ಕರ್ನಾಟಕ

karnataka

ETV Bharat / business

ಚೀನೀ ಆಣತಿಯಂತೆ ಹಣ ಲೇವಾದೇವಿ: ಭಾರತೀಯ ಬ್ಯಾಂಕ್​ಗಳಿಗೆ ₹ 1,000 ಕೋಟಿ ಸಾಲ ವಂಚನೆ! - ಅಕ್ರಮ ಹಣ ವರ್ಗಾವಣೆ

ಚೀನಾದ ಘಟಕಗಳು, ಅವರ ನಿಕಟ ವರ್ತಿಗಳು ಮತ್ತು ಒಂದೆರಡು ಬ್ಯಾಂಕ್ ಉದ್ಯೋಗಿಗಳಿಗೆ ಸಂಬಂಧಿಸಿದ ಆವರಣದಲ್ಲಿ ದಾಳಿ ನಡೆಸಲಾಗಿದೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Bank
ಬ್ಯಾಂಕ್ ವಂಚನೆ

By

Published : Aug 11, 2020, 11:30 PM IST

ನವದೆಹಲಿ:ಶೆಲ್​ ಕಂಪನಿಗಳ ಮೂಲಕ (ನಕಲಿ ಕಂಪನಿ) ಹಣ ಲೇವಾದೇವಿ ಹಾಗೂ ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿರುವ ಸಾಧ್ಯತೆಯ ಮೇಲೆ ಚೀನೀ ಮೂಲದ ವ್ಯಕ್ತಿಗಳು ಹಾಗೂ ಅವರ ಭಾರತೀಯ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.

ಚೀನಾದ ಘಟಕಗಳು, ಅವರ ನಿಕಟ ವರ್ತಿಗಳು ಮತ್ತು ಒಂದೆರಡು ಬ್ಯಾಂಕ್ ಉದ್ಯೋಗಿಗಳಿಗೆ ಸಂಬಂಧಿಸಿದ ಆವರಣದಲ್ಲಿ ದಾಳಿ ನಡೆಸಲಾಗಿದೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾದ ಮೂಲದಯ ಆಜ್ಞೆಯ ಮೇರೆಗೆ ನಾನಾ ನಕಲಿ ಘಟಕಗಳಲ್ಲಿ 40ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ರಚಿಸಲಾಗಿದೆ. ಈ ಅವಧಿಯಲ್ಲಿ 1000 ಕೋಟಿ ರೂ.ಗೂ ಹೆಚ್ಚಿನ ಸಾಲ ಪಡೆಯಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ವಕ್ತಾರ ಸುರಭಿ ಅಹ್ಲುವಾಲಿಯಾ ಹೇಳಿದ್ದಾರೆ.

ಚೀನಾದ ಕಂಪನಿಯ ಅಂಗಸಂಸ್ಥೆ ಮತ್ತು ಅದಕ್ಕೆ ಸಂಬಂಧಿಸಿದವರು ಭಾರತದಲ್ಲಿ ಚಿಲ್ಲರೆ ಶೋ ರೂಂಗಳ ವ್ಯವಹಾರಗಳನ್ನು ತೆರೆಯಲು ಶೆಲ್ ಘಟಕಗಳಿಂದ ನಕಲಿ ಮುಂಗಡವಾಗಿ 100 ಕೋಟಿ ರೂ. ತೆಗೆದುಕೊಂಡಿದ್ದಾರೆ ಎಂಬುದು ಶೋಧ ಕಾರ್ಯದ ವೇಳೆ ತಿಳಿದುಬಂದಿದೆ.

ದಾಳಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಹಾಂಗ್‌ಕಾಂಗ್ ಮತ್ತು ಅಮೆರಿಕ ಡಾಲರ್‌ಗಳನ್ನು ಒಳಗೊಂಡ ವಿದೇಶಿ ಹವಾಲಾ ವಹಿವಾಟಿನ ಪುರಾವೆಗಳನ್ನು ಸಹ ಪತ್ತೆ ಮಾಡಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.

ABOUT THE AUTHOR

...view details