ಕರ್ನಾಟಕ

karnataka

ETV Bharat / business

ತೆರೆದ ಮಾರುಕಟ್ಟೆಗಳಲ್ಲಿ ಮಾಂಸ ಮಾರಾಟಕ್ಕೆ ಕೋರ್ಟ್​ ಬ್ರೇಕ್​... ನಾನ್​ವೆಜ್​ ಕೇಳದಂತೆ ಹೋಟೆಲ್​ಗಳ ಮನವಿ - ಚಿಕನ್​ ಮೇಲೆ ಕೊರೊನಾ ವೈರಸ್ ಪ್ರಭಾವ

ಉತ್ತರ ಪ್ರದೇಶದ ಲಖನೌ ಮತ್ತು ಮುಜಾಫರ್​ನ​ಗರದಲ್ಲಿ ನ್ಯಾಯಮೂರ್ತಿಗಳು ಕಳೆದ ವಾರ, 'ತೆರೆದ ಪ್ರದೇಶಗಳಲ್ಲಿ ಮಾಂಸ ಮಾರಾಟ ಮಾಡದಂತೆ' ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ಇದರ ಪರಿಣಾಮವಾಗಿ ಅನೇಕ ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳು ಮಾಂಸಾಹಾರಿ ಉತ್ಪನ್ನಗಳನ್ನು ಕೇಳದಂತೆ ಗ್ರಾಹಕರಿಗೆ ಕೋರಿ ನೋಟಿಸ್ ಬೋರ್ಡ್​ ಹಾಕಿದ್ದಾರೆ.

chicken
ಚಿಕನ್

By

Published : Mar 10, 2020, 7:55 PM IST

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಕೋಳಿ ಮಾರಾಟದ ಧಾರಣೆಯು ಶೇ. 35ರಷ್ಟು ಕುಸಿದಿದೆ ಎಂದು ಕೋಳಿ ಉದ್ಯಮದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೋಳಿ ಮಾಂಸ ಸೇವಿಸಿದರೇ ಮಾರಣಾಂತಿಕ ಕೊರೊನಾ ಹರಡುತ್ತದೆ ಎಂಬ ವದಂತಿಗಳನ್ನು ತಡೆಯಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದರೂ ಬೆಲೆ ಇಳಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಉತ್ತರ ಪ್ರದೇಶದ ಲಖನೌ ಮತ್ತು ಮುಜಾಫರ್​ ನ​ಗರದಲ್ಲಿ ನ್ಯಾಯಮೂರ್ತಿಗಳು ಕಳೆದ ವಾರ, 'ತೆರೆದ ಪ್ರದೇಶಗಳಲ್ಲಿ ಮಾಂಸ ಮಾರಾಟ ಮಾಡದಂತೆ' ನಿಷೇಧ ಹೇರಿರುವ ಆದೇಶ ಹೊರಡಿಸಿದರು. ಇದರ ಪರಿಣಾಮವಾಗಿ ಅನೇಕ ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳು ಮಾಂಸಾಹಾರಿ ಉತ್ಪನ್ನಗಳನ್ನು ಕೇಳದಂತೆ ಗ್ರಾಹಕರಿಗೆ ಕೋರಿ ನೋಟಿಸ್ ಬೋರ್ಡ್​ ತಗುಲು ಹಾಕಿದ್ದಾರೆ.

ಅನೇಕ ಸಗಟು ಹಾಗೂ ಆಹಾರ ಕಂಪನಿಗಳು ಬೆಲೆ ಇಳಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಚಿಕನ್ ಮಾರಾಟವು ಶೇ. 30ರಷ್ಟು ಕುಸಿತ ಕಂಡಿದೆ. ಬಾಯಿಲರ್ ಚಿಕನ್ ಮಾರಾಟದ ದರದಲ್ಲಿ ಶೇ. 50ರಷ್ಟು ಕುಸಿದಿದೆ ಎಂದು ಹೇಳಿದ್ದಾರೆ.

ಕೆಲವು ಸರ್ಕಾರಿ ಇಲಾಖೆಗಳು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಜನರು ಕೋಳಿಯನ್ನು ತಮ್ಮ ಆಹಾರದಿಂದ ಹೊರಗಿಡುತ್ತಿದ್ದಾರೆ ಎಂದು ಪಂಜಾಬ್ ಮೂಲದ ದರ್ಶನ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜೈಸಿಂಗ್ಹಾನಿ ಕಿಡಿಕಾರಿದ್ದಾರೆ.

ಕರ್ನಾಟಕವು ಪ್ರತಿದಿನ ಸುಮಾರು 65 ಕೋಟಿ ರೂ.ಯಷ್ಟು ನಷ್ಟ ಅನುಭವಿಸುತ್ತಿದೆ. ಫೆಬ್ರವರಿ ಆರಂಭದಲ್ಲಿ ಕೊರೊನಾ ವೈರಸ್ ಹರಡಲು ಕೋಳಿ ಮಾಂಸ ಕೂಡ ಕಾರಣವಾಗಿದೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಹೀಗಾಗಿ, ಉದ್ಯಮಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ಕರ್ನಾಟಕ ಸಹಕಾರಿ ಕೋಳಿ ಒಕ್ಕೂಟದ ಅಧ್ಯಕ್ಷ ಡಿ.ಕೆ. ಕಾಂತರಾಜು ಮಾಹಿತಿ ನೀಡಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ ಪ್ರತಿ ಕೆ.ಜಿ. ಮಾಂಸಕ್ಕೆ 70 ರೂ. ಇದ್ದ ಬೆಲೆ 45 ರೂ.ಗೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details