ಬೀಜಿಂಗ್: ಸುಧಾರಣೆ, ನಾವೀನ್ಯತೆ ಮತ್ತು ಉತ್ತಮ ಗುಣಮಟ್ಟದ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಕೈಗೊಂಡಿದ್ದರ ಫಲವಾಗಿ 2021ರಲ್ಲಿ ಚೀನಾ ತನ್ನ ಒಟ್ಟು ದೇಶೀಯ ಉತ್ಪನ್ನ ಶೇ 6ರಷ್ಟು ವಿಸ್ತರಿಸುವ ಗುರಿ ಹೊಂದಿದೆ ಎಂದು ಚೀನಾದ ಪ್ರಧಾನ ಮಂತ್ರಿ ಲೀ ಕೆಕಿಯಾಂಗ್ ಅವರು ದೇಶದ ಸಂಸತ್ತಿನ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ನಲ್ಲಿ (ಎನ್‌ಪಿಸಿ) ತಿಳಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಮೊದಲ ಬಾರಿಗೆ ಹಾನಿಗೊಳಗಾಗಿ ಚೇತರಿಸಿಕೊಂಡ ಚೀನಾದ ಆರ್ಥಿಕತೆಯು 2020ರಲ್ಲಿ ಶೇ 2.3ರಷ್ಟು ಏರಿಕೆಯಾಗಿದ್ದು, 45 ವರ್ಷಗಳಲ್ಲಿ ಅತ್ಯಂತ ಕಡಿಮೆ ವಾರ್ಷಿಕ ಬೆಳವಣಿಗೆಯ ದರ ದಾಖಲಿಸಿದೆ.
ಸ್ಥಳೀಯ ಕರೆನ್ಸಿಯಲ್ಲಿ ಜಿಡಿಪಿ 100 ಟ್ರಿಲಿಯನ್ ಯುವಾನ್ (15.42 ಟ್ರಿಲಿಯನ್ ಡಾಲರ್) ಮಿತಿಯನ್ನು 101.5986 ಟ್ರಿಲಿಯನ್ ಯುವಾನ್ಗೆ ಏರಿಕೆಯಾಗಿದೆ. ಚೀನಾ ತನ್ನ ಕೊರತೆಯ ಅನುಪಾತವನ್ನು ಜಿಡಿಪಿಗೆ 2021ಕ್ಕೆ ಶೇ 3.2ಕ್ಕೆ ಇಳಿಸಲು ಯೋಜಿಸಿದೆ ಎಂದು ಲಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ವೈಫೈ ಸೇವೆ: 60 ಜಿಬಿ ಡೇಟಾಗೆ ಜಸ್ಟ್ ___ ರೂ. ಶುಲ್ಕ
2021ರಲ್ಲಿ ಚೀನಾ 11 ದಶಲಕ್ಷಕ್ಕೂ ಹೆಚ್ಚು ಹೊಸ ನಗರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಚೀನಾ ತನ್ನ ಗ್ರಾಹಕ ಹಣದುಬ್ಬರ ಗುರಿಯನ್ನು 2021ಕ್ಕೆ ಶೇ 3ಕ್ಕೆ ನಿಗದಿಪಡಿಸಿದೆ. 14ನೇ ಪಂಚವಾರ್ಷಿಕ ಯೋಜನೆ (2021-2025) ಅವಧಿಯಲ್ಲಿ ಚೀನಾ ತನ್ನ ಆರ್ಥಿಕತೆ ಸೂಕ್ತ ವ್ಯಾಪ್ತಿಯಲ್ಲಿಡಲು ಪ್ರಯತ್ನಿಸುತ್ತದೆ ಎಂದು ಹೇಳಿದರು.