ಕರ್ನಾಟಕ

karnataka

ETV Bharat / business

ಭಾರತಕ್ಕಿಂತ ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಅಗ್ಗ, ಸುಲಭ.. ಪ್ರವೇಶ, ಎಂಟ್ರಿ ಪರೀಕ್ಷೆ ಹೇಗೆ? - ಭಾರತೀಯ ವೈದ್ಯಕೀಯ ಮಂಡಳಿ

ಕಳೆದ 2004ರಿಂದ ಚೀನಾ ಇಂಗ್ಲೀಷ್​ನಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್​ಗಳನ್ನು ಆರಂಭಿಸಿ ವಿದೇಶಿ ವಿದ್ಯಾರ್ಥಿಗಳನ್ನೂ ಸೆಳೆಯುತ್ತಿದೆ. ಏಷ್ಯಾದ ಪ್ರಮುಖ ಉಪಖಂಡವಾದ ಭಾರತವನ್ನು ಗುರಿಯಾಗಿಸಿಕೊಂಡು ವೈದ್ಯಕೀಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದೆ. ಖಾಸಗಿ ಏಜೆಂಟರ​ ಮೂಲಕ ಭಾರತದ ಸಾವಿರಾರು ಮೆಡಿಕಲ್​ ಆಕಾಂಕ್ಷಿ ವಿದ್ಯಾರ್ಥಿಗಳು ಚೀನಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಓದುವ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವರ್ಷದಲ್ಲಿ ಎರಡು ಬಾರಿ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ (ಎಫ್​ಎಂಜಿಇ) ನಡೆಸುತ್ತದೆ.

ಸಾಂದರ್ಭಿಕ ಚಿತ್ರ

By

Published : Jul 28, 2019, 1:09 PM IST

ನವದೆಹಲಿ:ಮೆಡಿಕಲ್ ಓದಬೇಕೆಂಬ ಲಕ್ಷಾಂತರ ವಿದ್ಯಾರ್ಥಿಗಳಿಗೆ ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ, ಗೊಂದಲಮಯವಾದ ಪ್ರವೇಶಾತಿ ಸೇರಿದಂತೆ ಇತರೆ ಕಾರಣಗಳಿಂದ ಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಚೀನಾದತ್ತ ಮುಖ ಮಾಡ್ತಿದ್ದಾರೆ.

ವಿದೇಶಗಳಲ್ಲಿ ಮೆಡಿಕಲ್​ ಓದುವ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವರ್ಷದಲ್ಲಿ ಎರಡು ಬಾರಿ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ (ಎಫ್​ಎಂಜಿಇ) ನಡೆಸುತ್ತದೆ. ಜೂನ್​ ಮತ್ತು ಡಿಸೆಂಬರ್​ನಲ್ಲಿ ನಡೆಯಲಿರುವ ಪರೀಕ್ಷೆಯು 300 ಅಂಕಗಳಿಂದ ಕೂಡಿರುತ್ತದೆ.

ಕಳೆದ 2004ರಿಂದ ಚೀನಾ ಇಂಗ್ಲೀಷ್​ನಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್​ಗಳನ್ನು ಆರಂಭಿಸಿ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಏಷ್ಯಾದ ಪ್ರಮುಖ ಉಪಖಂಡವಾದ ಭಾರತವನ್ನು ಗುರಿಯಾಗಿಸಿಕೊಂಡು ವೈದ್ಯಕೀಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದೆ. ಖಾಸಗಿ ಏಜೆಂಟರ ಮೂಲಕ ಭಾರತದ ಸಾವಿರಾರು ಮೆಡಿಕಲ್​ ಆಕಾಂಕ್ಷೆಯ ವಿದ್ಯಾರ್ಥಿಗಳು ಚೀನಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

2019-20ರಲ್ಲಿ ಖಾಸಗಿ ಮತ್ತು ಸರ್ಕಾರಿ ಒಳಗೊಂಡ ಒಟ್ಟು 573 ಕಾಲೇಜುಗಳಲ್ಲಿ ಲಭ್ಯವಿರುವುದು 84,127 ಸೀಟುಗಳು ಮಾತ್ರ. ಹೀಗಾಗಿ, ಭಾರತೀಯ ವಿದ್ಯಾರ್ಥಿಗಳು ಸುಲಭವಾಗಿ ಸಿಗುವ ಮತ್ತು ಕಡಿಮೆ ವೆಚ್ಚದ ಚೀನಾ ಶಿಕ್ಷಣದತ್ತ ಹೊರಳುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ವಿದೇಶಿ ಶಿಕ್ಷಣದಲ್ಲಿ ರಷ್ಯಾ ಮತ್ತು ಪೂರ್ವ ಯೂರೋಪ ರಾಷ್ಟ್ರಗಳನ್ನು ಚೀನಾ ಹಿಂದಿಕ್ಕಿದೆ.

ಚೀನಾದಲ್ಲಿ ಎಂಬಿಬಿಎಸ್​ ಪದವಿ ಪಡೆಯಲು ಪ್ರತಿ ವರ್ಷ ಭಾರತದ 7,000ರಿಂದ 8,000 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಸವಲತ್ತುಗಳನ್ನೂ ಕಲ್ಪಿಸುತ್ತಿವೆ.

ಭಾರತದ ಸಾರ್ವಜನಿಕ ವೈದ್ಯಕೀಯ ಕಾಲೇಜು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯದವರಿಗೆ ಚೀನಾ ಉತ್ತಮವಾದ ಆಯ್ಕೆಯಾಗಿದೆ. ಭಾರತದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುವುದಕ್ಕಿಂತ ಚೀನಾದಲ್ಲಿ ಅಧ್ಯಯನ ಮಾಡುವುದು ಅಗ್ಗವಾಗಿದೆ. ಅಲ್ಲದೆ, ರಷ್ಯಾದ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಇಲ್ಲಿನ ಕೆಲವು ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ಮಾನದಂಡಗಳಡಿ ಹೆಚ್ಚಿನ ರೇಟ್ ಪಡೆದಿವೆ ಎನ್ನುತ್ತಾರೆ ಚೀನಾದಲ್ಲಿ ಓದಿದ ಮೆಡಿಕಲ್ ವಿದ್ಯಾರ್ಥಿ.

ಚೀನಾ ಸರ್ಕಾರ ಈ ವರ್ಷದಲ್ಲಿ 45 ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಎಂಬಿಬಿಎಸ್ ಪದವಿಗಾಗಿ ಪ್ರವೇಶ ಪಡೆಯಲು ಅನುಮತಿ ನೀಡಿದೆ. ಎಂಬಿಬಿಎಸ್ ಕೋರ್ಸ್‌ಗಳನ್ನು ದ್ವಿಭಾಷಾ (ಇಂಗ್ಲಿಷ್/ಚೈನೀಸ್) ಮಾದರಿಯಲ್ಲಿ ಬೋಧಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಸರಳ ಕಾನೂನುಗಳಿಂದ ವಿದೇಶಿಗರು ಚೀನದತ್ತ ಆಕರ್ಷಿತರಾಗುತ್ತಿದ್ದಾರೆ.

ABOUT THE AUTHOR

...view details