ನವದೆಹಲಿ: 2020-21ರ ಆರ್ಥಿಕ ವರ್ಷದ ಬೆಳವಣಿಗೆ ಋಣಾತ್ಮಕ ಕಡೆಗೆ ಸಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚು ದ್ರವ್ಯತೆಯನ್ನು ಏಕೆ ತುಂಬುತ್ತಿದೆ ಎಂದು ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ನ ಹಿರಿಯ ಮುಖಂಡ, ಬೇಡಿಕೆ ಕುಸಿದಿದೆ ಎಂದು ಆರ್‌ಬಿಐ ಗವರ್ನರ್ ಹೇಳುತ್ತಾರೆ. 2020-21ರಲ್ಲಿ ಬೆಳವಣಿಗೆ ಋಣಾತ್ಮಕ ಪ್ರದೇಶದತ್ತ ಸಾಗಿದೆ. ಹಾಗಿದ್ದರೇ ಏಕೆ ಹೆಚ್ಚು ದ್ರವ್ಯತೆಯನ್ನು ತುಂಬುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಶಕ್ತಿಕಾಂತ ದಾಸ್ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಬೇಕು - ನಿಮ್ಮ ಕರ್ತವ್ಯವನ್ನು ಮಾಡಿ, ಹಣಕಾಸಿನ ಕ್ರಮಗಳನ್ನು ತೆಗೆದುಕೊಳ್ಳಿ ಎಂದು. ಆರ್‌ಬಿಐ ಹೇಳಿಕೆಯ ನಂತರವೂ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಶೇ 1ಕ್ಕಿಂತ ಕಡಿಮೆ ಹಣಕಾಸಿನ ಪ್ರಚೋದನೆ ಹೊಂದಿರುವ ಪ್ಯಾಕೇಜ್‌ಗೆ ಸರ್ಕಾರ ಅಥವಾ ಹಣಕಾಸು ಸಚಿವ (ನಿರ್ಮಲಾ ಸೀತಾರಾಮನ್) ತಮ್ಮನ್ನು ಶ್ಲಾಘಿಸುತ್ತಾರೆಯೇ? ವ್ಯಂಗ್ಯವಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ದೂಷಿಸಿದ ಚಿದಂಬರಂ, ಸರ್ಕಾರವು ಆರ್ಥಿಕತೆಯನ್ನು ಋಣಾತ್ಮಕ ಬೆಳವಣಿಗೆಯತ್ತ ಹೇಗೆ ತೆಗೆದುಕೊಂಡು ಹೋಗಿದೆ ಎಂಬುದರ ಬಗ್ಗೆ ಆರ್‌ಎಸ್‌ಎಸ್ ನಾಚಿಕೆಪಡಬೇಕು ಎಂದು ಟೀಕಿಸಿದರು.