ನವದೆಹಲಿ: ಜಿಎಸ್‌ಟಿ ಕೊರತೆ ನೀಗಿಸಲು ಕೇಂದ್ರ ಸರ್ಕಾರ ರಾಜ್ಯಗಳ ಪರವಾಗಿ 1.10 ಲಕ್ಷ ಕೋಟಿ ರೂ. ಸಾಲ ಎತ್ತಲು ಒಪ್ಪಿದ ಬಳಿಕ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಕೇಂದ್ರದ ನಡೆಯನ್ನು ಶ್ಲಾಘಿಸಿ, 'ಮೊದಲ ಬಾರಿಗೆ ಸರಿಯಾದ ಹೆಜ್ಜೆ ತೆಗೆದುಕೊಂಡಿದೆ. ಈಗ ಅದನ್ನು ಪುನಃ ಸ್ಥಾಪಿಸಲು ಕೆಲಸ ಮಾಡಬೇಕು. ಅವರೊಂದಿಗೆ ನಂಬಿಕೆ ಇರಿಸಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.
'ಹೃದಯ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ' ಎಂದು ಟ್ವೀಟ್ ಮಾಡಿದ ಅವರು, ರಾಜ್ಯಗಳ ಸಾಲವನ್ನು ಹೇಗೆ ಪೂರೈಸಲಾಗುತ್ತದೆ ಮತ್ತು ಮರುಪಾವತಿ ಮಾಡುವ ವಿಧಾನ ಸ್ಪಷ್ಟಪಡಿಸುವಂತೆ ಕೇಂದ್ರವನ್ನು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಒತ್ತಾಯಿಸಿದ್ದಾರೆ.
ಸರಿಯಾದ ಮೊದಲ ಹೆಜ್ಜೆ ಇಟ್ಟ ಬಳಿಕ, ಎರಡನೇ ಹೆಜ್ಜೆ ಇಡಲು ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಶ್ವಾಸವನ್ನು ಪುನಃ ಸ್ಥಾಪಿಸಲು ನಾನು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಹಣಕಾಸು ಸಚಿವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.