ಕರ್ನಾಟಕ

karnataka

ETV Bharat / business

ಇದು ಮೋದಿಗೂ ಗೊತ್ತು... ಸಿಜಿಎಸ್​ಟಿ ಸಂಗ್ರಹದಲ್ಲಿ 1.92 ಲಕ್ಷ ಕೋಟಿ ರೂ. ಗೋತಾ..!

2019-20ರ ಆರ್ಥಿಕ ವರ್ಷದ ಎಪ್ರಿಲ್-ನವೆಂಬರ್ ಅವಧಿಯಲ್ಲಿ ನೈಜ ಸಿಜಿಎಸ್​ಟಿ ಸಂಗ್ರಹವು ₹ 3,28,365 ಕೋಟಿಯಷ್ಟಿದೆ. ಈ ಅವಧಿಯಲ್ಲಿ ಬಜೆಟ್ ಅಂದಾಜಿನಲ್ಲಿ ₹ 5,26,000 ಕೋಟಿಯಷ್ಟು ಸಂಗ್ರಹ ಆಗಬೇಕಿತ್ತು. ನಿರೀಕ್ಷಿತ ಅಂದಾಜಿನಲ್ಲಿ ₹ 1.92 ಲಕ್ಷ ಕೋಟಿಯಷ್ಟು ಕೊರತೆ ಕಂಡುಬಂದಿದೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

CGST
ಸಿ​​ಜಿಎಸ್​ಟಿ

By

Published : Dec 10, 2019, 7:36 PM IST

ನವದೆಹಲಿ: ಸಿಜಿಎಸ್​​ಟಿ ಸಂಗ್ರಹವು 2019-20ರ ಎಪ್ರಿಲ್-ನವೆಂಬರ್ ಅವಧಿಯಲ್ಲಿ 40 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

2019-20ರ ಆರ್ಥಿಕ ವರ್ಷದ ಎಪ್ರಿಲ್-ನವೆಂಬರ್ ಅವಧಿಯಲ್ಲಿ ನೈಜ ಸಿಜಿಎಸ್​ಟಿ ಸಂಗ್ರಹವು ₹ 3,28,365 ಕೋಟಿಯಷ್ಟಿದೆ. ಈ ಅವಧಿಯಲ್ಲಿ ಬಜೆಟ್ ಅಂದಾಜಿನಲ್ಲಿ ₹ 5,26,000 ಕೋಟಿಯಷ್ಟು ಸಂಗ್ರಹ ಆಗಬೇಕಿತ್ತು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

2018-19ರಲ್ಲಿ ಸಿಜಿಎಸ್​ಟಿ ಸಂಗ್ರಹವು ಎಪ್ರಿಲ್​-ನವೆಂಬರ್ ತಿಂಗಳ ನಡುವೆ ₹ 6,03,900 ಲಕ್ಷ ಕೋಟಿ ಆಗಲಿದೆ ಎಂಬ ಅಂದಾಜು ಇರಿಸಿಕೊಳ್ಳಲಾಗಿತ್ತು. ಆದರೆ, ಅಂತಿಮವಾಗಿ ₹4,57,534 ಕೋಟಿಯಷ್ಟು ಮಾತ್ರ ಸಂಗ್ರಹವಾಗಿತ್ತು. ಆದರೆ, ಈ ವರ್ಷ ಇನ್ನಷ್ಟೂ ಇಳಿಕೆಯಾಗಿದೆ ಎಂದು ಹೇಳಿದರು.

ಜಿಎಸ್​​ಟಿ ತೆರಿಗೆ ವಂಚನೆಯನ್ನು ತಡೆಗಟ್ಟಲು ಮಾನಿಟರಿಂಗ್ ಪರಿಕರಗಳನ್ನು ಸಾಕಷ್ಟು ಬಲಪಡಿಸಲಾಗಿದೆ. ಸಿಸ್ಟಮ್ ಆಧಾರಿತ ವಿಶ್ಲೇಷಣಾತ್ಮಕ ಪರಿಕರಗಳು ಹಾಗೂ ರಚನಾತ್ಮಕ ಸಿಸ್ಟಮ್​ ಬುದ್ಧಿಮತ್ತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಸಿಬಿಐಸಿಯಲ್ಲಿ ಡೈರೆಕ್ಟೊರೇಟ್ ಜನರಲ್ ಆಫ್ ಅನಾಲಿಟಿಕ್ಸ್ ಆ್ಯಂಡ್​ ರಿಸ್ಕ್ ಮ್ಯಾನೇಜ್ಮೆಂಟ್ (ಡಿಜಿಎಆರ್​ಎಂ) ಅನ್ನು ಸ್ಥಾಪಿಸಲಾಗಿದೆ. ಸಾಗಣೆಯಲ್ಲಿನ ಸರಕುಗಳ ಸಮರ್ಪಕ ಪರಿಶೀಲನೆಗೆ ಇ-ವೇ ಬಿಲ್ ಸ್ಕ್ವಾಡ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಠಾಕೂರ್ ಹೇಳಿದ್ರು.

ABOUT THE AUTHOR

...view details