ಬೀಜಿಂಗ್:ದ್ವಿಪಕ್ಷೀಯ ವ್ಯಾಪಾರ ಅಸಮತೋಲನದ ಬಗ್ಗೆ ಭಾರತದ ಕಳವಳವನ್ನು ತಾನು ಗೌರವಿಸುವುದಾಗಿ ಹೇಳಿದ ಚೀನಾ, ನೂತನ ವಿಧಾನಗಳ ಮುಖೇನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಿದ್ಧರಿದ್ದೇವೆ. ಅಮೆರಿಕದೊಂದಿಗಿನ ವ್ಯಾಪಾರ ಸಮರದ 'ಏಕಪಕ್ಷೀಯತೆ ಮತ್ತು ರಕ್ಷಣಾತ್ಮಕತೆ'ಯ ವಿರುದ್ಧದ ಹೋರಾಟದಲ್ಲಿ ಬೀಜಿಂಗ್ ಜೊತೆ ಸೇರುವಂತೆ ಭಾರತಕ್ಕೆ ಆಹ್ವಾನಿಸಿದೆ.
ಭಾರತಕ್ಕೆ ನಿಯೋಜನೆಗೊಂಡ ಚೀನಾದ ನೂತನ ರಾಯಭಾರಿ ಸನ್ ವೀಡಾಂಗ್, 'ವ್ಯಾಪಾರ ಅಸಮತೋಲನದ ಬಗ್ಗೆ ಭಾರತದ ಕಾಳಜಿಯನ್ನು ಚೀನಾ ಹೆಚ್ಚು ಗೌರವಿಸುತ್ತದೆ. ಆದರೆ, ನಾವು ಎಂದಿಗೂ ಭಾರತದ ವಿರುದ್ಧ ವ್ಯಾಪಾರ ಸುಂಕವನ್ನು ಉದ್ದೇಶಪೂರ್ವಕವಾಗಿ ಹೆಚ್ಚುವರಿ ಮಾಡಿಲ್ಲ. ಈ ಬಗ್ಗೆ ಭಾರತ ಅರ್ಥಮಾಡಿಕೊಳ್ಳಬೇಕು' ಎಂದರು.
ಅಕ್ಕಿ ಮತ್ತು ಸಕ್ಕರೆಯ ಆಮದನ್ನು ಹೆಚ್ಚಿಸಲು ಚೀನಾ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತೀಯ ಔಷಧಗಳ ಮತ್ತು ಕೃಷಿ ಸರಕುಗಳ ಆಮದು ಮೇಲಿನ ವ್ಯಾಜ್ಯಗಳ ಪರಿಶೀಲನೆ ಮತ್ತು ಅನುಮೋದನೆಯ ಪ್ರಕ್ರಿಯೆಯನ್ನು ವೇಗಗೊಳಿಸಿದ್ದೇವೆ ಎಂದು ಸನ್ ಹೇಳಿದರು.