ನವದೆಹಲಿ: ಕೇಂದ್ರ ಸರ್ಕಾರ ಆರ್‌ಬಿಐ ಬಾಂಡ್ ಯೋಜನೆಯನ್ನು ಸ್ಥಗಿತಗೊಳಿಸಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಟೀಕಿಸಿದ್ದಾರೆ. ಇದು ಮತ್ತೊಂದು 'ಕ್ರೂರ ಹೊಡೆತ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಬಿಐ ಬಾಂಡ್‌ಗಳ ಮೇಲಿ ಶೇ.7.75ರಷ್ಟು ಬಡ್ಡಿದರವನ್ನು ಕಡಿತ ಮಾಡುತ್ತಿರುವುದು ವಿಶೇಷವಾಗಿ ಹಿರಿಯ ನಾಗರಿಕರಿಗೆ ಹೊಡೆತ ನೀಡಲಿದೆ. ಸರ್ಕಾರದ ಈ ಆದೇಶವನ್ನು ಜನರು ತೀವ್ರವಾಗಿ ವಿರೋಧಿಸಬೇಕು. ತಮ್ಮ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯುವಂತ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮತ್ತು ಸಣ್ಣ ಉಳಿತಾಯದ ಮೇಲಿ ಬಡ್ಡಿದರವನ್ನು ಕಡಿತ ಮಾಡಿದ ನಂತರ ಆರ್‌ಬಿಐ ಬಾಂಡ್ ಸ್ಥಗಿತದ ನಿರ್ಧಾರ ಮಾಡಿರುವುದು ಜನರಿಗೆ ನೀಡಿದ ಕ್ರೂರ ಹೊಡೆತವಾಗಿದೆ ಎಂದು ಪಿ.ಚಿದಂಬರಂ ವಿಶ್ಲೇಷಿಸಿದ್ದಾರೆ.
ಬಾಂಡ್‌ಗಳನ್ನು ಸ್ಥಗಿತಗೊಳಿಸಿದ್ದ ಮರುದಿವೇ ನಾನು ಪ್ರತಿಭಟನೆ ನಡೆಸಿದ್ದೇನೆ. ಅದರ ಮರುದಿನವೇ ಆರ್‌ಬಿಐ ಬಾಂಡ್‌ಗಳ ಮೇಲಿದ್ದ ಬಡ್ಡಿದರವನ್ನು 8 ರಿಂದ 7.75ಕ್ಕೆ ಇಳಿಸಲಾಗಿತ್ತು. ತೆರಿಗೆ ಕಡಿತ ಬಳಿಕ ಬಾಂಡ್ ಬಡ್ಡಿ ದರ ಶೇಕಡಾ 4.4ಕ್ಕೆ ತಲುಪಲಿದೆ. ಇದೀಗ ಇದನ್ನೂ ಜನರಿಂದ ಕಸಿದುಕೊಳ್ಳುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಸರ್ಕಾರ ಸುರಕ್ಷಿತವಾದ ಅಪಾಯ ಮುಕ್ತ ಹೂಡಿಕೆಯ ಆಯ್ಕೆಯನ್ನು ದೇಶದ ಜನತೆ ನೀಡುತ್ತದೆ. ಇಂತಹ ಆರ್‌ಬಿಐ ಬಾಂಡ್ ಯೋಜನೆ 2003 ರಿಂದಲೂ ಇದೆ ಎಂದು ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಿವರಿಸಿದ್ದಾರೆ.