಂಇಗಳ ಬೆಳವಣಿಗೆ ಬೆಂಬಲಿಸಲು ಆತ್ಮ ನಿರ್ಭರ ಭಾರತ್ ಅಭಿಯಾನಕ್ಕೆ ಅನುಗುಣವಾಗಿ ಸಿಪೆಟ್, ತನ್ನ ಗ್ರಾಹಕರ ಜಾಲದ ಸಾಮರ್ಥ್ಯ ಬಳಸಿಕೊಳ್ಳಬೇಕು. ವೈದ್ಯಕೀಯ ವೃತ್ತಿಪರರಿಗೆ ಅನುಕೂಲವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸುವಂತೆ ಸಿಪೆಟ್ ನಿರ್ದೇಶಕರಿಗೆ ಸೂಚಿಸಿದರು.