ನವದೆಹಲಿ:ಹೆಚ್ಚುವರಿ 4.2 ಲಕ್ಷ ಕೋಟಿ ಸಾಲ ಪಡೆಯುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಸ್ವಾಗತಿಸಿದ್ದು, ಬಡವರಿಗೆ ಪರಿಹಾರ ಒದಗಿಸಲು ಮತ್ತು ಆರ್ಥಿಕತೆಯನ್ನು ಪುನಃ ಆರಂಭಿಸಲು ಇದನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ನಮ್ಮ ಮನವಿಯನ್ನು ವಿರೋಧಿಸಿದ ಬಳಿಕ ಯೋಜಿತ ನಗದು ಕೊರತೆಯನ್ನು ಶೇ 5.38ಕ್ಕೆ ತೆಗೆದುಕೊಂಡು ಹೆಚ್ಚುವರಿ 4.2 ಲಕ್ಷ ಕೋಟಿ ರೂ. ಎರವಲು ಪಡೆಯಲು ಸರ್ಕಾರ ಅಂತಿಮವಾಗಿ ನಿರ್ಧರಿಸಿದೆ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು.
ಬಡವರಿಗೆ ಪರಿಹಾರ ಒದಗಿಸಲು ಮತ್ತು ಆರ್ಥಿಕತೆ ಪುನಃ ಆರಂಭಿಸಲು ಈ ಮೊತ್ತವನ್ನು ಬಳಸದ ಹೊರತು ಹೆಚ್ಚು ಸಾಲ ಪಡೆಯುವುದು ಸಾಕಾಗುವುದಿಲ್ಲ. 2020-21ರ ಪರಿಷ್ಕೃತ ಖರ್ಚು ಬಜೆಟ್ಗೆ ನಾವು ಎದುರು ನೋಡುತ್ತೇವೆ ಎಂದು ಹೇಳಿದರು.
ಹಲವು ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಮಂಡಿಸಿದ ಇಂತಹ ಭಾವನೆಗಳನ್ನು ಕೇಂದ್ರ ನಿನ್ನೆ ಪ್ರತಿಧ್ವನಿಸುವಂತಹ ನಿರ್ಧಾರ ತೆಗೆದುಕೊಂಡಿದೆ. 2020-21ರಲ್ಲಿ ಹೆಚ್ಚಿನ ಎರವಲು ಪಡೆಯುವಂತೆ ಮನವಿ ಮಾಡಿದ್ದರು.
ನಮ್ಮ ದೃಷ್ಟಿಯಲ್ಲಿ ಬಜೆಟ್ನ ಹಣಕಾಸಿನ ಕೊರತೆಯು ಶೇ 3.5 ರಷ್ಟಿದ್ದು, ಈ ಅಸಾಮಾನ್ಯ ಸಂದರ್ಭದಲ್ಲಿ ನಿರ್ಬಂಧ ಆಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.